ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಲ್ಲಿರುವ ಕನ್ನಡ ನಟಿ ರನ್ಯಾ ರಾವ್‌ಗೆ ದೊಡ್ಡ ಆಘಾತ ಎದುರಾಗಿದೆ. ರನ್ಯಾರಾವ್ ಪತಿ ಜತೀನ್ ಹುಕ್ಕೇರಿ ಅವರು ವಿಚ್ಛೇದನಕ್ಕಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸುವ ಮೂಲಕ ರನ್ಯಾ ರಾವ್‌ಗೆ ಡೈವೋರ್ಸ್ ಹೇಳಿ ಇತಿಶ್ರೀ ಹಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.. ಜಾಮೀನು ಸಿಗದ ಒತ್ತಡದ ಮಧ್ಯೆ ಈ ಹೊಸ ಬೆಳವಣಿಗೆ ರನ್ಯಾ ಅವರ ವೈಯಕ್ತಿಕ ಮತ್ತು ಕಾನೂನು ಜೀವನಕ್ಕೆ ಇನ್ನಷ್ಟು ಸಂಕಷ್ಟ ತಂದಿದೆ.
ಮದುವೆಯಾದಾಗಿನಿAದ ರನ್ಯಾ ಜೊತೆಗೆ ಬಹಳಷ್ಟು ನೋವು ಅನುಭವಿಸಿದ್ದೇನೆ. ಇಂದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ'' ಎಂದು ತಿಳಿಸಿದ್ದಾರೆ. ಮದುವೆಯ ಆರಂಭದಿAದಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಇದ್ದವು ಎಂದು ಅವರು ಹೇಳಿದ್ದಾರೆ. ಕೆಲವು ತಿಂಗಳಿAದ ರನ್ಯಾ ರಾವ್ ಜೊತೆಗೆ ಅಂತರ ಕಾಯ್ದುಕೊಂಡಿದ್ದ ಜತೀನ್, ಈಗ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ರನ್ಯಾ ರಾವ್ ಅವರಿಗೆ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾಗೊಂಡಿದೆ. ಜೈಲಿನಲ್ಲಿ ಇರುವಾಗಲೇ ಪತಿಯಿಂದ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿರುವುದು ಅವರಿಗೆ ಡಬಲ್ ಶಾಕ್ ನೀಡಿದೆ. ಈ ಘಟನೆ ರನ್ಯಾ ರಾವ್ ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಿಳಿದುಬಂದಿದೆ. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ರನ್ಯಾ ಬಂಧನಕ್ಕೊಳಗಾದ ನಂತರ ಈ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಂಡಿವೆ. ಜತೀನ್ ಈಗ ಕಾನೂನು ಮಾರ್ಗದ ಮೂಲಕ ತಮ್ಮ ಸಂಬAಧವನ್ನು ಕೊನೆಗೊಳಿಸಲು ಮುಂದಾಗಿದ್ದಾರೆ. ರನ್ಯಾ ರಾವ್ ಅವರ ಕಾನೂನು ಹೋರಾಟ ಮತ್ತು ವೈಯಕ್ತಿಕ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದ್ದು, ಮುಂದೇನಾಗುವುದೋ ಕಾದು ನೋಡಬೇಕಿದೆ.