ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರಗಳಲ್ಲಿ ಒಂದಾದ ವಕ್ಫ್ ತಿದ್ದುಪಡಿ ಕಾಯಿದೆಯ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈ ಬಗ್ಗೆ ಮಾತನಾಡಿದ ಅವರು ಕಳೆದ ಕೆಲ ದಿನಗಳಿಂದ ಪಶ್ಚಿಮ ಬಂಗಾಳ ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿದೆ, ಅದರೆ ಸಿಎಂ ಮಮತಾ ಬ್ಯಾನರ್ಜಿ ಮೌನವಾಗಿದ್ದಾರೆ, ಜಾತ್ಯತೀತತೆಯ ಹೆಸರಿನಲ್ಲಿ ಅವರು ಗಲಭೆಕೋರರಿಗೆ ಮುಕ್ತ ಸ್ವಾತಂತ್ರö್ಯ ನೀಡಿದ್ದಾರೆ,
ಈ ಹಿಂಸಾಚಾರದ ಬಗ್ಗೆ ಎಲ್ಲರೂ ಮೌನವಾಗಿದ್ದಾರೆ ಎಂದು ಹೇಳಿದರು, ಮುರ್ಷಿದಾಬಾದ್ ಗಲಭೆಗಳ ಬಗ್ಗೆ ಕಾಂಗ್ರೆಸ್ ಮೌನವಾಗಿದೆ, ಸಮಾಜವಾದಿ ಪಕ್ಷ ಮೌನವಾಗಿದೆ, ಟಿಎಂಸಿ ಮೌನವಾಗಿದೆ, ಭಾರತದಲ್ಲಿ ಇಷ್ಟೊಂದು ಹಿಂಸಾಚಾರ ನಡೆಯುತ್ತಿದ್ದರೂ ಕೂಡ ಅವರು ಬಾಂಗ್ಲಾದೇಶದಲ್ಲಿ ನಡೆದದ್ದನ್ನು
ನಾಚಿಕೆಯಿಲ್ಲದೆ ಬೆಂಬಲಿಸುತ್ತಿದ್ದಾರೆ, ಅವರಿಗೆ ಬಾಂಗ್ಲಾದೇಶ ಇಷ್ಟವಾದರೆ ಅವರು ಅಲ್ಲಿಗೆ ಹೋಗಬೇಕು, ಅವರು ಭಾರತದ ಭೂಮಿಗೆ ಏಕೆ ಹೊರೆಯಾಗುತ್ತಿದ್ದಾರೆ ಎಂದು ಯೋಗಿ ಆಕ್ರೋಶ ಹೊರಹಾಕಿದರು,