ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ವಿನೂತನ ಮಾದರಿಯ “ರೈತ ಸಂತೆ”ಆಯೋಜನೆ.

varthajala
0

ಬೆಂಗಳೂರು, ಏಪ್ರಿಲ್ 24, (ಕರ್ನಾಟಕ ವಾರ್ತೆ) : ಕೃಷಿ ಸಂಬಂಧಿ ವಸ್ತುಗಳಿಗೆ ಒಂದೇ ಸೂರಿನಡಿ ಮಾರುಕಟ್ಟೆಯನ್ನುಕಲ್ಪಿಸುವ ಹಾಗೂ ವಿವಿಧ ಬಗೆಯ ಹಲಸು / ಮಾವು ತಳಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ,  ಕಾರ್ಯಚಟುವಟಿಕೆಗಳು ಮತ್ತು ಉತ್ಪನ್ನಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು “ರೈತ ಸಂತೆÀ”ಯನ್ನು 2025ನೇ ಏಪ್ರಿಲ್ 26ದÀಂದು ಬೆಂಗಳೂರಿನ ಜಿ.ಕೆ.ವಿ.ಕೆ ಆವರಣದಲ್ಲಿ ಬೆಳಿಗ್ಗೆ 7.00 ರಿಂದ ಸಂಜೆ 4.00 ಗಂಟೆಯವರೆಗೆ ಹಮ್ಮಿಕೊಂಡಿದೆ.

ರೈತರ ಸಂತೆಯಲ್ಲಿ ಕೃಷಿ ಉತ್ಪನ್ನ / ಪರಿಕರಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಿತ್ತನೆ ಬೀಜಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ತೋಟಗಾರಿಕೆ: ಹಣ್ಣುಗಳು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣೆ: ಜೈವಿಕ ಕೀಟನಾಶಕಗಳು, ಗುಣಮಟ್ಟದ ಪದಾರ್ಥಗಳು / ಪರಿಕರಗಳು, ಕರಕುಶಲ ವಸ್ಥುಗಳು, ಗವ್ಯೋತ್ಪನ್ನಗಳು, ಅಡಿಕೆ ಉತ್ಪನ್ನಗಳು, ರೇಷ್ಮೆ ಕೃಷಿಯ ಉಪ – ಉತ್ಪನ್ನಗಳು, ಅಣಬೆ, ಜೇನು ಕೃಷಿ, ವಾಣಿಜ್ಯೀಕರಣ ಉತ್ಪನ್ನಗಳು, ಪಶು ಸಂಗೋಪನೆ, ಕೃಷಿ ಪ್ರಕಟಣೆಗಳು, ವಿಶ್ವವಿದ್ಯಾನಿಲಯದ ಬಗ್ಗೆ ಮಾಹಿತಿ, ತಾರಸಿ ಕೈತೋಟ / ನಗರ ತೋಟಗಾರಿಕೆ ಇನ್ನು ಮುಂತಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿರುತ್ತದೆ. ಸಾರ್ವಜನಿಕರು ಮತ್ತು ರೈತರು ಈ ವಿನೂತನ ಸಂತೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಾರ್ತಾ ತಜ್ಞರಾದ ಕೆ.ಪಿ. ರಘುಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)