ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ "ಅಕ್ಷಯ ತೃತೀಯಾ" ಪ್ರಯುಕ್ತ ಏಪ್ರಿಲ್ 30, ಬುಧವಾರ ಬೆಳಗ್ಗೆ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಸಂಪೂರ್ಣವಾಗಿ ಶ್ರೀಗಂಧ ಲೇಪನದ ಅಲಂಕಾರವನ್ನು ಮಾಡಲಾಗುವುದು.
ವರ್ಷಕ್ಕೊಮ್ಮೆ ಆಚರಿಸುವಂತಹ ಈ ವಿಶೇಷವಾದ ಶ್ರೀಗಂಧ ಲೇಪನದ ಸೇವೆಯು ನೆರವೇರುವುದು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು, ಈ ವಿಶೇಷವಾದ ಸೇವೆಯಲ್ಲಿ ಭಾಗವಹಿಸುವಂತಹ ಭಕ್ತರು ಶ್ರೀ ಮಠದ ವಾಟ್ಸಾಪ್ ಆನ್ಲೈನ್ -9449133929 ಈ ನಂಬರ್ ಮುಖಾಂತರ ಸೇವೆ ಸಲ್ಲಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು.
ಶ್ರೀ ಗಂಧ ಲೇಪನ ಸೇವೆ ಸಲ್ಲಿಸಿರುವಂತಹ ಭಕ್ತರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸಮರ್ಪಿಸಿದ ಶ್ರೀಗಂಧದ ಪ್ರಸಾದವನ್ನು ಮಾರನೆಯ ದಿನ (ಮೇ1-5-2025) ಗುರುವಾರ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ- 08022443962-9945429129-8660349906