ವಕ್ಫ್ ತಿದ್ದುಪಡಿ ಬಿಲ್ ಪಾಸ್ ಆಗಿರೋದು ಇತಿಹಾಸದ ಕೆಟ್ಟ ದಿನ- ಬೋಸರಾಜು

varthajala
0

ಬೆಂಗಳೂರು: ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಬಿಲ್  ಅಂಗೀಕಾರ ಆಗಿರುವುದು ಇತಿಹಾಸದಲ್ಲಿ ಒಂದು ಕೆಟ್ಟ ದಿನ ಎಂದು ಸಚಿವ ಎನ್.ಎಸ್ ಬೋಸರಾಜು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.


ವಿಕಾಸಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ, ಆರ್‌ಎಸ್‌ಎಸ್  ಪ್ರಯತ್ನದಿಂದ ಈ ಮಸೂದೆ ತಂದಿದ್ದಾರೆ. ದೇಶದ ಎಲ್ಲಾ ವಿರೋಧ ಪಕ್ಷಗಳು ವಿಧೇಯಕವನ್ನು ವಿರೋಧ ಮಾಡಿದ್ದಾರೆ. ಜಂಟಿ ಸದನ ಸಮಿತಿಗೆ ಹೋದಾಗಲು ಸಮಿತಿಯ ಸಭೆಯಲ್ಲಿ ವಿರೋಧಿಸಿದ್ದಾರೆ. ತಮ್ಮ ಪ್ರಯತ್ನಕ್ಕೆ ಬಲ ತೋರಿಸಿ ಬಿಲ್ ಪಾಸ್ ಮಾಡಿಕೊಂಡಿದ್ದಾರೆ. ಇಡೀ ದೇಶದಲ್ಲಿ ವಿಪಕ್ಷಗಳು ವಿರೋಧ ಮಾಡಿವೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ವಿಚಾರ ಮಾಡುತ್ತೇವೆ. ಸಂವಿಧಾನಕ್ಕೆ ವಿರುದ್ಧವಾಗಿ ನರೇಂದ್ರ ಮೋದಿ ನಡೆದುಕೊಂಡಿದ್ದಾರೆ. ಗುರುವಾರ ಸಂಸತ್‌ನಲ್ಲಿ ನಡೆದಿರುವುದು ಕೆಟ್ಟ ದಿನ ಎಂದು ನಾವು ಭಾವಿಸುತ್ತೇವೆ. ಮುಂದೆ ಏನೇ ಪರಿಣಾಮ ಆದರೂ ಅದಕ್ಕೆ ಕೇಂದ್ರವೇ ಜವಾಬ್ದಾರಿವಹಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕದಲ್ಲಿ ಬಿಲ್ ಜಾರಿ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಏನು ಮಾಡಬೇಕು ಎಂದು ನಾವು ವಿಚಾರ ಮಾಡ್ತೀವಿ. ಬಿಲ್‌ಗೆ ನಾವು ವಿರೋಧ ಮಾಡಿದ್ದೇವೆ. 


Post a Comment

0Comments

Post a Comment (0)