ಡುಂಡಿರಾಜರ ಪುಕ್ಕಟೆ ಸಲಹೆಗೆ ನೂರರ ಸಂಭ್ರಮ.

varthajala
0

ಮಾನ್ಯರೇ,

ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡವು ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ನಾಡಿನ ಪ್ರಸಿದ್ಧ ಸಾಹಿತಿಗಳ ಕೃತಿಗಳನ್ನು ರಂಗಕ್ಕೆ ಅಳವಡಿಸಿ ರಾಜ್ಯಾದ್ಯಂತ ಪ್ರದರ್ಶನ ನೀಡುತ್ತಾ ಬಂದಿದೆ.


ಡಾ: ಚಂದ್ರಶೇಖರ ಕಂಬಾರರ ಜೀಕೆ ಮಾಸ್ತರರ ಪ್ರಣಯ ಪ್ರಸಂಗ, ಕೆ. ಪಿ.ಪೂರ್ಣಚಂದ್ರ ತೇಜಸ್ವಿಯವರ ಎಂಗ್ಟನ ಪುಂಗಿ ಮತ್ತು ಪಾಕ ಕ್ರಾಂತಿ ಪಿ.ಲಂಕೇಶರ ಸ್ಟೆಲ್ಲಾ ಎಂಬ ಹುಡುಗಿ, ಹನುಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ಹೊರಗ ನಾಟಕಗಳನ್ನು ನಮ್ಮ ತಂಡ ಪ್ರದರ್ಶಿಸಿದೆ.

ನಾಡಿನ ಪ್ರಸಿದ್ಧ ಚುಟುಕು ಸಾಹಿತಿ ಎಚ್.ಡುಂಡಿರಾಜ್ ರವರ "ಪುಕ್ಕಟೆ ಸಲಹೆ "ಹಾಸ್ಯ ನಾಟಕವು ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗ ತಂಡದಿಂದ ಈಗಾಗಲೇ ತುಂಬಿದ ಸಭಾಗೃಹದಲ್ಲಿ 99 ಪ್ರದರ್ಶನಗಳನ್ನು  ಕಂಡಿದ್ದು, ದಿನಾಂಕ 13-04-2025 ಭಾನುವಾರ ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮದಲ್ಲಿ 100ನೇ ಪ್ರದರ್ಶನ ಕಾಣುತ್ತಿದೆ. ಈ ನಾಟಕದ ನಿರ್ದೇಶನ ಅಶೋಕ್. ಬಿ ಅವರದ್ದು.

ನಾಟಕದ ಬಗ್ಗೆ,

ಚುಟುಕು ಕವಿಯಾಗಿ ಹೆಸರು ಮಾಡಿರುವ ಪ್ರಸಿದ್ಧ ಲೇಖಕ ಡುಂಡಿರಾಜರ ಹಾಸ್ಯಪ್ರಜ್ಜ್ಞೆಯ ಎರಕದಲ್ಲಿ ಮೂಡಿಬಂದಿರುವ ಪುಕ್ಕಟೆ ಸಲಹೆ ಹಾಸ್ಯನಾಟಕವು ದಿನಂಪ್ರತಿ ಎಲ್ಲ ಟಿವಿಗಳಲ್ಲಿ ವಿಜೃಂಭಿಸುವ ಜ್ಯೋತಿಷಿಗಳ ಹಾವಳಿಯನ್ನು, ಅವರ ನಿಜಬಣ್ಣ, ಅವಾಂತರಗಳನ್ನು ಹಾಸ್ಯದ ಮೂಲಕ ರಂಗದ ಮೇಲೆ ತೋರಿಸುತ್ತದೆ. ಕೈಯಲ್ಲಿ ಲ್ಯಾಪ್ಟಾಪ್ ಹಿಡಿದು ರಂಗದ ಮೇಲೆ ಬಂದು ಕೂರುವ ಲ್ಯಾಪಾನಂದ ಟ್ಯಾಪಾನಂದ ಶಾಸ್ತ್ರಿ ರಾಜ್ಯದ ವಿವಿಧ ಊರುಗಳಿಂದ ತಮ್ಮ ಚಿತ್ರ ವಿಚಿತ್ರ ಸಮಸ್ಯೆಗಳಿಗೆ ಪರಿಹಾರ ಕೇಳಲು ಕರೆ ಮಾಡುವ ಜನರಿಗೆ ಕೊಡುವ ಉಚಿತ ಸಲಹೆಗಳು, ಅಲ್ಲಲ್ಲಿ ಸಿಡಿಯುವ ಡುಂಡಿರಾಜರ ಹಾಸ್ಯ ಚುಟುಕಗಳು, ನಾಟಕದ ನಡುನಡುವೆ ಬರುವ ಹಾಸ್ಯ ಜಾಹಿರಾತುಗಳು ಸತತ ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಬಿದ್ದುಬಿದ್ದು ನಗುವಂತೆ ಮಾಡುತ್ತವೆ.

ಅಂದು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ.

ಡಾ: ನಾ.ದಾಮೋದರ ಶೆಟ್ಟಿ  ನಾಟಕಕಾರರು, ಕವಿಗಳು.

ವಿ.ಮನೋಹರ್ ಪ್ರಸಿದ್ಧ ಸಂಗೀತ ನಿರ್ದೇಶಕರು 

ಬಿ. ಆರ್. ಲಕ್ಷ್ಮಣ್ ರಾವ್ ಕವಿಗಳು

ಎಚ್: ಡುಂಡಿರಾಜ್ ನಾಟಕಕಾರರು, ಚುಟುಕು ಕವಿಗಳು.

ಕೆ.ವಿ.ನಾಗರಾಜ್ ಮೂರ್ತಿ ಅಧಕ್ಯಕ್ಷರು , ಕರ್ನಾಟಕ ನಾಟಕ ಅಕಾಡೆಮಿ

ಇರಲಿದ್ದಾರೆ.

ನಾಟಕ: ಪುಕ್ಕಟೆ ಸಲಹೆ.  ಹಾಸ್ಯ ನಾಟಕ

ರಚನೆ: ಎಚ್. ಡುಂಡಿರಾಜ್

ನಿರ್ದೇಶನ: ಅಶೋಕ್. ಬಿ

ಪ್ರಸ್ತುತಿ: ವಿಶ್ವಪಥ ಕಲಾ ಸಂಗಮ

ದಿನಾಂಕ: 13-04-2024 ಭಾನುವಾರ

ಸಮಯ: ಸಂಜೆ 5 ಗಂಟೆಗೆ

ಸ್ಥಳ: ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ, ಮಲ್ಲತ್ತಹಳ್ಳಿ, (ನಾಗರಬಾವಿ ಅಂಬೇಡ್ಕರ್ ಕಾಲೇಜು ಸಿಗ್ನಲ್ ಹತ್ತಿರ)

ಪ್ರವೇಶ: 100 ರೂಗಳು 

ದಯವಿಟ್ಟು ಈ ಪ್ರಕಟಣೆಯನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಹೆಚ್ಚಿನ ವಿವಗಳಿಗಾಗಿ:  9945977184, 

9916863637 ಈ ನಂಬರ್ ಗೆ ಕರೆ ಮಾಡಬಹುದು.


Post a Comment

0Comments

Post a Comment (0)