ರಾಮನಗರ, ಏಪ್ರಿಲ್ 19 : ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ದಾಳಿಯಲ್ಲಿ ರಿಕ್ಕಿ ರೈಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದ ತನಿಖೆ ಚುರುಕುಗೊಂಡಿದೆ. ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮುತ್ತಪ್ಪ ರೈ ಅವರು ಬೆಂಗಳೂರಿನಿಂದ ಮಂಗಳೂರು, ಗೋವಾ, ಮೈಸೂರಿನವರೆಗೆ ವ್ಯಾಪಕ ಜಮೀನು, ವ್ಯಾಪಾರ ಚಟುವಟಿಕೆಗಳನ್ನು ಹೊಂದಿದ್ದರು. ನಿಧನದ ಬಳಿಕ ಈ ಎಲ್ಲಾ ಆಸ್ತಿ ಮತ್ತು ವ್ಯವಹಾರಗಳನ್ನು ರಿಕ್ಕಿ ರೈ ನಿರ್ವಹಿಸುತ್ತಿದ್ದಾರೆ. ಈ ಆಸ್ತಿ ಹಂಚಿಕೆಯಲ್ಲಿ ಉಂಟಾದ ಮನಸ್ತಾಪ ಮತ್ತು ಕಾನೂನು ವಿವಾದಗಳು ಈಗ ಗಂಭೀರ ತಿರುವು ಪಡೆದಿವೆ. ಪೊಲೀಸರು ಇದನ್ನೂ ತನಿಖೆ ನಡೆಸುತ್ತಿದ್ದಾರೆ.
ಆಸ್ತಿ ಹಂಚಿಕೆಯಲ್ಲಿ ಉಂಟಾದ ವೈಷಮ್ಯದಿಂದಾಗಿ ದಾಳಿ ನಡೆದಿರಬಹುದು ಎನ್ನಲಾಗಿದೆ. ಮಿಥುನ್ ರೈ, ಮುತ್ತಪ್ಪ ರೈ ಅವರ ಜೊತೆಗೆ ವರ್ಷಗಳಿಂದ ಕೆಲಸ ಮಾಡುತ್ತಿದ್ದ, ಮದುವೆ ನಂತರದ ಆಸ್ತಿ ತಕರಾರುಗಳಿಂದ ದೂರಾಗಿದ್ದ ಎನ್ನಲಾಗಿದೆ. ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ಹಾಗೂ ಅವರ ಜೊತೆಗಿನ ಸಂಬಂಧಿತ ವ್ಯಕ್ತಿಗಳು ರಾಕೇಶ್ ಮಲ್ಲಿ (A1), ನಿತೇಶ್ ಶೆಟ್ಟಿ (A3), ವೈದ್ಯನಾಥನ್ (A4) ವಿರುದ್ಧ FIR ದಾಖಲಾಗಿದೆ. ಈ ನಾಲ್ವರು ಆರೋಪಿಗಳ ವಿರುದ್ಧ ಸುಪಾರಿ ಕೊಟ್ಟಿರುವ ಶಂಕೆ ಎದುರಾಗಿದ್ದು, ಈ ದಾಳಿ ಒಂದು ಯೋಜಿತ ಕೃತ್ಯವಾಗಿದೆ ಎನ್ನಲಾಗಿದೆ.
ಮುತ್ತಪ್ಪ ರೈ ಸಾವನ್ನಪ್ಪುವ ಮುನ್ನ ಅವರ ಮಕ್ಕಳಿಗೆ ವಿಲ್ ಬರೆದು ಆಸ್ತಿ ಹಂಚಿಕೆ ಮಾಡಿದ್ರು. ಆದರೆ ಅನುರಾಧಾ ತಮ್ಮ ಪಾಲಿನ ಆಸ್ತಿಯನ್ನು ನಿತೇಶ್ ಎಸ್ಟೇಟ್‌ಗೆ ಮಾರಾಟ ಮಾಡಿದ್ದರು. ಈ ಕುರಿತು ರಿಕ್ಕಿ ರೈ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು, ಕೋರ್ಟ್ ಅವರು ಆಸ್ತಿಯಲ್ಲಿ ಹಕ್ಕು ಹೊಂದಿರುವುದಾಗಿ ತೀರ್ಮಾನಿಸಿದೆ. ಈ ತೀರ್ಮಾನದ ನಂತರವೇ ಈ ದಾಳಿ ನಡೆದಿದೆ ಎನ್ನುವ ಬಗ್ಗೆ ಅನುಮಾನ ಹೆಚ್ಚಿಸಿದೆ.
ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಈ ಶೂಟೌಟ್ ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ, ಫಾಮ್‌ಹೌಸ್ ಸುತ್ತಲಿನ ಸಿಡಿಆರ್ ಡೇಟಾ ಸಂಗ್ರಹ, ಹಳೆಯ ಶತ್ರುಗಳ ಪತ್ತೆ, ಕುಟುಂಬದ ಸದಸ್ಯರಿಂದ ಮಾಹಿತಿ ಸಂಗ್ರಹ, ಸ್ಥಳೀಯ ಮಾನಿಟರಿಂಗ್ ತಂಡಗಳ ರಚಿಸಲಾಗಿದೆ.