ಬೆಂಗಳೂರು: ಬೆಂಗಳೂರಲ್ಲಿ ಟ್ರಾಫಿಕ್ ಆಂದ್ರೆ ಎಂಥವರು ಬೆಚ್ಚಿಬೀಳ್ತಾರೆ, ಕಿಲೋಮೀಟರ್ ಗಟ್ಟಲೆ ಸಂಚಾರ ದಟ್ಟಣೆಯಿಂದ ಸವಾರರು ಹೈರಾಣಾಗಿ ಹೋಗ್ತಾರೆ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ಲಾನ್ ರೂಪಿಸಲಾಗುತ್ತಿದೆ,
ಬೆಂಗಳೂರು ಜನರಿಗೆ ದೊಡ್ಡ ತಲೆ ನೋವಾಗಿ ಕಾಡ್ತಿರೋ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸುರಂಗ ಮಾರ್ಗ ಹಾಗೂ ಬಹು ಹಂತದ ಫ್ಲೈ ಓವರ್ ನಿರ್ಮಾನ ಸೂಕ್ತ ಎಂದು ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದಾರೆ,
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಡ್ಕರಿ ಅವರನ್ನು ಭೇಟಿಯಾಗಿ ಸಂಚಾರ ದಟ್ಟಣೆ ನಿವಾರಣೆಗೆ ಟನೆಲ್ ರಸ್ತೆ ನಿರ್ಮಾಣಕ್ಕೆ ನೆರವಾಗುವ ಸಂಬಂಧ ಪ್ರಸ್ತಾವ ಸಲ್ಲಿಸಿದ್ದರು, ಸುದೀರ್ಘ ಚರ್ಚೆ ನಡೆಸಿರುವ ಗಡ್ಕರಿ ಹಲವು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ,
ಬೆಂಗಳೂರಿನ ಬೆಳವಣಿಗೆಗೆ ಹೊಸ ದಿಕ್ಕು ತೋರಲು ಟನೆಲ್ ರಸ್ತೆಗಳು ಸೂಕ್ತ ಎಂಬುದಾಗಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ನಾನು ಸಲಹೆ ನೀಡಿದ್ದೆನೆ, ಹಾಗೆಯೇ ಸದ್ಯ ಬಳಕೆಯಲ್ಲಿರುವ ಮೇಲುಸೇತುವೆಗಳಿಗೆ ಹೆಚ್ಚುವರಿಯಾಗಿ ಎರಡು ಪಥಗಳನ್ನು ಅಳವಡಿಸಲಬಹುದಾಗಿದೆ ಎಂದು ಗಡ್ಕರಿ ಹೇಳಿದ್ದಾರೆ,
ಬೆಂಗಳೂರು ಟ್ರಾಫಿಕ್ ನಿವಾರಣೆಗೆ ಗಡ್ಕರಿ ಪ್ಲಾನ್! ಸಿದ್ದುಗೆ ಸಲಹೆ ಏನು..?
April 09, 20250 minute read
0