ಗರ್ಭಪಾತದ ಹಕ್ಕು ಮಾನವ ಹಕ್ಕಾಗಬೇಕು- ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ

varthajala
0

 


ಬೆಂಗಳೂರು, ಏಪ್ರಿಲ್ 15, (ಕರ್ನಾಟಕ ವಾರ್ತೆ) : ಸಂವಿಧಾನದ 21ನೇ ವಿಧಿಯ ಭಾಗವಾಗಿ ಮಹಿಳೆಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯದ ಮೂಲಭೂತ ಹಕ್ಕಿದೆ. ಮಗುವನ್ನು ಹೆರುವ ಅಥವಾ ಹೆರದಿರುವ ಹಕ್ಕು ಮಹಿಳೆಯ ಮಾನವ ಹಕ್ಕಾಗಬೇಕು ಎಂದು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಹೇಳಿದರು.

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ಶಾಲೆ ಜಂಟಿಯಾಗಿ ಆಯೋಜಿಸಿದ್ದ “ಸಂತಾನೋತ್ಪತ್ತಿ ಹಕ್ಕುಗಳು ಮತ್ತು ನೀತಿ ಪರಿವರ್ತನೆ” ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಗರ್ಭಪಾತ ಕಾಯ್ದೆ-197 ಪ್ರಗತಿಪರ ಶಾಸನವೆಂದು ತೋರುತ್ತದೆ. ತಾಂತ್ರಿಕ ಮತ್ತು ಕಾನೂನು ಬೆಳವಣಿಗೆಗಳಿಗೆ ಅನುಗುಣವಾಗಿ ಗರ್ಭಪಾತ ಕಾಯ್ದೆಯಲ್ಲಿ ಸುಧಾರಣೆಯ ಅವಶ್ಯಕತೆಯಿದೆ. ಗರ್ಭಪಾತ ಮಾಡಲು ಗರ್ಭಿಣಿ ಮಹಿಳೆಯನ್ನು ಅಧಿಕಾರಶಾಹಿ ಪ್ರಕ್ರಿಯೆಗೆ ಒಳಪಡಿಸಬಾರದು ಎಂದು ತಿಳಿಸಿದರು.

ಆಫ್ರಿಕಾ ಮತ್ತು ಅಮೆರಿಕದ ಕೆಲವು ರಾಜ್ಯಗಳಲ್ಲಿ ಗರ್ಭಪಾತವು 12 ವಾರಗಳವರೆಗೆ ಸಂಭೋಗ ಅಥವಾ ಲೈಂಗಿಕ ಅಪರಾಧದ ಪರಿಣಾಮವಾಗಿದ್ದರೂ ಸಹ, 23 ರಿಂದ 20 ವಾರಗಳವರೆಗೆ ಗರ್ಭಪಾತವು ಸಾಮಾಜಿಕ-ಆರ್ಥಿಕ ಅಥವಾ ವೈದ್ಯಕೀಯ ಆಧಾರದ ಮೇಲೆ ಮಾನ್ಯವಿರುತ್ತದೆ. ಗರ್ಭಧಾರಣೆಯ ಮುಂದುವರಿದ ಹಂತದಲ್ಲಿ ಗರ್ಭಪಾತ ಮಾಡಬಹುದೇ ಎಂಬುದು ಚರ್ಚೆಯ ಅಗತ್ಯವಿರುವ ಪ್ರಶ್ನೆಯಾಗಿದೆ. ಇಲ್ಲಿ ರಾಜ್ಯದ ಹಿತಾಸಕ್ತಿ ಬರುತ್ತದೆ. ರಾಜ್ಯವು ಪಿತೃಪ್ರಧಾನ ಪಾತ್ರವನ್ನು ವಹಿಸಿಕೊಳ್ಳುತ್ತದೆ ಮತ್ತು ಹುಟ್ಟಲಿರುವ ಮಗುವಿನ ಹಿತಾಸಕ್ತಿಗಾಗಿ ಗರ್ಭಿಣಿ ಮಹಿಳೆಯ ಹಕ್ಕುಗಳ ಮೇಲೆ ನಿಬರ್ಂಧಗಳನ್ನು ವಿಧಿಸುತ್ತದೆ. ಸುಪ್ರೀಂ ಕೋರ್ಟ್ ಸುಚಿತ್ರಾ ಶ್ರೀವಾತ್ಸವ ಅವರ ಪ್ರಕರಣದಲ್ಲಿ ರೋಯ್ ವರ್ಸಸ್ ವೇಡ್ ತೀರ್ಪಿನಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್‍ನ ವಿಧಾನವನ್ನು ತನ್ನ ನಿರ್ಧಾರಗಳ ಮೂಲಕ ಬೆಂಬಲಿಸಿದೆ ಎಂದರು.

ಸೇವೆ ಸಲ್ಲಿಸುತ್ತಿರುವ ಗರ್ಭಿಣಿ ಮಹಿಳೆಗೆ ವೈದ್ಯಕೀಯ ಸೌಲಭ್ಯಕ್ಕೆ ಹೋಗಿ ಗರ್ಭಧಾರಣೆಯ ಪರೀಕ್ಷೆಯನ್ನು ಪಡೆಯಲು ಸಾಧ್ಯವಾಗುವಂತೆ, ಮಾತೃತ್ವ ಪ್ರಯೋಜನ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಅಥವಾ ಗರ್ಭವತಿಗೆ ಪ್ರತಿ ತಿಂಗಳು ಒಂದು ದಿನ ರಜೆ ನೀಡುವಂತಹ ಕಾಯ್ದೆಯನ್ನು ಮಾಡಲು ಕಿಲ್ಪಾರ್ ಸರ್ಕಾರಕ್ಕೆ ಸಲಹೆ/ವರದಿ ನೀಡಬೇಕು ಎಂದು ಅವರು ಬಲವಾಗಿ ಅಭಿಪ್ರಾಯಪಡುತ್ತಾ, ಈ ವಿಷಯದಲ್ಲಿ ಹಕ್ಕು ಆಧಾರಿತ ಕಾನೂನು ಆಡಳಿತ ಇರಬೇಕು ಎಂದು ಅವರು ಸೂಚಿಸಿದರು.

ಗೌರವಾನ್ವಿತ ಅತಿಥಿಯಾಗಿದ್ದ ಪೆÇ್ರ. ಜೋಗರಾವ್ ಮಾತನಾಡಿ, "ಪುಟ್ಟಸ್ವಾಮಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನಿರ್ಧರಿಸಿದಂತೆ ದೈಹಿಕ ಸಮಗ್ರತೆ ಮತ್ತು ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಗೌಪ್ಯತೆಯ ಒಂದು ಭಾಗವಾಗಿದೆ'' ಎಂದು ಅಭಿಪ್ರಾಯ ಪಟ್ಟರು. ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ, 2021 ಬಾಡಿಗೆ ತಾಯ್ತನ' (ನಿಯಂತ್ರಣ) ಕಾಯ್ದೆ, 2021 ಕ್ಕೆ ಅನೇಕ ಸವಾಲುಗಳಿವೆ. ಸಂಘರ್ಷದ ಹಿತಾಸಕ್ತಿಗಳು ಮತ್ತು ಪಾಲುದಾರರ ಸ್ಪರ್ಧಾತ್ಮಕ ಹಕ್ಕುಗಳ ನಡುವೆ ಸೂಕ್ತ ಸಮತೋಲನವನ್ನು ಸಾಧಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ರಾಜ್ಯವು ಎಷ್ಟರ ಮಟ್ಟಿಗೆ ಹಸ್ತಕ್ಷೇಪಕಾರಿಯಾಗಿರಬಹುದು, ವೈದ್ಯಕೀಯ ಅವಶ್ಯಕತೆಯೊಂದಿಗೆ ಸಮತೋಲನವಾಗಿರಲು ವೈಯಕ್ತಿಕ ಆಯ್ಕೆ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ. ವಿಚ್ಛೇದಿತ ಮಹಿಳೆ ಮತ್ತು ತೃತೀಯ ಲಿಂಗಿಗೆ ಹೋಲಿಸಿದರೆ ಒಂಟಿ ಮಹಿಳೆ ಏಕೆ ಅನಾನುಕೂಲಕರ ಸ್ಥಾನದಲ್ಲಿದ್ದಾರೆ ಇತ್ಯಾದಿಗಳ ಬಗ್ಗೆ ಅವರು ಮೂಲಭೂತ ಪ್ರಶ್ನೆಗಳನ್ನು ಎತ್ತಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಿಲ್ಪಾರ್‍ನ ನಿರ್ದೇಶಕ ಪೆÇ್ರ. ಚಿದಾನಂದ್ ಎಸ್. ಪಾಟೀಲ್ ವಹಿಸಿದ್ದರು. ಡೀನ್ ಪೆÇ್ರ.ಮಾಧವನ್ ನಾಯರ್, ಡಿ.ಸ್ವಪ್ನ, ಅಸೋಸಿಯೇಟ್ ಡೀನ್, ಡಾ.ರೇವಯ್ಯ ಒಡೆಯರ್, ಸಂಶೋಧನಾ ಮುಖ್ಯಸ್ಥರು ಮತ್ತು ಇತರ ಅಧ್ಯಾಪಕರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮನಿಪಾಲ್ ಕಾನೂನು ಕಾಲೇಜಿನ ಡಾ.ಅನುಜಾ ಎಸ್. ಹೈಕೋರ್ಟಿನ ವಕೀಲರಾದ       ಡಾ. ಗಿರೀಶ್‍ಕುಮಾರ್ ಆರ್., ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ಶಾಲೆಯ ಡಾ.ಸಪ್ಪಾ ಎಸ್. ಮತ್ತು ಪೆÇ್ರ.ಡಾ.ವಲರ್ಮತಿ ಆರ್., ಡಾ.ಚೈತ್ರ ಆರ್.ಬೀರಣ್ಣವರ್, ಬಿಎಂಎಸ್‍ಎಲ್‍ಎ ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾನೂನು ಕಾಲೇಜಿನ ಪೆÇ್ರ.ಡಾ.ಇಂದಿರಾಣಿ ಕೆ.ಎಸ್., ಡಾ.ಗಾಯತ್ರಿ ಬಾಯಿ ಎಸ್. ಕ್ರೈಸ್ಟ್ ಅಕಾಡೆಮಿ ಕಾನೂನು ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ.ದೀಪ್ತಿ ಸುಸಾನ್ ಥಾಮಸ್ ಅವರು ಮಾತನಾಡಿದರು. ದೇಶಾದ್ಯಂತ ಆಹಮಿಸಿದ 80 ಪ್ರತಿನಿಧಿಗಳಿಂದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.

Right to abortion should be a human right- Justice Ashok B. Hinchigeri



Bengaluru, April 15 (Karnataka Information): "A woman has fundamental right of decisional freedom as part of Art.21 of the Constitution abd right to bear or not to bear a child should be a human right of woman", said Justice Ashok B. Hinchigeri.



He was speaking after inaugurating the conference on "Reproductive Rights and Policy Transformation" jointly organised by the Karnataka Institute for Law and Parliamentary Reform and the School of Law, Christ University. He observed that the Medical Termination of Pregnancy Act seems to be a progressive legislation. However, there is need for reform to be commensurate with the technological and legal developments. A pregnant woman should not be subjected to bureaucratic process to have abortion. In Africa and in some of the American States abortion is available as a matter of right irrespective of the fact that it is a result of incest or sexual offence upto 12 weeks, from 23 to 20 weeks abortion is available on socio-economic or medical grounds.

 

Whether abortion should be available in the advanced stage of pregnancy is a question that needs deliberation. Here the interest of the state comes into picture. The state assumes the paternalistic role and imposes restrictions on rights of the pregnant woman in the interest of the unborn. The Supreme Court Suchitra Srivatsava's case has toed the approach of the America Supreme Court in Roe v. Wade decision this approach through its decisions. He strongly felt that the Maternity Benefits Act is to be amended or a new Pregnancy Leave Act is to be amended to provide one day leave in a month to the serving pregnant woman so that she can go to the medical facility and get the status of pregnancy tested. He observed that there should be a rights based legal regime in this area.



"Right to bodily integrity and reproductive choice is a part of privacy as decided by the Supreme Court in Puttaswamy judgement" pointed out Prof.Joga Rao who was the guest of honour on the occasion. He wondered that there are 33 challenges to the Assisted Reproductive  Technology Regulation Act, 2021and Surrogacy (Regulation) Act, 2021. He emphasised the need to strike an appropriate balance between conflicting interests and competing claims of stakeholders. He raised fundamental questions as to what extent state can be paternalistic and intervenistic; to what extent individual choice is to be balance with medical necessity; why single woman is in a disadvantaged position compared to a divorced woman and third gender, etc.



Prof.Chidanand S. Patil, Director, KILPAR presided over the function, Prof.Madhavan Nair, dean, De.Swapna, Associate Dean, Dr.Revaiah Odeyar, Research Head and other faculty members and delegates were present on the occasion. There six resource persons Dr. Anuja S. of ManipalLaw School, Mr.Girishkumar R., Advocate High Court, Dr Sapna S. and Prof. Dr. Valarmathi R., Schoolof Law, Christ University, Prof. Dr. Indirani K.S., BishopCotton Women’s Christian Law College,Dr. Gayathri Bai S., BMSLaw College, Dr. Deepti Susan Thomas, Assistant Professor,Christ Academy Institute of Law addressed plenary session. There were 80 research papers that were lined up for presentation from delegates across the country. The programme was sponsored by the Institute for Law and Parliamentary Reform and coordinated by Dr.Valarmati R. And Dr.Chaitra R. Beerannavar.

 


Post a Comment

0Comments

Post a Comment (0)