ಬೀದರ್: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಹಾಕಿದಕ್ಕೆ ಬೀದರ್ ನ ವಿದ್ಯಾರ್ಥಿಯನ್ನು ಪರೀಕ್ಷೆಗೆ ಕೂರಿಸದಿರುವ ಪ್ರಕರಣ ಇಡೀ ರಾಜ್ಯವ್ಯಾಪ್ತಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದರ ನಡುವೆಯೇ ವಿದ್ಯಾರ್ಥಿಗೆ ನ್ಯಾಯಕೊಡಿಸಲು ಕೆಇಎ ಮುಂದಾಗಿದೆ,
ಈ ಬಗ್ಗೆ ಪ್ರಕಟಣೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಅವರು ಪ್ರಕರಣ ಗೊತ್ತಾದ ತಕ್ಷಣ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ, ವಸ್ತç ಸಂಹಿತೆಯಲ್ಲಿ ಎಲ್ಲಿಯೂ ಜನಿವಾರ ತೆಗೆಸಲು ಹೇಳಿಲ್ಲ ಅದರೂ ಎರಡೂ ಕೇಂದ್ರಗಳಲ್ಲಿ ಈ ರೀತಿ ನಡೆದಿರುವುದು ಖಂಡನೀಯ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಧರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು,
ಈಗಾಗಲೇ ಡಿಸಿಯಿಂದ ಕೆಇಎ ಸಂಪೂರ್ಣ ವರದಿ ಕೇಳಿದ್ದು, ಡಿಸಿ ವರದಿ ಕೊಟ್ಟ ಬಳಿಕ ವಿದ್ಯಾರ್ಥಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಕೆಇಎ ಮಾಡಿದೆ, ಅದರಂತೆ ಇಂದು ಅಥವಾ ನಾಳೆಯೊಳಗೆ ಕೆಇಎ ಈ ಕುರಿತ ನಿರ್ಧಾರ ಕೈಗೊಳ್ಳಲಿದೆ,
ಅಷ್ಟೇ ಅಲ್ಲದೇ ಗಣಿತ ವಿಷಯದಲ್ಲಿ ವಿಶೇಷ ಪ್ರಕರಣದ ಅಡಿಯಲ್ಲಿ ಅಂಕ ಕೊಡುವ ಸಾಧ್ಯತೆಯಿದ್ದು, ಒಂದು ವೇಳೆ ಇದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ಕೆಇಎ ವಿದ್ಯಾರ್ಥಿಗಳಿಗೆ ರ‍್ಯಾಂಕ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ,