ಪ್ರಸ್ತಾವನೆ:
ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಆಡಳಿತದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ವಕ್ಫ್ ತಿದ್ದುಪಡಿ ಮಸೂದೆ, 2025 ಅನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ನಿಯಮಗಳನ್ನು ಸ್ಪಷ್ಟಪಡಿಸುವುದು, ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಚ್ಚಿನ ಜನರನ್ನು ಒಳಗೊಳಿಸಿಕೊಳ್ಳುವುದು ಮತ್ತು ವಕ್ಫ್ ಸ್ವತ್ತುಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಬಗ್ಗೆ ಗಮನ ಹರಿಸಿ ಅವುಗಳನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.
2024ರ ಆಗಸ್ಟ್ 8 ರಂದು ಲೋಕಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಲಾಯಿತು. ಈ ಮಸೂದೆಗಳು ವಕ್ಫ್ ಮಂಡಳಿಗಳು ಹೆಚ್ಚು ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಮತ್ತು ವಕ್ಫ್ ಆಸ್ತಿಗಳನ್ನು ಉತ್ತಮವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ.
1. ವಕ್ಫ್ (ತಿದ್ದುಪಡಿ) ಮಸೂದೆ, 2024
2. ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2024
ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2025 ಬ್ರಿಟಿಷ್ ಆಳ್ವಿಕೆಯಲ್ಲಿ ರಚಿಸಲಾದ ಮತ್ತು ಈಗ ಹಳೆಯದಾದ 1923 ರ ಮುಸಲ್ಮಾನ್ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಲು ಉದ್ದೇಶಿಸುತ್ತದೆ. ಈ ಹಳೆಯ ಕಾನೂನನ್ನು ತೆಗೆದುಹಾಕುವುದರಿಂದ ವಕ್ಫ್ ಕಾಯ್ದೆ, 1995 ರ ಅಡಿಯಲ್ಲಿ ಹೆಚ್ಚು ಸ್ಥಿರವಾದ, ಪಾರದರ್ಶಕ ಮತ್ತು ಜವಾಬ್ದಾರಿಯುತ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುತ್ತದೆ, ಹಳೆಯ ಕಾನೂನಿನಿಂದ ಉಂಟಾಗುವ ಗೊಂದಲವನ್ನು ನಿವಾರಿಸುತ್ತದೆ.
ವಕ್ಫ್ (ತಿದ್ದುಪಡಿ) ಮಸೂದೆ, 2025 ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ವಕ್ಫ್ ಕಾಯ್ದೆ, 1995 ಅನ್ನು ನವೀಕರಿಸುವ ಗುರಿಯನ್ನು ಹೊಂದಿದೆ. ಇದು ಹಲವಾರು ಸುಧಾರಣೆಗಳನ್ನು ಪ್ರಸ್ತಾಪಿಸುತ್ತದೆ, ಅವುಗಳೆಂದರೆ:
• ಹಿಂದಿನ ಕಾಯ್ದೆಯ ನ್ಯೂನತೆಗಳನ್ನು ನಿವಾರಿಸುವುದು ಮತ್ತು ಕಾಯ್ದೆಯ ಮರುನಾಮಕರಣದಂತಹ ಬದಲಾವಣೆಗಳನ್ನು ತರುವ/ಅಳವಡಿಸುವ ಮೂಲಕ ವಕ್ಫ್ ಮಂಡಳಿಗಳ ದಕ್ಷತೆಯನ್ನು ಹೆಚ್ಚಿಸುವುದು
• ವಕ್ಫ್ ನ ವ್ಯಾಖ್ಯಾನಗಳನ್ನು ನವೀಕರಿಸುವುದು
• ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸುವುದು
• ವಕ್ಫ್ ದಾಖಲೆಗಳ ನಿರ್ವಹಣೆಯಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೆಚ್ಚಿಸುವುದು.
ಈ ಮಸೂದೆಯ ವಿಶಿಷ್ಟ ಅಂಶಗಳು:
• 2024ರ ಆಗಸ್ಟ್ 9 ರಂದು, ಸಂಸತ್ತಿನ ಉಭಯ ಸದನಗಳು ಮಸೂದೆಯನ್ನು ಪರಿಶೀಲನೆ ಮತ್ತು ವರದಿಗಾಗಿ ಜಂಟಿ ಸಮಿತಿಗೆ ಕಳುಹಿಸಲು ಪ್ರತ್ಯೇಕ ನಿರ್ಣಯಗಳ ಮೂಲಕ ಒಪ್ಪಿಕೊಂಡವು. ಈ ಜಂಟಿ ಸಮಿತಿಯಲ್ಲಿ ಲೋಕಸಭೆಯ 21 ಸದಸ್ಯರು ಮತ್ತು ರಾಜ್ಯಸಭೆಯ 10 ಸದಸ್ಯರು ಇದ್ದರು
• ಮಸೂದೆಯು ಮಹತ್ವದ್ದಾಗಿರುವುದರಿಂದ ಮತ್ತು ವ್ಯಾಪಕ ಪರಿಣಾಮ ಬೀರುವುದರಿಂದ, ಸಮಿತಿಯು ಅದರ ನಿಬಂಧನೆಗಳ/ಪ್ರಸ್ತಾವನೆಗಳ ಬಗ್ಗೆ ಸಾರ್ವಜನಿಕರು, ತಜ್ಞರು, ಮಧ್ಯಸ್ಥಗಾರರು ಮತ್ತು ಇತರ ಸಂಬಂಧಿತ ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ನಿರ್ಧರಿಸಿತು.
• ಮೊದಲ ಸಮಿತಿ ಸಭೆ/ಅಧಿವೇಶನವು 2024ರ ಆಗಸ್ಟ್ 22 ರಂದು ನಡೆಯಿತು ಮತ್ತು ಸಭೆಗಳ ಸಮಯದಲ್ಲಿ ಸಮಾಲೋಚಿಸಿದ ಪ್ರಮುಖ ಸಂಸ್ಥೆಗಳು / ಮಧ್ಯಸ್ಥಗಾರರ ವಿವರಗಳು ಈ ಕೆಳಗಿನಂತಿವೆ:
1. ಆಲ್ ಇಂಡಿಯಾ ಸುನ್ನಿ ಜಮಿಯತುಲ್ಲಾ ಉಲಮಾ, ಮುಂಬೈ;
2. ಇಂಡಿಯನ್ ಮುಸ್ಲಿಮ್ಸ್ ಆಫ್ ಸಿವಿಲ್ ರೈಟ್ಸ್ (ಐಎಂಸಿಆರ್), ಹೊಸದಿಲ್ಲಿ
3. ಮುತ್ತಹೇದಾ ಮಜ್ಲಿಸ್-ಇ-ಉಲೇಮಾ, ಜಮ್ಮು ಮತ್ತು ಕಾಶ್ಮೀರ (ಮಿರ್ವೈಜ್ ಉಮರ್ ಫಾರೂಕ್)
4. ಝಕಾತ್ ಫೌಂಡೇಶನ್ ಆಫ್ ಇಂಡಿಯಾ
5. ಅಂಜುಮನ್ ಇ ಶಿತೇಲಿ ದಾವೂದಿ ಬೋಹ್ರಾ ಸಮುದಾಯ
6. ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಪಾಟ್ನಾ
7. ಅಖಿಲ ಭಾರತ ಪಾಸ್ಮಾಂಡಾ ಮುಸ್ಲಿಂ ಮಹಾಜ್, ದಿಲ್ಲಿ
8. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ), ದಿಲ್ಲಿ
9. ಅಖಿಲ ಭಾರತ ಸೂಫಿ ಸಜ್ಜದಾನಶಿನ್ ಕೌನ್ಸಿಲ್ (ಎಐಎಸ್ಎಸ್ಸಿ), ಅಜ್ಮೀರ್
10. ಮುಸ್ಲಿಂ ರಾಷ್ಟ್ರೀಯ ಮಂಚ್, ದಿಲ್ಲಿ
11. ಮುಸ್ಲಿಂ ಮಹಿಳಾ ಬೌದ್ಧಿಕ ಗುಂಪು - ಡಾ.ಶಾಲಿನಿ ಅಲಿ, ರಾಷ್ಟ್ರೀಯ ಸಂಚಾಲಕಿ
12. ಜಮಿಯತ್ ಉಲೇಮಾ-ಇ-ಹಿಂದ್, ದಿಲ್ಲಿ
13. ಶಿಯಾ ಮುಸ್ಲಿಂ ಧರ್ಮಗುರು ಮತ್ತು ಬೌದ್ಧಿಕ ಗುಂಪು
14. ದಾರುಲ್ ಉಲೂಮ್ ದಿಯೋಬಂದ್
• ಜಂಟಿ ಸಂಸದೀಯ ಸಮಿತಿಯು 36 ಸಭೆಗಳನ್ನು ನಡೆಸಿತು, ಅಲ್ಲಿ ಸಮಿತಿ ಸದಸ್ಯರು ವಿವಿಧ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು, ರಾಜ್ಯ ವಕ್ಫ್ ಮಂಡಳಿಗಳು ಮತ್ತು ತಜ್ಞರು / ಮಧ್ಯಸ್ಥಗಾರರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಆಲಿಸಿದರು. ಒಟ್ಟಾರೆಯಾಗಿ, ಅವರು ಭೌತಿಕ ಮತ್ತು ಡಿಜಿಟಲ್ ವಿಧಾನಗಳ ಮೂಲಕ 97,27,772 ಮನವಿ ಪತ್ರಗಳನ್ನು ಸ್ವೀಕರಿಸಿದ್ದಾರೆ.
* ವಕ್ಫ್ ತಿದ್ದುಪಡಿ ಮಸೂದೆ, 2024 ಅನ್ನು ಕೂಲಂಕಷವಾಗಿ ಪರಾಮರ್ಶಿಸಲು ಸಮಿತಿಯು ಭಾರತದ ಅನೇಕ ನಗರಗಳಲ್ಲಿ ವಿವರವಾದ ಅಧ್ಯಯನ ಭೇಟಿಗಳನ್ನು ನಡೆಸಿತು. 10 ನಗರಗಳಲ್ಲಿ ನಡೆಸಿದ ಅಧ್ಯಯನ ಭೇಟಿಗಳ ವಿವರಗಳು ಈ ಕೆಳಗಿನಂತಿವೆ
1. 26.09.2024 ರಿಂದ 01.10.2024: ಮುಂಬೈ, ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರು
2. 09.11.2024 ರಿಂದ 11.11.2024: ಗುವಾಹಟಿ, ಭುವನೇಶ್ವರ
3. 18.01.2025 ರಿಂದ 21.01.2025: ಪಾಟ್ನಾ, ಕೋಲ್ಕತಾ ಮತ್ತು ಲಕ್ನೋ
* . 26.09.2024 ರಿಂದ 01.10.2024: ಮುಂಬೈ, ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರು
2. 09.11.2024 ರಿಂದ 11.11.2024: ಗುವಾಹಟಿ, ಭುವನೇಶ್ವರ
3. 18.01.2025 ರಿಂದ 21.01.2025: ಪಾಟ್ನಾ, ಕೋಲ್ಕತಾ ಮತ್ತು ಲಕ್ನೋ
• ಸಮಿತಿಯು 284 ಪಾಲುದಾರರು, 25 ರಾಜ್ಯ ವಕ್ಫ್ ಮಂಡಳಿಗಳು, 15 ರಾಜ್ಯ ಸರ್ಕಾರಗಳು, 5 ಅಲ್ಪಸಂಖ್ಯಾತರ ಆಯೋಗಗಳು ಮತ್ತು 20 ಸಚಿವರು / ಸಂಸದರು / ಶಾಸಕರು / ಎಂಎಲ್ಸಿಗಳೊಂದಿಗೆ ಆಳವಾದ ಚರ್ಚೆಗಳನ್ನು ನಡೆಸಿತು. ಈ ಭೇಟಿಗಳು ಸಮಿತಿಯ ಸದಸ್ಯರಿಗೆ ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರದೇಶ-ನಿರ್ದಿಷ್ಟ ಒಳನೋಟಗಳನ್ನು ಸಂಗ್ರಹಿಸಲು ಸಹಾಯ ಮಾಡಿದವು.
• ವಕ್ಫ್ (ತಿದ್ದುಪಡಿ) ಮಸೂದೆಯು 44 ನಿಬಂಧನೆ/ಷರತ್ತುಗಳನ್ನು ಹೊಂದಿದೆ ಮತ್ತು ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಮಿತಿ (ಜೆಸಿಡಬ್ಲ್ಯೂಎಬಿ) 19ನಿಬಂಧನೆಗಳಲ್ಲಿ/ಷರತ್ತುಗಳಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡಿದೆ.
ಜಂಟಿ ಸಮಿತಿಯು ತನ್ನ ವರದಿಯನ್ನು 31ನೇ ಜನವರಿ 2025 ರಂದು ಲೋಕಸಭೆಯ ಗೌರವಾನ್ವಿತ ಸ್ಪೀಕರ್ ಅವರಿಗೆ ಸಲ್ಲಿಸಿತು ಮತ್ತು ವರದಿಯನ್ನು 13ನೇ ಫೆಬ್ರವರಿ 2025 ರಂದು ಸಂಸತ್ತಿನ ಉಭಯ ಸದನಗಳ ಮುಂದೆ ಇಡಲಾಯಿತು.
ಸಲ್ಲಿಸಿದ ಶಿಫಾರಸುಗಳ ಒಂದು ಉದಾಹರಣೆ:
ತಮ್ಮ ಉನ್ನತಿಗಾಗಿ ಕೆಲಸ ಮಾಡುವ ಅಖಿಲ ಭಾರತ ಪಾಸ್ಮಾಂಡಾ ಮುಸ್ಲಿಂ ಮಹಾಜ್ ಎಂಬ ಸಂಘಟನೆಯು ವಕ್ಫ್ (ತಿದ್ದುಪಡಿ) ಮಸೂದೆ, 2024 ರ ಜಂಟಿ ಸಮಿತಿಯ ಮುಂದೆ ತನ್ನ ಸಲಹೆಗಳನ್ನು ಮಂಡಿಸಿತು.
ಮೇಲ್ಮನವಿ ವ್ಯವಸ್ಥೆಯ ಅಳವಡಿಕೆ
ವಕ್ಫ್ ದಾಖಲೆಗಳ ಉತ್ತಮ ನಿರ್ವಹಣೆ
3. ಅತಿಕ್ರಮಣ ಮತ್ತು ದುರುಪಯೋಗಕ್ಕೆ ಕಠಿಣ ದಂಡಗಳು
4. ಅಕ್ರಮಗಳಲ್ಲಿ ಭಾಗಿಯಾಗಿರುವ ಮಂಡಳಿಯ ಸದಸ್ಯರನ್ನು ಅನರ್ಹಗೊಳಿಸುವುದು
5. ವಕ್ಫ್ ಆಸ್ತಿ ಆದಾಯದ ಸರಿಯಾದ ಬಳಕೆ
6. ನ್ಯಾಯಯುತ ವಿಚಾರಣೆಗಾಗಿ ಹಿರಿಯ ಕಂದಾಯ ಅಧಿಕಾರಿಗಳಿಗೆ ಅಧಿಕಾರ ನೀಡುವುದು
ತೀರ್ಮಾನ
ವಕ್ಫ್ (ತಿದ್ದುಪಡಿ) ಮಸೂದೆ, 2024 ರ ಜಂಟಿ ಸಂಸದೀಯ ಸಮಿತಿಯ ವರದಿಯು ವಕ್ಫ್ ಆಸ್ತಿ ನಿರ್ವಹಣೆಯನ್ನು ನ್ಯಾಯಯುತ, ಪಾರದರ್ಶಕ ಮತ್ತು ದಕ್ಷವಾಗಿಸುವ ಪ್ರಯತ್ನವನ್ನು ಎತ್ತಿ ತೋರಿಸುತ್ತದೆ. ಸಮಿತಿಯು ವಿಭಿನ್ನ ದೃಷ್ಟಿಕೋನಗಳನ್ನು ಆಲಿಸಿತು, ಅಧ್ಯಯನ ಭೇಟಿಗಳನ್ನು ನಡೆಸಿತು ಮತ್ತು ಮಧ್ಯಸ್ಥಗಾರರ ಕಳವಳಗಳನ್ನು ಪರಿಹರಿಸಲು ವಿವರವಾದ ಚರ್ಚೆಗಳನ್ನು ನಡೆಸಿತು. ಮಸೂದೆಯಲ್ಲಿ ಪ್ರಸ್ತಾವಿತ ಬದಲಾವಣೆಗಳು ಸಮಾಜದ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸುವ ಹೆಚ್ಚು ಅಂತರ್ಗತ ಮತ್ತು ಜವಾಬ್ದಾರಿಯುತ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿವೆ.
ಉಲ್ಲೇಖಗಳು:
• ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ