ಹೊಸ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಿ, ಅದರ ಆಧಾರದ ಮೇಲೆ ಯೋಜನೆ ರೂಪಿಸಿ : ಸಿದ್ದಗಂಗಾ ಶ್ರೀ

varthajala
0

 





ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಈ ವಿಷಯದಲ್ಲಿ ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. 10 ವರ್ಷದ ಹಿಂದೆ ನಡೆದ ಸಮೀಕ್ಷೆಯನ್ನು ಈಗ ಪ್ರಕಟಿಸುವುದು ನ್ಯಾಯೋಚಿತವಲ್ಲ ಎಂದ ಅವರು, ಹೊಸ ಜಾತಿಗಣತಿ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಅಸಮಾನತೆಯನ್ನು ನಿವಾರಿಸಿ, ಸಮಾನತೆ ತರುವಂತಹ ಜಾತಿಗಣತಿ ಪ್ರಕ್ರಿಯೆ ಅಗತ್ಯವಾಗಿದೆ. ಈ ಕಾರ್ಯ ಚುರುಕಾಗಿ, ಸಂವಿಧಾನದ ಮೌಲ್ಯಗಳನ್ನು ಗಮನದಲ್ಲಿಟ್ಟು ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತವೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಎಲ್ಲಾ ಸಮಾಜದಲ್ಲೂ ಹಿಂದುಳಿದವರು, ಬಡವರು ಮತ್ತು ನಿರ್ಗತಿಕರಿದ್ದಾರೆ. ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರದ ಹಸ್ತಕ್ಷೇಪ ಬೇಕು. ಉತ್ತಮ ಶಿಕ್ಷಣ, ಉದ್ಯೋಗಾವಕಾಶ, ಆರೋಗ್ಯ ಸೇವೆ ನೀಡುವುದು ಅವರ ಅಭಿವೃದ್ಧಿಗೆ ದಾರಿ ಹಾಕುತ್ತದೆ” ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಜಾತಿಗಣತಿ ಕೇವಲ ಸಂಖ್ಯಾ ಲೆಕ್ಕಾಚಾರವಲ್ಲ, ಇದು ಸಮಾಜದ ಸ್ಥಿತಿಗತಿಯ ನಿಖರ ಚಿತ್ರಣ ಕೊಡಬಲ್ಲದು. ಹೀಗಾಗಿ ಹೊಸ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಿ, ಅದರ ಆಧಾರದ ಮೇಲೆ ಯೋಜನೆ ರೂಪಿಸಿ, ಎಲ್ಲ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದ್ದಾರೆ

Post a Comment

0Comments

Post a Comment (0)