ಇಸ್ಲಾಮಾಬಾದ್: ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಪಾಕ್ ಉಗ್ರರ ವಿರುದ್ಧ ವಿಶ್ವದಾದ್ಯಂತ ವ್ಯಾಪಾಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದರ ನಡೆವೆ ಪಾಕ್ ಉಪ ಪ್ರಧಾನಿ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದು, ದಾಳಿ ನಡೆಸಿದವರನ್ನು ಸ್ವಾತಂತ್ರö್ಯ ಹೋರಾಟಗಾರರು ಎಂದು ಕರೆದಿದ್ದಾರೆ,
ಉಗ್ರರ ದಾಳಿಯ ಬಗ್ಗೆ ಮಾತನಾಡಿದ ಪಾಕ್ ನ ಉಪಪ್ರಧಾನಿ ಹಾಗೂ ವಿದೇಶಾಂಗ ಇಲಾಖೆ ಸಚಿವನೂ ಆಗಿರುವ ಇಶಾಕ್ ದಾರ್, ಏಪ್ರಿಲ್ ೨೨ ರಂದು ಪಹಲ್ಗಾಮ್ ಜಿಲ್ಲೆಯಲ್ಲಿ ದಾಳಿ ನಡೆಸಿದವರು ಸ್ವಾತಂತ್ರö್ಯ ಹೋರಾಟಗಾರರಾಗಿರಬಹುದು ಎಮದು ಆಘಾತಕಾರಿ ಹೇಳಿಕೆ ನೀಡಿದ್ದಾರೆ, ಸಿಂಧೂ ನದಿ ಜಲ ಒಪ್ಪಂದವನ್ನು ಸ್ಧಗಿತಗೊಳಿಸುವ ವಿಷಯವನ್ನು ಪ್ರಸ್ತಾಪಿಸಿದ ದಾರ್, ಪಾಕಿಸ್ತಾನದಲ್ಲಿ ೨೪೦ ಮಿಲಿಯನ್ ಜನರಿಗೆ ನೀರು ಬೇಕು, ಭಾರತ ಅದನ್ನು ತಡೆಯಲು ಸಾಧ್ಯವಿಲ್ಲ, ಇದು ಯದ್ಧಕ್ಕೆ ಕೃತ್ಯಕ್ಕೆ ಸಮಾನ, ಯಾವುದೇ ಅಮಾನತು ಅಥವಾ ಅತಿಕ್ರಮಣವನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದರು,
ನಮಗೆ ಬೆದರಿಕೆ ಹಾಕಿದರೆ ಅಥವಾ ದಾಳಿ ಮಾಡಿದರೆ ನಾವು ಕೂಡ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ, ನಮ್ಮಲ್ಲಿ ಕೂಡ ಸುಸಜ್ವಿತ ಶಸ್ತಾçಸ್ತçಗಳಿವೆ, ಭಾರತ ಬೇಕಂತಲೇ ಪಾಕ್ ಅನ್ನು ಕೆಣಕುತ್ತಿದೆ ಎಂದು ಎಂದು ಪಾಕ್ ಉಪ ಪ್ರಧಾನಿ ಇಶಾಕ್ ದಾರ್ ಹೇಳಿದರು,
ಇನ್ನು ಭಾರತದಿಂದ ನಮ್ಮ ನಾಗರಿಕರಿಗೆ ಹಾನಿಯಾದರೆ, ಭಾರತೀಯ ನಾಗರಿಕರು ಸಹ ಸುರಕ್ಷಿತವಾಗಿ ಉಳಿಯುವುದಿಲ್ಲ ಇದು ಪ್ರತೀಕಾರದ ಕ್ರಮವಾಗಿರುತ್ತದೆ ಎಂದು ರಕ್ಷಣಾ ಸಚಿವ ಖವಾಜಾ ಮಹಮ್ಮದ್ ಆಸಿಫ್ ಹೇಳಿದ್ದಾರೆ,