"ರಾಷ್ಟ್ರದ ಅಭಿವೃದ್ಧಿಗೆ ಯುವಶಕ್ತಿಯೇ ಆಧಾರ: ರಾಜ್ಯಪಾಲರು"
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 13ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಭಾಗಿ
ಬೆಳಗಾವಿ 11.04.2025: ಯುವ ಶಕ್ತಿಯು ಯಾವುದೇ ರಾಷ್ಟ್ರದ ಅಭಿವೃದ್ಧಿಯ ಆಧಾರವಾಗಿದೆ ಮತ್ತು ಯುವಕರು ಅಸಾಧ್ಯವಾದುದನ್ನು ಸಹ ಸಾಧ್ಯವಾಗಿಸುವ ಶಕ್ತಿಯನ್ನು ಹೊಂದಿದ್ದಾರೆ. ಯುವಜನತೆಗೆ ಬೇಕಾಗಿರುವುದು ಆಂತರಿಕ ಶಕ್ತಿ, ನಿರಂತರ ಅಭ್ಯಾಸ, ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವವನ್ನು ಗುರುತಿಸುವುದಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಬೆಳಗಾವಿಯಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ 13ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. "ಆತ್ಮೀಯ ವಿದ್ಯಾರ್ಥಿಗಳೇ, ಇಂದು, ಈ ವಿಶೇಷ ದಿನ, ನಿಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ, ಇಂದು ನೀವು ಶಿಕ್ಷಣದ ಹಾದಿಯಿಂದ ಅನುಭವ ಮತ್ತು ಕ್ರಿಯೆಯ ಹಾದಿಗೆ ಹೆಜ್ಜೆ ಹಾಕಲಿದ್ದೀರಿ. ನಿಮ್ಮ ಮುಂದೆ ಹೊಸ ಸವಾಲುಗಳು ಮತ್ತು ಅವಕಾಶಗಳು ಇರುತ್ತವೆ. ನೀವು ಪಡೆದ ಜ್ಞಾನ ಮತ್ತು ಕೌಶಲ್ಯಗಳ ಆಧಾರದ ಮೇಲೆ ಆ ಸವಾಲುಗಳನ್ನು ಎದುರಿಸಲು ಮತ್ತು ಉದಯೋನ್ಮುಖ ಅವಕಾಶಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ" ಎಂದರು.
"ನಿಮ್ಮ ಮುಂದೆ ಅನೇಕ ಮಾರ್ಗಗಳು ತೆರೆದಿವೆ - ಸರ್ಕಾರಿ ಸೇವೆ, ಖಾಸಗಿ ವಲಯ, ಉದ್ಯಮಶೀಲತೆ, ಸಂಶೋಧನೆ, ಸಮಾಜ ಸೇವೆ ಮತ್ತು ಇನ್ನೂ ಅನೇಕ. ನೀವು ಯಾವುದೇ ಕ್ಷೇತ್ರಕ್ಕೆ ಹೋದರೂ, ಶ್ರೇಷ್ಠತೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಎಂದಿಗೂ ಮರೆಯಬಾರದು. ನಮ್ಮ ದೇಶದ ಮಹಾನ್ ಶಿಕ್ಷಣ ತಜ್ಞ ಡಾ.ಸರ್ವೆಪಲ್ಲಿ ಡಾ. ರಾಧಾಕೃಷ್ಣನ್ ಶಿಕ್ಷಣವನ್ನು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬದಲಾವಣೆಗೆ ಸಾಧನವೆಂದು ವ್ಯಾಖ್ಯಾನಿಸಿದ್ದಾರೆ. ಅಂದರೆ ನೀವು ಗಳಿಸಿದ ಜ್ಞಾನವನ್ನು ಸಮಾಜ ಸೇವೆಗೆ, ಮಾನವ ಸೇವೆಗೆ ಬಳಸಿ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಿ ಎಂದ ರಾಜ್ಯಪಾಲರು , ಸ್ವಾಮಿ ವಿವೇಕಾನಂದರು ಸೇರಿದಂತೆ ರಾಷ್ಟ್ರಕ್ಕಾಗಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ಮಾಹಾನ್ ನಾಯಕರ ಮಾರ್ಗದರ್ಶನದಲ್ಲಿ ನಡೆಯಿರಿ" ಎಂದು ಸಲಹೆ ನೀಡಿದರು.
"ಇಂದಿನ ಯುಗ ನಾವೀನ್ಯತೆ ಮತ್ತು ಸ್ಪರ್ಧೆಯಾಗಿದೆ. ಇದು ಡಿಜಿಟಲ್ ಯುಗವಾಗಿದ್ದು, ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ ಮತ್ತು ಮುಂದುವರಿದ ತಂತ್ರಜ್ಞಾನಗಳು ಜಗತ್ತಿಗೆ ಹೊಸ ಆಯಾಮಗಳನ್ನು ನೀಡುತ್ತಿವೆ. ನಿರಂತರ ಕಲಿಕೆಯ ಜೊತೆಗೆ ನಾವೀನ್ಯತೆ ಮತ್ತು ಸಂಶೋಧನೆಯೊಂದಿಗೆ ನಾವು ಮುನ್ನಡೆಯಬೇಕು. ನಮ್ಮ ಭಾರತವನ್ನು "ವಿಶ್ವ ಗುರು" ಮತ್ತು "ಚಿನ್ನದ ಹಕ್ಕಿ" ಎಂದು ಕರೆಯುತ್ತಿದ್ದರು. ಏಕೆಂದರೆ ನಳಂದ, ತಕ್ಷಶಿಲಾ, ವಿಕ್ರಮಶಿಲಾ ಮುಂತಾದ ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಿದ್ದವು. ನಮ್ಮ ಶಿಕ್ಷಣ ವ್ಯವಸ್ಥೆ, ನಮ್ಮ ಜ್ಞಾನ ಮತ್ತು ವಿಜ್ಞಾನಕ್ಕೆ ನಮ್ಮ ಕೊಡುಗೆಯೊಂದಿಗೆ, ಭಾರತವು ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿತ್ತು ಮತ್ತು ಬಲವಾದ ಆರ್ಥಿಕತೆಯಿಂದಾಗಿ ಆರ್ಥಿಕವಾಗಿ ಸಮೃದ್ಧವಾಗಿತ್ತು. ನಮ್ಮ ವೇದಗಳಲ್ಲಿ ಖಗೋಳ ಘಟನೆಗಳನ್ನು ಉಲ್ಲೇಖಿಸಲಾಗಿದೆ - ಋಗ್ವೇದ, ಯಜುರ್ವೇದ, ಅಥರ್ವವೇದ ಮತ್ತು ಸಾಮವೇದ. ಖಗೋಳವಿಜ್ಞಾನದಿಂದ ಭೂವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತೀಯರು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಗಣಿತದಲ್ಲಿ ಸೊನ್ನೆ ಮತ್ತು ದಶಮಾಂಶದ ಆವಿಷ್ಕಾರವು ಭಾರತೀಯ ಗಣಿತಜ್ಞರು ಮತ್ತು ಖಗೋಳಶಾಸ್ತ್ರಜ್ಞರ ಕೊಡುಗೆಯಾಗಿದೆ " ಎಂದು ತಿಳಿಸಿದರು.
"ಭಾರತದ ಇತಿಹಾಸದ ಮಹಾನ್ ನಾಯಕಿಯರಲ್ಲಿ ಒಬ್ಬರಾದ ರಾಣಿ ಚನ್ನಮ್ಮ ಅವರು ದೇಶದ ಸ್ವಾತಂತ್ರ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಸ್ಮರಣಾರ್ಥ ಸ್ಥಾಪಿಸಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇಂದು 13ನೇ ಘಟಿಕೋತ್ಸವವನ್ನು ಆಚರಿಸುತ್ತಿದ್ದು, ವಿಶ್ವವಿದ್ಯಾಲಯವು ಸಾಮಾಜಿಕ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಧಾರ್ಮಿಕ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿ ಶ್ರೀ ಎಚ್.ಎನ್. ನಾಗಮೋಹನ್ ದಾಸ್ಜಿ, ಪೂಜ್ಯ ಶಿವಲಿಂಗೇಶ್ವರ ಮಹಾಸ್ವಾಮಿ ಜೀ ಮತ್ತು ಶ್ರೀ ಶಂಸುದ್ದೀನ್ ಅಬ್ದುಲ್ಲಾ ಪುಣೇಕರ್ ಅವರಿಗೆ ಗೌರವ ಪದವಿಗಳನ್ನು ನೀಡಿ ಗೌರವಿಸಲಾಗಿದೆ. ಸಮಾಜಕ್ಕಾಗಿ ಅವರ ಸೇವೇ ನಿರಂತರವಾಗಿರಲೆಂದು ಆಶಿಸುತ್ತೇನೆ" ಎಂದರು.
ಸಮಾರಂಭದಲ್ಲಿ ಸಚಿವರಾದ ಎಂ.ಸಿ.ಸುಧಾಕರ್, ಮುಖ್ಯ ಅತಿಥಿ ಪದ್ಮಶ್ರೀ ಪ್ರೊಫೆಸರ್ ಗಣೇಶ್ ಎನ್.ದೇವಿ, ಕುಲಪತಿ ಸಿ.ಎಂ.ತ್ಯಾಗರಾಜ್ ಗಣ್ಯರು ಹಾಜರಿದ್ದರು.
"Youth Power is the Foundation of National Development": Governor Gehlot at Rani Channamma University Convocation
Belgaum, 11 April 2025: The Hon’ble Governor of Karnataka, Shri Thaawarchand Gehlot, emphasized that the energy, determination, and potential of the youth form the backbone of national development. He was speaking at the 13th Convocation Ceremony of Rani Channamma University, Belgaum, where he presided as the chief guest.
Addressing the graduating students, the Governor remarked, “Youth have the power to turn the impossible into possible. What is needed is the realization of one's inner strength, consistent practice, self-confidence, and a positive outlook.” He encouraged students to face the future with resilience, adaptability, and a commitment to excellence.
“Today marks a milestone in your journey—from education to experience and action,” he said. “Many opportunities lie ahead—whether in public service, private industry, entrepreneurship, research, or social work. Whatever path you choose, uphold the values of integrity, excellence, and humanity.”
Quoting Dr. Sarvepalli Radhakrishnan, the Governor highlighted that education is a catalyst for social, economic, and cultural transformation. “Use your knowledge for the service of humanity and for building a developed and inclusive India,” he urged.
Reflecting on India’s rich legacy in knowledge and innovation, he said, “Ours is a nation that was once revered as the 'Vishwa Guru' and the 'Golden Bird'—home to ancient centers of learning like Nalanda and Takshashila. Indian contributions to mathematics, astronomy, medicine, and philosophy are recorded in the Vedas and are globally recognized, including the discovery of zero and the decimal system.”
During the convocation, Rani Channamma University conferred honorary doctorates on eminent personalities including Justice Shri H.N. Nagamohan Das, Pujya Shivalingeshwara Mahaswamy Ji, and Shri Shamsuddin Abdullah Punekar for their exemplary service in the fields of social welfare, national interest, and cultural preservation.
The event was graced by Higher Education Minister Dr. M.C. Sudhakar, Padma Shri awardee and distinguished academic Prof. Ganesh N. Devi, and Vice Chancellor Prof. C.M. Thyagaraj.