ಬೆಂಗಳೂರು: ಇಂದು ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ, ಈ ಬೆನ್ನಲ್ಲೇ ಫೇಲ್ ಆದವರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ,
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ ಸಚಿವರು, ಯಾರ್ಯಾರು ಪರೀಕ್ಷೆ ಪಾಸ್ ಆಗಿದ್ದಾರೆ ಅಂತ ಲಿಸ್ಟ್ ಹಾಕಿದ್ದೇವೆ, ಫೈಲ್ ಅಂತ ಈಗಲೇ ಹೇಳಲು ಆಗಲ್ಲ, 2 ಅವಕಾಶ ನೀಡಲಾಗುತ್ತೆ, ಎರಡನೇ & ಮೂರನೇ ಎಕ್ಸಾಂ ಡೇಟ್ ಈಗಾಲೇ ಅನೌನ್ಸ್ ಮಾಡಿದ್ದೇವೆ, ಯಾಕಂದ್ರೆ ಈಗಿನಿಂದಲೇ ಸಿದ್ಧರಾಗಲಿ ಅನ್ನೋ ಉದ್ದೇಶದಿಂದ ಅನೌನ್ಸ್ ಮಾಡಿದ್ದೇವೆ ಎಂದರು,
ಇನ್ನು ಈ ಸಲ ಮಾತ್ರ ಎರಡನೇ ಎಕ್ಸಾಂ ಮತ್ತು ಮೂರನೇ ಎಕ್ಸಾಂಗೆ ಪರೀಕ್ಷಾ ಶುಲ್ಕ ಇರೋದಿಲ್ಲ, ಇದು ಶಿಕ್ಷಣ ಇಲಾಖೆಯ ಮಹತ್ವದ ಹೆಜ್ಜೆ ಆಗಿದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಜೆ ಸ್ಪೆಷಲ್ ಕ್ಲಾಸ್ ಮಾಡಲು ಸೂಚನೆ ನೀಡಿರುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ,
ಯಾರು ತೇರ್ಗಡೆ ಹೊಂದಿಲ್ಲ ಅಂತಹವರಿಗೆ ಇನ್ನು ಎರಡು ಅವಕಾಶ ಇದೆ, ಈ ನಿರ್ಧಾರಗಳಿಗೆ ಮುಖ್ಯ ಮಂತ್ರಿಗಳು ಕೂಡ ಪೂರ್ಣ ಸಹಕಾರ ಕೊಟ್ಟಿದ್ದಾರೆ, ಯಾವ ರೀತಿ ಇಂಪ್ರೂಮ್ ಮಾಡಬೇಕು ಅಂತ ಇಲಾಖೆಗೆ ಮನವಿ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು,
ಪಿಯುಸಿ ವಿದ್ಯಾರ್ಥಿಗಳೇ ಫೇಲ್ ಆದ್ರೆ ಡೋಂಟ್ ವೆರಿ-ಸಚಿವರು ಕೊಟ್ರು ಗುಡ್‍ನ್ಯೂಸ್-ಏನದು…?
April 08, 2025
0
Tags