ಬೆಂಗಳೂರು ಏಪ್ರಿಲ್ 27 : ವಿಶ್ವ ಆಭರಣ ಕ್ಷೇತ್ರದಲ್ಲಿ ಬೆಂಗಳೂರು ನಗರದ ಹೆಸರನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ರತ್ನ ಮತ್ತು ಆಭರಣ ಉದ್ಯಮದಲ್ಲಿ ತೊಡಗಿಕೊಂಡಿರುವ ಮಹಿಳಾ ಉದ್ಯಮಿಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್ ಅಭಿಪ್ರಾಯಪಟ್ಟರು.
- ಇಂದು ನಗರದ ಖಾಸಗಿ ಹೋಟೇಲ್ ನಲ್ಲಿ ಹೀರಾ ಜವೇರಾತ್ ಟ್ರೇಡ್ ಮೀಡಿಯಾ ಗ್ರೂಪ್ ಎಂಟರ್‌ಪ್ರೈಸಸ್ ಸಹಯೋಗದೊಂದಿಗೆ ಐಬಿಜೆಎಯ ಆಭರಣ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಡಾ. ಚೇತನ್ ಕುಮಾರ್ ಮೆಹ್ತಾ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 3 ನೇ ಆವೃತ್ತಿಯ ಐಬಿಜೆಎ ಗೋಲ್ಡನ್ ಗರ್ಲ್ಸ್ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ನಗರ ವಿಶ್ವ ರತ್ನ ಮತ್ತು ಆಭರಣ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳ ಪಾತ್ರ ಹಿರಿದಾಗಿದೆ. ಇಂತಹ ಉದ್ಯಮಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಬಹಳ ಶ್ಲಾಘನೀಯ ಎಂದರು.
ಐಬಿಜೆಎಯ ಆಭರಣ ವಿಭಾಗದ *ರಾಷ್ಟ್ರೀಯ ಅಧ್ಯಕ್ಷ ಡಾ. ಚೇತನ್ ಕುಮಾರ್ ಮೆಹ್ತಾ ಮಾತನಾಡಿ, ಮಹಿಳೆಯರನ್ನು ಬಲಶಾಲಿಗಳನ್ನಾಗಿ ಮಾಡುವುದು ಈಗಿನ ಸ್ತ್ರೀವಾದವಲ್ಲ. ಮಹಿಳೆಯರು ಈಗಾಗಲೇ ಶಕ್ತಿಶಾಲಿಗಳಾಗಿದ್ದಾರೆ. ರತ್ನ ಮತ್ತು ಆಭರಣ ಉದ್ಯಮವು ಪ್ರಮುಖ ಮಹಿಳಾ ಉದ್ಯಮಿಗಳೊಂದಿಗೆ ಮಿಂಚುತ್ತಿದೆ. ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ನಮ್ಮನ್ನು ಮುನ್ನಡೆಸಿ, ಉದ್ಯಮದ ಬೆನ್ನೆಲುಬಾಗಿದ್ದಾರೆ. ಆಭರಣ ವಿನ್ಯಾಸ ಮತ್ತು ಉತ್ಪಾದನೆಯ ಪ್ರತಿಯೊಂದು ಅಂಶಕ್ಕೂ ಕೊಡುಗೆ ನೀಡುತ್ತಿದ್ದಾರೆ. ಈ ಪ್ರಶಸ್ತಿಗಳು ಅಚಲ ಉತ್ಸಾಹದಿಂದ ಹಲವಾರು ಸವಾಲುಗಳನ್ನು ಜಯಿಸಿ, ಯಶಸ್ಸನ್ನು ಸಾಧಿಸಿದ ಮತ್ತು ಶ್ರೇಷ್ಠತೆಯ ಹೊಸ ಮಾನದಂಡಗಳನ್ನು ಸ್ಥಾಪಿಸಿದ ಉದ್ಯಮಿಗಳನ್ನು ಗೌರವಿಸಿದ್ದೇವೆ ಎಂದು ಹೇಳಿದರು.
ಐಬಿಜೆಎ ರಾಷ್ಟ್ರೀಯ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಮಾತನಾಡಿ , ಬೆಂಗಳೂರಿನಲ್ಲಿ ಆಯೋಜಿಸಲಾದ ಈ ವರ್ಷದ ಆವೃತ್ತಿಯು ವ್ಯಾಪಾರದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಅವರ ನಾಯಕತ್ವವನ್ನು ಗುರುತಿಸಲು ನಮ್ಮ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಜಿಜಿಎ ಸಂಚಾಲಕಿ ಮತ್ತು ಬಜಾಜ್ ಓವರ್‌ಸೀಸ್ ಲಿಮಿಟೆಡ್‌ನ ನಿರ್ದೇಶಕರಾದ ರೀನಾ ಶುಕ್ಲಾ ಮಾತನಾಡಿ, ಹಲವಾರು ಸವಾಲುಗಳ ಹೊರತಾಗಿಯೂ, ಶಕ್ತಿ ಮತ್ತು ಉತ್ಸಾಹದಿಂದ ಅಭ್ಯುದಯ ಹೊಂದಿದ ಮಹಿಳಾ ಉದ್ಯಮಿಗಳನ್ನು ಗುರುತಿಸುತ್ತಿರುವುದು ಹೆಮ್ಮೆಯ ವಿಷಯ. ಗೋಲ್ಡನ್ ಗರ್ಲ್ಸ್ ಪ್ರಶಸ್ತಿಗಳು ಅವರ ಸಾಧನೆಗಳನ್ನು ಗೌರವಿಸುವ ಮಾರ್ಗವಾಗಿದೆ. ಗೋಲ್ಡನ್ ಗರ್ಲ್ಸ್ ಪ್ರಶಸ್ತಿಗಳ 3 ನೇ ಆವೃತ್ತಿಯು ಆಭರಣ ವ್ಯಾಪಾರದ ಅತ್ಯುತ್ತಮ ಪ್ರತಿಭೆ, ಪಾಲುದಾರರು ಮತ್ತು ಬದಲಾವಣೆ ತರುವವರನ್ನು ಒಟ್ಟುಗೂಡಿಸುವ ನಿರೀಕ್ಷೆಯಿದೆ, ಇದು ವ್ಯವಹಾರದಲ್ಲಿ ಮಹಿಳಾ ಸಬಲೀಕರಣದ ಭವ್ಯ ಆಚರಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 13 ಜನ ಮಹಿಳಾ ಉದ್ಯಮಿಗಳಿಗೆ “ಗೋಲ್ಡನ್ ಗರ್ಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಆಭರಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಶ್ರೀಲಕ್ಷ್ಮಿ ಕಾಮತ್, ಬಳ್ಳಾರಿಯ ಉದ್ಯಮಿಯಾದ ಭಾನುಪ್ರಸಾದ್ ನಾಯ್ಡು ಉಪಸ್ಥಿತರಿದ್ದರು.