ಸಿಲಿಕಾನ್ ಸಿಟಿಯಲ್ಲಿ ಚಾಲಕನ ನಡೆಗೆ ವ್ಯಾಪಕ ಆಕ್ರೋಶ

varthajala
0

 ಬೆಂಗಳೂರು: ಬೆಂಗಳೂರಿನಲ್ಲಿ ಪುಂಡರು ಬೇಕು ಅಂತಲೇ ವಿರುದ್ಧ ಡಿಕ್ಕಿನಲ್ಲಿ ಸೀನ್ ಕ್ರಿಯೇಟ್ ಮಾಡ್ತಾರೆ, ಅಷ್ಟೇ ಅಲ್ಲದೆ ಟ್ರಾಫಿಕ್ ಜಾಮ್ ಮಾಡಿ ಅವಾಂತರವನ್ನೇ ಸೃಷ್ಟಿ ಮಾಡುತ್ತಾರೆ, ಇದೀಗ ಅಂತಹದ್ದೇ ಒಂದು ಪ್ರಕರಣ ನಗರದ ಜೆಸಿ ರಸ್ತೆಯಲ್ಲಿ ನಡೆದಿದೆ,

ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ರೂಲ್ಸ್ ಅನ್ನು ಫಾಲೋ ಮಾಡದವರ ವಿರುದ್ಧ ದಿನನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗುತ್ತಲೇ ಇದೆ,
ಇಂದು ಜೆಸಿ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಿಗ್ನಲ್ ದಾಟುವುದಕ್ಕೆ ಬಂದಿದ್ದಲ್ಲದೆ ಗಾಂಚಲಿ ಮಾಡಿರುವ ಘಟನೆ ನಡೆದಿದೆ,
ಏಪ್ರಿಲ್ 4 ರಂದು ಬೆಳಗ್ಗೆ 11.10 ಸುಮಾರಿಗೆ ಜೆಸಿ ರಸ್ತೆಯ ಪೊಲೀಸ್ ಚೌಕಿಯ ಬಳಿ ಸಂಖ್ಯೆ ಸ್ಕೂಟಿ ಹಾಗು ಕಾರು ರಾಂಗ್ ಸೈಡ್ ನಲ್ಲಿ ಬಂದು ಟ್ರಾಫಿಕ್ ಜಾಮ್ ಉಂಟಾಗುವಂತೆ ಮಾಡಿದ್ದಾರೆ.
ಕಾರು ಚಾಲಕ ವಾಪಸ್ ಹಿಂದೆ ಹೋಗಿ ಎಂದು ಕೇಳಿಕೊಂಡರು ಕೂಡ ವಿರುದ್ಧ ದಿಕ್ಕಿನಲ್ಲಿ ಬಂದಿದ್ದ ಸ್ಕೂಟಿ ಹಾಗೂ ಕಾರು ಚಾಲಕರು ಬೇಕಾದ್ರೆ ನೀನೇ ಹೋಗು ಎಂದು ಸನ್ನೆ ಮಾಡಿ ನಿಂತಲ್ಲೇ ನಿಂತು ಬಿಟ್ಟಿದ್ದಾರೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ,

ಚಾಲಕನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ನಗರ ಪೊಲೀಸ್‍ರಿಗೆ ಆಗ್ರಹಿಸಿದ್ದಾರೆ,

Post a Comment

0Comments

Post a Comment (0)