ವಿಧಾನಸೌಧ ವೀಕ್ಷಣೆಗೂ 'ಪ್ರವೇಶ ಶುಲ್ಕ' ವಿಧಿಸಿದ ಸರ್ಕಾರ.....!?

varthajala
0


ಬೆಂಗಳೂರು: ರಾಜ್ಯ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ವಿಧಾನಸೌಧವನ್ನು ಸಾರ್ವಜನಿಕರು ಉಚಿತವಾಗಿ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು. ಈಗ ಹಾಗಿಲ್ಲ... ವಿಧಾನಸೌಧ ವಿಕ್ಷಿಸಲು ಪ್ರವೇಶ ಶುಲ್ಕ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ರಾಷ್ಟçಪತಿ ಭವನ ಮತ್ತು ಸಂಸತ್ ಭವನದ ಮಾದರಿಯಲ್ಲಿ, ಈಗ ವಿಧಾನಸೌಧ ವೀಕ್ಷಣೆಗೆ ಪ್ರವಾಸಿಗರು ಶುಲ್ಕ ನೀಡಬೇಕಾಗುತ್ತದೆ.


ರಜಾ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಪ್ರತಿ ತಂಡದಲ್ಲಿ 30 ಜನರನ್ನು ಒಳಗೊಂಡು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ವೀಕ್ಷಣೆ ನಡೆಸಲಾಗುತ್ತದೆ. ಪ್ರವಾಸಿಗರು ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು ಮತ್ತು ನಿಗದಿತ ರೂಟ್ ಮ್ಯಾಪ್‌ನಂತೆ ವೀಕ್ಷಣೆ ಮಾಡಬೇಕಿದೆ...

1956ರಲ್ಲಿ ನಿರ್ಮಾಣಗೊಂಡ ಈ ಭವ್ಯ ಸುಂದರ ಕಟ್ಟಡವನ್ನು ಕೆಂಗಲ್ ಹನುಮಂತಯ್ಯ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿತ್ತು. ಅಂದಾಜು 60 ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿರುವ ಈ ಕಟ್ಟಡವು ರಾಜ್ಯ ಸರ್ಕಾರದ ಆಡಳಿತ ಕೇಂದ್ರವೂ ಹೌದು.

ಸಾರ್ವಜನಿಕರಿಗಾಗಿ ವೀಕ್ಷಣೆಗಾಗಿ ಪ್ರವೇಶ ಶುಲ್ಕ ವಿಧಿಸುವ ಈ ಹೊಸ ಕ್ರಮವು ಜನತೆಯಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟಿಸಿದೆ. ಸರ್ಕಾರಕ್ಕೆ ಇದರಿಂದ ಆದಾಯವನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯಿದೆ. ಮತ್ತೊಂದೆಡೆ, ಸಾರ್ವಜನಿಕರು ಉಚಿತವಾಗಿ ವೀಕ್ಷಣೆ ಮಾಡುವ ಹಕ್ಕು ಕಳೆದುಕೊಳ್ಳಲಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.?

Post a Comment

0Comments

Post a Comment (0)