ತಮಿಳುನಾಡಿನ ರಾಮೇಶ್ವರಂ ಬಳಿ ತಿರುಪಿಲ್ಲಣಿ ಎಂಬ ಊರು ಇದೆ.ಇಲ್ಲಿ ರಾಮನ ದೇವಾಲಯ ಇದೆ.ಇದು ಆದಿ ಜಗನ್ನಾಥ ಕ್ಷೇತ್ರ ಎಂದೇ ಪ್ರಸಿದ್ಧವಾಗಿದೆ.ಹತ್ತಿರದಲ್ಲಿ ಧನುಷ್ಕೋಟಿ ಇದೆ.
ರಾಮನು ಸೀತೆಯನ್ನು ಹುಡುಕುತ್ತಾ ಬಂದಾಗ ಈ ಪ್ರದೇಶದಲ್ಲಿ ವಿಶ್ರಾಂತಿ ಪಡೆದನಂತೆ. ಆಗ ಇಲ್ಲಿ ದರ್ಭೆಯ ಹಾಸಿಗೆಯ ಮೇಲೆ ಪವಡಿಸಿದ್ದನಂತೆ.
ಅಲ್ಲಿ ರಾಮನ ಪಾದ ಸಹಿತ ಇದೆ.ಅದಕ್ಕೆ ಪೂಜೆ ಸಲ್ಲುತ್ತದೆ.ಅಲ್ಲಿನ ಅರ್ಚಕರು ಶ್ರೀವೈಷ್ಣವರು.ಅವರ ಸಂಪ್ರದಾಯದಂತೆ ಪೂಜೆ ಜರುಗುತ್ತದೆ.ಅಲ್ಲಿನ ಕೆಲ ಜನ ಲೋಕಲ್ ಗೈಡ್ ಗಳಂತೆ ಮಾರ್ಗದರ್ಶನ ಮಾಡುವರು.ರಾಮರ ಪಾದಕ್ಕೆ ನಮಸ್ಕಾರ ಮಾಡಿ ಹಣ ಕೊಡಿ ಎನ್ನುವ ಜನರು ಇದ್ದಾರೆ.
ಹತ್ತಿರದಲ್ಲಿ ಇರುವ ಜಲಕ್ಷೇತ್ರದಲ್ಲಿ ತೀರ್ಥಶ್ರಾದ್ದ ಮಾಡುವವರು ಕಾಣ ಸಿಗುತ್ತಾರೆ.ರಾಮನ ಪಾದದ ಗಾತ್ರ ದೊಡ್ಡದು.ನಮ್ಮ ಪೂರ್ವಿಕರು ಗಾತ್ರದಲ್ಲಿ ದೊಡ್ಡವರಾಗಿದ್ದರ.ಇದು ಸಹಿತ ಸಂಶೋಧನೆಗೆ ಅರ್ಹವಾದ ವಿಷಯ.
ಹತ್ತಿರದಲ್ಲಿ ಕೆಲವು ಕಲಾ ವಸ್ತುಗಳನ್ನು ಮಾರುತ್ತಾರೆ.ಒಟ್ಟಿನಲ್ಲಿ ಸುಂದರ ವೈಷ್ಣವ ಕ್ಷೇತ್ರ.ಒಮ್ಮೆ ನೋಡಿ ಬನ್ನಿರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com