ಬೆಂಗಳೂರು: ನಗರದ ಹೃದಯ ಭಾಗದಲ್ಲಿ ಇರುವ ಪ್ರತಿಷ್ಠಿತ ಕಾಲೇಜ್ ನಲ್ಲಿ ಒಂದಾದ ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಸೃಜನ ಆರ್.ಸಿ. ನಿರ್ವಹಣಾ ವೇದಿಕೆ ಮತ್ತು ಸೃಜನ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ವೇದಿಕೆ ಸಾಮರ್ಥ್ಯ 2025 ರಾಷ್ಟ್ರಮಟ್ಟದ ನಿರ್ವಹಣಾ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಕು.ಮಂಜುಶ್ರೀ ಎನ್. ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಏಜಾಜ್ ಅಹಮದ್ ಖಾನ್ ಹಾಗೂ ಡಾ ಶೋಭಾ . ಸಿ. ಡಾ. ಅನಿತಾ ಕೆ.ಪಿ. ದೀಪ ಬೆಳಗುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಆಯುಕ್ತರಾದ ಕು.ಮಂಜುಶ್ರೀ.ಎನ್. ವಿದ್ಯಾರ್ಥಿಗಳಿಗೆ ನನ್ನ ವಿದ್ಯಾರ್ಥಿಯ ಜೀವನವು ಇಂತಹ ಹಬ್ಬಗಳು ಬಂದಾಗ ನಾನು ಬಹಳ ಸಂತೋಷವಾಗಿ ಖುಷಿಯಾಗಿ ಕಳೆದೆ. ವಿದ್ಯಾರ್ಥಿಯ ಜೀವನ ಬಹಳ ಮುಖ್ಯ ಘಟ್ಟ ಹಾಗಾಗಿ ನಿಮ್ಮ ಮುಂದಿನ ಉತ್ತಮ ಜೀವನ ಉತ್ತಮ ಸಮಾಜ ನಿರ್ಮಾಣವಾಗಲಿ ಮತ್ತು ಸಮಾಜಕ್ಕೆ ಬೆಳಕು ನೀಡುವಂತದ್ದಾಗಲಿ ಹಾಗೆ ಉನ್ನತ ಶಿಕ್ಷಣ ಕೂಡ ಉತ್ತಮ ಜೀವನ ಕಟ್ಟಿಕೊಳ್ಳಲು ಬಹಳ ಅವಶ್ಯಕ ನಮ್ಮ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಪಠ್ಯ ಪುಸ್ತಕಗಳ ಜೊತೆಗೆ ನುರಿತ ಉಪನ್ಯಾಸಗಳಿಂದ ವಿಷಯವಾರು ಕ್ರೂಡೀಕರಿಸಿದ ಜ್ಞಾನವನ್ನು ಸಾಮಾಜಿಕ ಜಾಲ ತಾಣಗಳಲ್ಲಿಯೂ ಹರಿ ಬಿಡಲಾಗಿದೆ ಶಿಕ್ಷಣ ಇಲಾಖೆಯ ಪದವಿ ಮುಗಿಸಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಮಾದರಿಯಲ್ಲೆ ಪ್ರಶ್ನೆ ಪತ್ರಿಕೆಗಳ ಜೊತೆ ಉತ್ತರ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಬಹಳ ಸರಳವಾಗಲಿದೆ ಎಂದು ಜಾಲತಾಣದ "ವಿಜಯಿ ವೈಭವಿ" ಈ ಹೆಸರನ್ನು ನಮೂದಿಸಿದರೆ ನಿಮಗೆ ಮಾಹಿತಿ ಸಿಗಲಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಏಜಾಜ್ ಅಹಮದ್ ಖಾನ್. ಈ ಎರಡು ದಿನಗಳ ಕಾಲ ಮಟ್ಟದ ನಿರ್ವಹಣಾ ಮತ್ತು ಸಾಂಸ್ಕೃತಿಕ ಉತ್ಸವ , ಸಾಮರ್ಥ್ಯ 2025 ""ವಾಣಿಜ್ಯ ಮತ್ತು ಕಾರ್ಯ ನಿರ್ವಹಣಾ ಮತ್ತು ಸಾಂಸ್ಕೃತಿಕ ಉತ್ಸವ ಹಬ್ಬದಲ್ಲಿ ಸುಮಾರು 75ಕ್ಕೂ ಹೆಚ್ಚು ಕಾಲೇಜುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದು ಅದರಲ್ಲಿ ಕೆಲವೇ ಕೆಲವು ಕಾಲೇಜುಗಳ ತಂಡಗಳಿಗೆ ಬಹುಮಾನಗಳಿಗೆ ಅರ್ಹರಾಗಿದ್ದು. 'ಕ್ರಿಸ್ತು ಜಯಂತಿ ಕಾಲೇಜು" " ಸೆಂಟ್ ಕ್ಲಾರೆಟ್ ಕಾಲೇಜ್" ' ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾಗಡಿ' 'ಸೆಂಟ್ ಜೋಸೆಫ್ ಕಾಲೇಜ್' ರೋಲಿಂಗ್ ಟ್ರೋಪಿ ಪ್ರಶಸ್ತಿಯ ಕಿರೀಟವನ್ನು ತನ್ನದಾಗಿಸಿಕೊಂಡಿವೆ ಎಂದು ತಿಳಿಸಿದರು.
ಈ ವಿವಿಧ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೂ ಬೋಧಕರಿಗೂ ಪಾಲ್ಗೊಂಡಿದ್ದಕ್ಕೆ ತಮ್ಮಗೆ ಚಿರಋಣಿ ಎಂದರು ಈ ವಿದ್ಯಾರ್ಥಿಯ ಪ್ರತಿಭಾವಂತ ವಿದ್ಯಾರ್ಥಿಗಳು ಸಾಂಸ್ಕೃತಿಕ ಮತ್ತು ಕಲೆ ನಮ್ಮ ನಾಡಿಗೆ ನಮ್ಮ ದೇಶಕ್ಕೆ ಬಹಳಷ್ಟು ಮುಖ್ಯ ಏಕೆಂದರೆ ಸಾಹಿತ್ಯ ಹುಟ್ಟುವುದು ಇಂಥ ಒಂದು ಕಾರ್ಯಕ್ರಮದಲ್ಲಿ ಆ ಸಾಹಿತ್ಯದ ಮಹತ್ವ ನಮಗೆ ತಿಳಿದುಬರುವುದು ಇಂತಹ ಕಾರ್ಯಕ್ರಮಗಳು ಎಲ್ಲಾ ಕಾಲೇಜು ಮಟ್ಟದಲ್ಲಿ ನಡೆಯುವಂತದ್ದಾಗಬೇಕು ಎಂದು ತಿಳಿಸಿದರು.
ಹಾಗೆ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿ ಕಾಲೇಜು ಶಿಕ್ಷಣ ನಿರ್ದೇಶಕರಾದ ಡಾ. ಶೋಭಾ ಈಗ ಕಲಿತ ಶಿಕ್ಷಣ ಮುಂದಿನ ಸಮಾಜದ ಅಭಿವೃದ್ಧಿ ಮತ್ತು ಬೆಳವಣಿಗೆಯ ಉತ್ತಮ ಸಮಾಜ ಕಟ್ಟಲು ಒಳ್ಳೆಯ ವ್ಯಕ್ತಿಗಳು ಅವಶ್ಯಕ ಹಾಗೆ ಉನ್ನತ ಮಟ್ಟದ ಶಿಕ್ಷಣ ಉನ್ನತ ಅಭ್ಯಾಸ ಉನ್ನತ ಮಟ್ಟದ ತಿಳುವಳಿಕೆಗೆ ಬೇಕಾಗಿರುವುದು ಉನ್ನತ ಶಿಕ್ಷಣ ಜೊತೆಗೆ ಕಲೆ ಮತ್ತು ಸಾಂಸ್ಕೃತಿಕ ಕ್ರೀಡೆ ಹಲವಾರು ವಿಷಯಗಳನ್ನ ತಿಳಿದುಕೊಂಡಾಗ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ ಎಂದರು
ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾದೇಶಿಕ ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಮೈಸೂರು ಡಾ. ಚಂದ್ರಶೇಖರ್ ಬಿ. ನಾನು ಇದೇ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುವಾಗ ವಿದ್ಯಾರ್ಥಿಗಳು ಜೊತೆಗೆ ಒಡನಾಟದ ಜೊತೆಗೆ ಸಿಗುವಂತಹ ಖುಷಿ ಹಾಗೂ ಸಂತೋಷ ತಂದು ಕೊಟ್ಟಿತ್ತು . ಇಂತಹ ಕಾರ್ಯಕ್ರಮಗಳು ಹಬ್ಬ ಹರಿದಿನಗಳು ಸಂಬಂಧಗಳಿಗೆ ಇದು ನೆಲೆಯಾಗುತ್ತದೆ ಸಂಪ್ರದಾಯ ಮತ್ತು ಸಂಸ್ಕಾರಗಳು ಗಟ್ಟಿಯಾಗಿ ನಿಲ್ಲುತ್ತವೆ ನಮ್ಮ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಯುವ ಪ್ರತಿಭೆಗಳು ಸಮಾಜಕ್ಕೆ ಯುವ ಪೀಳಿಗೆ ಬಹಳ ಮುಖ್ಯ ಎಂದರು.
ಈ ಕಾರ್ಯಕ್ರಮದ ಸೃಜನ ಆರ್. ಸಿ. ನಿರ್ವಹಣಾ ವೇದಿಕೆ ಸಂಚಾಲಕರಾದ ಡಾ.ಶೋಭಾ. ಸಿ..ಹಾಗೂ ಸೃಜನ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ.ಅನಿತಾ. ಕೆ.ಪಿ. ಈ ಸಂದರ್ಭದಲ್ಲಿ ಡಾ. ಲೀಲಾ ಡಾ. ಸುಧಾ ಮಧ್ವರಾಜ್ ಡಾ. ಕಟೋಟಿ, ಡಾ.ವಸೀಹ ಪಿರ ದೋಸ್ತ್ ಮತ್ತು ಡಾ.ಪ್ರೇಮಾವತಿ ಎಸ್ ಕೆ ಡಾ.ನರಸಿಂಹರಾಜು ಕೆ. ಮತ್ತು ಕಾಲೇಜಿನ ಎಲ್ಲ ಪ್ರಾಧ್ಯಾಪಕರು ಮತ್ತು n ಬೋಧಕೇತರ ವರ್ಗ ಹಾಗೂ ಸಿಬ್ಬಂದಿಗಳು ಎನ್. ಎಸ್. ಎಸ್.. ಮತ್ತು ಏನ್. ಸಿ. ಸಿ ವಿದ್ಯಾರ್ಥಿಗಳು ಕಾಲೇಜ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು