ಐಪಿಎಲ್ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಈ ರಾಯಲ್ಸ್ ಕದನಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜುಗೊಂಡಿದೆ.
ಪ್ರಸ್ತುತದ ಋತವಿನಲ್ಲಿ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್ಸಿಬಿ ಈವರೆಗೂ ಐದು ಪಂದ್ಯಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಕಳೆದ ಆವೃತ್ತಿಯಲ್ಲಿ ಪ್ಲೇಆಫ್ಗೆ ಲಗ್ಗೆ ಇಟ್ಟಿದ್ದ ರಾಜಸ್ಥಾನ ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿದೆ. ಆಡಿರುವ ಎಂಟು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಅಂಕಪಟ್ಟಿಯಲ್ಲೂ 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಪ್ಲೇಆಫ್ಗೆ ತಲುಪಲು ರಾಜಸ್ಥಾನ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಒಂದೇ ಒಂದು ಪಂದ್ಯವನ್ನು ಸೋತರು ಪ್ಲೇಆಫ್ ಹಾದಿ ಜಟಿಲವಾಗಲಿದೆ. ಏತನ್ಮಧ್ಯೆ ಇಂದಿನ ಪಂದ್ಯಕ್ಕೂ ಮೊದಲೇ ಆರ್ಸಿಬಿಯ ಈ ದಾಖಲೆ ಫ್ಯಾನ್ಸ್ಗಳ ಆತಂಕಕ್ಕೆ ಕಾರಣವಾಗಿದೆ.
ರಾಯಲ್ ಚಾಲೆಂಜಸ್ ಬೆಂಗಳೂರು ತಂಡ ರಾಜಸ್ಥಾನ ವಿರುದ್ಧ ಆಡಿರುವ ಕಳೆದ ನಾಲ್ಕು ರಾತ್ರಿ ಹೊತ್ತಿನ ಪಂದ್ಯಗಳಲ್ಲಿ ಒಂದನ್ನೂ ಗೆದ್ದುಕೊಂಡಿಲ್ಲ ಕೇವಲ ಹಗಲು ಹೊತ್ತಿನಲ್ಲಿ ಆಡಿರುವ ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದಿದ್ದ ಹಗಲು ಹೊತ್ತಿನ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸಿತ್ತು. ಇಂದಿನ ಪಂದ್ಯ ರಾತ್ರಿ ನಡೆಯಲಿದ್ದು ಫ್ಯಾನ್ಸ್ಗಳಿಗೆ ಆತಂಕ ಹೆಚ್ಚಿಸಿದೆ.
ಇದರೊಂದಿಗೆ ತವರಿನಲ್ಲಿ ಈವರೆಗೂ ಆಡಿರುವ 3 ಪಂದ್ಯಗಳಲ್ಲೂ ಆರ್ಸಿಬಿ ಸೋಲನ್ನು ಕಂಡಿದ್ದ ಆರ್ಸಿಬಿಗರಿಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.