ಮಾಹಿತಿ ಲೀಕ್‌ – ಗಂಭೀರ್‌ ಆಪ್ತ ಸೇರಿ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಕಿತ್ತೆಸೆದ ಬಿಸಿಸಿಐ

varthajala
0

 

ಮುಂಬೈ: ಕಳೆದ ವರ್ಷ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರರ್ದಶನ ನೀಡಿದ ಬಳಿಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ. ಸರಣಿಯ ಸಂದರ್ಭದಲ್ಲಿ ಡ್ರೆಸ್ಸಿಂಗ್‌ ರೂಮ್‌ (Dressing Room) ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಸಹಾಯಕ ಕೋಚ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಸೇರಿ ನಾಲ್ವರು ಕೋಚಿಂಗ್‌ ಸಿಬ್ಬಂದಿಯನ್ನ ಕಿತ್ತೆಸೆದಿದೆ.

ಬ್ಯಾಟಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಮತ್ತು ಮಸಾಜರ್ ಸಿಬ್ಬಂದಿಯನ್ನ ಬಿಸಿಸಿಐ ತೆಗೆದುಹಾಕಿದೆ. ಇದರಲ್ಲಿ ಟೀಂ ಇಂಡಿಯಾದ ಮುಖ್ಯಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರ ಆಪ್ತ ಅಭಿಷೇಕ್‌ ನಾಯರ್‌ (Abhishek Nayar) ಅವರನ್ನೂ ವಜಾಗೊಳಿಸಿರುವುದು ಗಮನಾರ್ಹ. ಗಂಭೀರ್‌ ಕೋಲ್ಕತ್ತಾ ನೈಟ್‌ರೈಡರ್ಸ್‌ ಫ್ರಾಂಚೈಸಿಯಲ್ಲಿದ್ದಾಗಲೇ ನಾಯ್‌ ಆಪ್ತರಾಗಿದ್ದರು. ಗಂಭೀರ್‌ ಟೀಂ ಇಂಡಿಯಾ ಕೋಚ್‌ ಆದ ಬಳಿಕ ಸಹಾಯಕ, ಬ್ಯಾಟಿಂಗ್‌ ಕೋಚ್‌ ಆಗಿ ಅವರನ್ನ ನೇಮಕ ಮಾಡಿಕೊಳ್ಳಲಾಯಿತು. ಸದ್ಯ ಮುಂಬರುವ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯೊಳಗೆ ಈ ಹುದ್ದೆಗೆ ಬೇರೆಯವರನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ.

Post a Comment

0Comments

Post a Comment (0)