ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಎರಡು ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಮತ್ತೊಂದು ಶಾಕ್ ಅನ್ನು ನೀಡಿದೆ,
ಸಿಲಿಂಡರ್ ದರವನ್ನು 50 ರೂ ಕ್ಕೆ ಹೆಚ್ಚಿಸಿದ್ದರಿಂದ
ಕೇಂದ್ರ ಸರ್ಕಾರದಿಂದ ಗ್ರಾಹಕರಿಗೆ ಬರಸಿಡಿಲು ಬಡಿದಂತಾಗಿದೆ,
ಸಿಲಿಂಡರ್ ದರ ಏರಿಕೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 50 ರೂಪಾಯಿ ಮತ್ತಷ್ಟು ಹೊರೆಯಾಗಲಿದೆ,
ಅಡುಗೆ ಅನಿಲ ವಿತರಣಾ ದರವು ರೂ.50ಕ್ಕೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ತೈಳ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಮಾಹಿತಿ ನೀಡಿದ್ದಾರೆ, ಉಜ್ವಲ್ ಯೋಜನೆ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಅನಿಲ ಬೆಲೆಯ ಬಿಸಿ ತಟ್ಟಲಿದೆ,
ಉಜ್ವಲ ಯೋಜನೆಯಡಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸಾಮಾನ್ಯ ಬಳಕೆದಾರರಿಗೆ ರೂ 803 ದಿಂದ 853 ರೂಪಾಯಿಗೆ ಏರಿಕೆಯಾಗಲಿದೆ, ಉಜ್ವಲ ಯೋಜನೆಗೆ ಒಳಪಡದ ಗ್ರಾಹಕರಿಗೂ 50 ರೂಪಾಯಿ ಬೆಲೆ ಏರಿಕೆ ಅನ್ವಯಿಸಲಿದೆ,