'ಸಾತ್ತ್ವಿಕತೆ ಮತ್ತು ಧರ್ಮಾಚರಣೆ' ಇಲ್ಲದೆ ಶಾಶ್ವತ ಅಭಿವೃದ್ಧಿ ಅಸಾಧ್ಯ! - ದೆಹಲಿ ಸಮ್ಮೇಳನದಲ್ಲಿ ಸಂಶೋಧನೆ ಮಂಡನೆ

varthajala
0

 'ಸಾತ್ತ್ವಿಕತೆ ಮತ್ತು ಧರ್ಮಾಚರಣೆಇಲ್ಲದೆ ಶಾಶ್ವತ ಅಭಿವೃದ್ಧಿ ಅಸಾಧ್ಯ! - ದೆಹಲಿ ಸಮ್ಮೇಳನದಲ್ಲಿ ಸಂಶೋಧನೆ ಮಂಡನೆ

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ 'ರೂರಲ್ ಎಕನಾಮಿಕ್ ಫೋರಂ'ನಲ್ಲಿ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ ಮತ್ತು 'ಸ್ಪಿರಿಚ್ಯುಯಲ್ ಸೈನ್ಸ್ ರಿಸರ್ಚ್ ಫೌಂಡೇಶನ್' ವತಿಯಿಂದ ಶೋಧ ಪ್ರಬಂಧ ಮಂಡಿಸಲಾಯಿತು. ಅದರಲ್ಲಿ ಪ್ರಾಚೀನ ಭಾರತೀಯ ಧರ್ಮಶಾಸ್ತ್ರಗಳ 'ಸಾತ್ತ್ವಿಕತೆ', ಧರ್ಮಾಚರಣೆ, ಭಾರತೀಯ ಗೋಮಾತೆಯ ಮಹತ್ವ ಮತ್ತು ನಾಮಜಪವೇ ನಿಜವಾದ ಅರ್ಥದಲ್ಲಿ ಶಾಶ್ವತ ಅಭಿವೃದ್ಧಿಯ ಮುಖ್ಯ ಅಂಶಗಳಾಗಿವೆ. ಕೇವಲ ಪರಿಸರ ಸ್ನೇಹಿ ತಂತ್ರಜ್ಞಾನವಲ್ಲ,ಆಧ್ಯಾತ್ಮಿಕ ಶುದ್ಧತೆಯ ಆಧಾರಿತ ಚಿಂತನೆಯಿಲ್ಲದೆ ಮಾನವ ಜೀವನ ಮತ್ತು ಭೂಮಿಯ ಭವಿಷ್ಯ ಸುರಕ್ಷಿತವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಸಂಶೋಧನೆಯನ್ನು ಶ್ರೀಶಾನ್ ಕ್ಲಾರ್ಕ್ ಅವರು ಮಂಡಿಸಿದರುಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು  ಶೋಧ ಪ್ರಬಂಧದ ಮಾರ್ಗದರ್ಶಕರಾಗಿದ್ದಾರೆ.

 

 ಸಮ್ಮೇಳನದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು  ಸಂಶೋಧನೆಯನ್ನು ಶ್ಲಾಘಿಸಿದರುಕೇಂದ್ರ ಜವಳಿ ಸಚಿವ ಶ್ರೀಗಿರಿರಾಜ ಸಿಂಗ ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಹಾಗೂ 'ಭಾರತದ ಸಮೃದ್ಧ ಆಧ್ಯಾತ್ಮಿಕ ಸಂಪನ್ಮೂಲಗಳ ಸಹಾಯದಿಂದ ತಡೆಗಟ್ಟುವ ಮತ್ತು ಉಪಾಯಾಭಿಮುಖ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಅದರ ಗ್ರಾಮೀಣ ಆರ್ಥಿಕತೆಗೆ ಆಗುವ ಲಾಭಕುರಿತ ಸಂಶೋಧನೆಯನ್ನು ಶ್ಲಾಘಿಸಿದರು.ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಇಲ್ಲಿಯವರೆಗೆ 118 ವೈಜ್ಞಾನಿಕ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು,ಅದರಲ್ಲಿ 14 ಸಮ್ಮೇಳನಗಳಲ್ಲಿ 'ತ್ಯುತ್ತಮ ಮಂಡನೆಪ್ರಶಸ್ತಿಗಳನ್ನು ಪಡೆದಿದೆ.


ಕೈಗಾರಿಕಾ ಕ್ರಾಂತಿಯಿಂದ ಇಂದಿನವರೆಗೆ ಅಭಿವೃದ್ಧಿಯ ಹಾದಿಯಲ್ಲಿ ಪರಿಸರದ ಬಗ್ಗೆ ಹೆಚ್ಚು ಗಮನ ಹರಿಸಲಾಗಿಲ್ಲ.'ಶಾಶ್ವತ ಅಭಿವೃದ್ಧಿಎಂಬ ಪರಿಕಲ್ಪನೆಯನ್ನು 1972 ರಲ್ಲಿ ಸ್ಟಾಕಹೋಮ್ ಸಮ್ಮೇಳನದಲ್ಲಿ ಮಂಡಿಸಲಾಗಿದ್ದರೂ, 50 ವರ್ಷಗಳ ನಂತರವೂ ಅದರ ಅನುಷ್ಠಾನವು ಪರಿಣಾಮಕಾರಿಯಾಗಿಲ್ಲಇಂದಿನ ಪರಿಸರ ಬಿಕ್ಕಟ್ಟುಗಳಿಗೆ ಕಾರಣ ಮಾನವ ಮನೋವೃತ್ತಿಯಲ್ಲಿರುವ ಅಸಾತ್ತ್ವಿಕತೆಯಲ್ಲಿದೆಅದಕ್ಕಾಗಿಯೇ 'ಅಭಿವೃದ್ಧಿಕೇವಲ ಭೌತಿಕ ಪರಿಕಲ್ಪನೆಯಾಗಿರದೆ ಅದು ಆಧ್ಯಾತ್ಮಿಕ ದೃಷ್ಟಿಯಿಂದಲೂ ಸಾತ್ತ್ವಿಕವಾಗಿರಬೇಕು ಎಂಬುದು  ಸಂಶೋಧನೆಯ ತೀರ್ಮಾನವಾಗಿದೆ.

 

'ಜಿಡಿವಿ ಬಾಯೋವೆಲ್'ಎಂಬ ತಂತ್ರಜ್ಞಾನವನ್ನು ಬಳಸಿ ನಡೆಸಿದ ಒಂದು ಪ್ರಯೋಗದಲ್ಲಿಸ್ನಾನದ ನೀರಿನಲ್ಲಿ ಗೋಮೂತ್ರದ ಕೆಲವು ಹನಿಗಳನ್ನು ಹಾಕಿದಾಗ ವ್ಯಕ್ತಿಯ ದೇಹದ ಸಪ್ತಚಕ್ರಗಳು  ಶೇ. 65 ರಿಂದ ಶೇ. 78 ರಷ್ಟು ಸಮತೋಲಿತವಾಗಿ ಕಾರ್ಯನಿರ್ವಹಿಸುತ್ತವೆಆದರೆ ಗೋಮೂತ್ರದ ಕೆಲವು ಹನಿಗಳನ್ನು ಸೇವಿಸಿದಾಗ ಅವು  ಶೇ. 90 ರಷ್ಟು ಸಮತೋಲಿತವಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿದುಬಂದಿದೆಹಸುವಿನ ಉಪಸ್ಥಿತಿಯಿಂದ ಸುತ್ತಮುತ್ತಲಿನ ಸಕಾರಾತ್ಮಕ ಸ್ಪಂದನೆಗಳು ಶೇ. 22 ರಷ್ಟು ಹೆಚ್ಚಾಗುತ್ತವೆಗೋಮೂತ್ರದ ಬಳಕೆಯಿಂದ ಚರ್ಮ ರೋಗಗಳು ಮತ್ತು ಆರೋಗ್ಯದ ಮೇಲೆ ಸಕಾರಾತ್ಮಕ ರಿಣಾಮಗಳು ಕಂಡುಬಂದಿವೆಆದ್ದರಿಂದ ಹಸುವಿನಿಂದ ದೊರೆಯುವ ಉತ್ಪನ್ನಗಳು ಗ್ರಾಮೀಣ ಭಾರತಕ್ಕೆ ಸಮೃದ್ಧಿಯ ಕೀಲಿಕೈ ಆಗಬಹುದು.



ಅನೇಕ ಕಾಯಿಲೆಗಳು ಮತ್ತು ವ್ಯಸನಗಳಿಗೆ ಆಧ್ಯಾತ್ಮಿಕ ಕಾರಣಗಳಿವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.'ಶ್ರೀ ಗುರುದೇವ ದತ್ತಎಂಬ ನಾಮಜಪದಿಂದ ವ್ಯಸನ ಮುಕ್ತಿಮಾನಸಿಕ ಸ್ಥಿರತೆ ಮತ್ತು ಪ್ರಾರಬ್ಧಜನ್ಯ ಕಾಯಿಲೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. 3 ತಿಂಗಳ ಕಾಲ ನಿಯಮಿತವಾಗಿ 'ಶ್ರೀ ಗುರುದೇವ ದತ್ತ ಎಂಬ ನಾಮಜಪವನ್ನು ಮಾಡಿದ್ದರಿಂದ 20 ವರ್ಷ ಹಳೆಯ ಎಕ್ಝಿಮಾ (ಚರ್ಮ ರೋಗಕೇವಲ ನಾಮಜಪದಿಂದ ಗುಣಮುಖವಾದ ಉದಾಹರಣೆಯನ್ನು  ಸಂದರ್ಭದಲ್ಲಿ ನೀಡಲಾಯಿತು. ಒಟ್ಟಾರೆಯಾಗಿ ಆಧ್ಯಾತ್ಮಶಾಸ್ತ್ರದ ಪ್ರಕಾರ ಪ್ರಸ್ತುತ ಜಗತ್ತಿನಲ್ಲಿ ಪರಿಸರ ಬದಲಾವಣೆ ಮತ್ತು ಅದರ ಭಯಾನಕ ದುಷ್ಪರಿಣಾಮಗಳನ್ನು ತಪ್ಪಿಸಲು ಕೈಗೊಳ್ಳುತ್ತಿರುವ ಕ್ರಮಗಳು ಮೇಲ್ನೋಟಕ್ಕೆ ಮಾತ್ರ ಇವೆಜಗತ್ತಿನಲ್ಲಿ ಅಸಾತ್ತ್ವಿಕತೆ ಹೆಚ್ಚಾದ್ದರಿಂದ ಅದರ ವ್ಯತಿರಿಕ್ತ ಪರಿಣಾಮವು ಇಡೀ ವಿಶ್ವದ ಹವಾಮಾನವನ್ನು ನಿಯಂತ್ರಿಸುವ ಭೂಮಿ,ಜಲಅಗ್ನಿ,ವಾಯು ಮತ್ತು ಆಕಾಶ ಎಂಬ ಪಂಚಮಹಾಭೂತಗಳ ಮೇಲೆ ಆಗುತ್ತದೆವಾತಾವರಣದಲ್ಲಿ ಸಾತ್ತ್ವಿಕತೆಯನ್ನು ಹೆಚ್ಚಿಸುವ ಅತ್ಯುತ್ತಮ ಮಾರ್ಗವೆಂದರೆ ಸಾಧನೆ ಮಾಡುವುದುಆಗ ಭಾರತವು ನಿಜವಾದ ಅರ್ಥದಲ್ಲಿ 'ಆತ್ಮನಿರ್ಭರ ಭಾರತ'ವಾಗುತ್ತದೆ.

 

ತಮ್ಮ ವಿಶ್ವಾಸಿ,

 ಸೌಶ್ವೇತಾ ಕ್ಲಾರ್ಕ್,

        ಸಂಶೋಧನಾ ವಿಭಾಗಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

                       (ಸಂಪರ್ಕ : 9561574972)     

Post a Comment

0Comments

Post a Comment (0)