ಗೃಹ- ವಾಹನ ಸಾಲಗಾರರಿಗೆ ಬಂಪರ್: ಕೇವಲ 2 ತಿಂಗಳ ಅಂತರದಲ್ಲಿ ಮತ್ತೊಂದು ಬಾರಿಗೆ ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ. ಇದು ದೇಶದಲ್ಲಿನ ಆರ್ಥಿಕ ಚೇತರಿಕೆಗೆ ನೆರವು ನೀಡಲಿದೆ. ದರ ಕಡಿತದ ನಂತರ, ಗೃಹ, ವಾಹನ ಮತ್ತು ಕಾರ್ಪೊರೇಟ್ ಸಾಲಗಾರರಿಗೆ ಹೆಚ್ಚು ನೆರವಾಗಲಿದೆ. ಇವರು ಪಾವತಿಸುವ ಇಎಂಐ ಕಡಿಮೆ ಆಗಲಿದೆ. ರೆಪೋ ದರವು ಈಗ 6.25 ರಿಂದ ಶೇಕಡಾ 6 ಕ್ಕೆ ಇಳಿಕೆ ಆಗಿದೆ.
6.25 ರಿಂದ ಶೇ 6ಕ್ಕೆ ರೆಪೋ ರೇಟ್ ಇಳಿಕೆ: ಫೆಬ್ರವರಿಯಲ್ಲಿ ಆರ್ಥಿಕ ನೀತಿ ಪ್ರಕಟಿಸಿದ್ದ ಆರ್‌ಬಿಐ ಆಗ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 6.25 ಶೇಕಡಾಕ್ಕೆ ಇಳಿಕೆ ಮಾಡಿತ್ತು. ಮೇ 2020 ರಲ್ಲಿ ಆರ್ ಬಿಐ ಮಾಡಿದ್ದ ದರ ಕಡಿತದ ಬಳಿಕ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಈ ನಿರ್ಧಾರ ಕೈಗೊಂಡಿತ್ತು. ಇದಾದ ಬಳಿಕ ಎರಡೇ ತಿಂಗಳಲ್ಲಿ ಮತ್ತೆ 25 ಬೇಸಿಸ್ ಪಾಯಿಂಟ್ ಕಡಿಮೆ ಮಾಡಿದೆ. ದರಗಳ ಕೊನೆಯ ಪರಿಷ್ಕರಣೆ ಫೆಬ್ರವರಿ 2023 ರಲ್ಲಿ ಮಾಡಲಾಗಿತ್ತು. ಆಗ ರೆಪೋದರವನ್ನು ದರವನ್ನು 25 ಬೇಸಿಸ್ ಪಾಯಿಂಟ್ ಏರಿಕೆ ಮಾಡುವ ಮೂಲಕ ಶೇಕಡಾ 6.5 ಕ್ಕೆ ಹೆಚ್ಚಿಸಲಾಗಿತ್ತು.
ಜಿಡಿಪಿ 6.5 ಇರಲಿದೆ ಎಂದು ಅಂದಾಜಿಸಿದ ಆರ್‌ಬಿಐ: ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಅವಿರೋಧವಾಗಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಇಳಿಸಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಜಾಗತಿಕ ಅನಿಶ್ಚಿತತೆಯಿಂದಾಗಿ ಆರ್‌ಬಿಐ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಹಿಂದಿನ ಶೇ.6.7ರಿಂದ ಶೇ.6.5ಕ್ಕೆ ಇಳಿಕೆ ಮಾಡಿದೆ.