ಸನಾತನ ಸಂಸ್ಥೆಯ ಮಾಧ್ಯಮದಿಂದ ಕಳೆದ 25 ವರ್ಷಗಳಿಂದ ನಿರಂತರವಾಗಿ ಹಿಂದೂ ರಾಷ್ಟ್ರಕ್ಕಾಗಿ ಜಾಗೃತಿ ಮೂಡಿಸುತ್ತಾ ಬಂದಿರುವ ಪರಮ ಶ್ರದ್ಧೆಯ ಡಾ. ಜಯಂತ ಆಠವಲೆಯವರ ಕಾರ್ಯ ಅಲೌಕಿಕ ಮತ್ತು ಅತ್ಯಂತ ವಿನೂತನವಾಗಿದೆ. ಅವರ 83 ನೆಯ ಜನ್ಮೋತ್ಸವದ ಪ್ರಯುಕ್ತ ಗೋವಾದಲ್ಲಿ ಮೇ 17 ರಿಂದ 19 2025 ಈ ಕಾಲಾವಧಿಯಲ್ಲಿ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ' ಆಯೋಜಿಸಲಾಗಿದೆ. ಇದು ಕೇವಲ ಮೊಹೋತ್ಸವವಲ್ಲ, ಭಾರತವನ್ನು ಮತ್ತೊಮ್ಮೆ ತೇಜಸ್ವಿ, ಸಾಮರ್ಥ್ಯಶಾಲಿಗೊಳಿಸಲು ಮತ್ತು ಸನಾತನ ಧರ್ಮ ಪುನರ್ಸ್ಥಾಪನೆಯ ಜಾಗೃತಿಯಾಗಿದೆ, ಎಂದು 'ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ನ್ಯಾಸ' ದ ಕೋಶಾಧ್ಯಕ್ಷರಾದ ಪ. ಪೂ. ಗೋವಿಂದ ದೇವಗಿರಿಜೀ ಮಹಾರಾಜ ಇವರು ಮಹೋತ್ಸವಕ್ಕಾಗಿ ಕಳುಹಿಸಿರುವ ಶುಭ ಸಂದೇಶದಲ್ಲಿ ಗೌರವೋದ್ಗಾರವನ್ನು ಮಾಡಿದ್ದಾರೆ.
ಅವರು ಮುಂದುವರೆಸಿ, 'ಸನಾತನ ಸಂಸ್ಥೆ'ಯ ಮಾಧ್ಯಮದಿಂದ ಕಳೆದ 25 ವರ್ಷಗಳ ಹಿಂದೆ ಆರಂಭಿಸಿರುವ ಕಾರ್ಯದ ಫಲಶ್ರುತಿಯಾಗಿ ಇಂದು ಸಾವಿರಾರು ಸಂಖ್ಯೆಯ ಸಮರ್ಪಿತ ಕಾರ್ಯಕರ್ತರು ಅಲ್ಲಲ್ಲಿ ಹೋಗಿ ನಿಷ್ಕಾಮ ಭಾವನೆಯಿಂದ ಮತ್ತು ಸ್ವಯಂಶಿಸ್ತಿನಿಂದ ಸನಾತನ ಧರ್ಮದ ಪ್ರಸಾರ ಮಾಡುತ್ತಿದ್ದಾರೆ. ಈ ಕಾರ್ಯಕರ್ತರು ಸ್ವತಃ ಜೀವನದ ಸ್ವಾಧ್ಯಾಯ ಯಜ್ಞ, ಸೇವಾ ಯಜ್ಞ ಮತ್ತು ಜನಜಾಗೃತಿ ಯಜ್ಞ ಆರಂಭಿಸಿದ್ದಾರೆ. ಈ ಕಾರ್ಯ ಅತ್ಯಂತ ವಿನೂತನವಾಗಿದೆ ಮತ್ತು ಅದರಿಂದಲೇ ಸನಾತನ ರಾಷ್ಟ್ರದ ಅಭ್ಯುದಯದ ಮಾರ್ಗ ಪ್ರಕಾಶಿಸಲಿದೆ.
ಈ ಮಹೋತ್ಸವದಲ್ಲಿ ವಿವಿಧ ರಾಷ್ಟ್ರನಿಷ್ಠ ನಾಯಕರು, ಧರ್ಮಚಾರ್ಯರು, ಕಾರ್ಯಕರ್ತರು ಮತ್ತು ಸನಾತನ ಪ್ರೇಮಿಗಳು ಒಗ್ಗೂಡಿ ವಿಚಾರ ಮಂಥನ ಮಾಡುವವರಿದ್ದಾರೆ. ಈ ಮಂಥನದಿಂದ ಕೇವಲ ನವನೀತ ಎಂದರೆ ಬೆಣ್ಣೆ ಅಷ್ಟೇ ಅಲ್ಲದೆ ಅಮೃತದ ಉತ್ಪತ್ತಿಯೂ ಆಗಲಿದೆ ಮತ್ತು ಇದೇ ಅಮೃತ ಕಲಶದಿಂದ ಸನಾತನ ರಾಷ್ಟ್ರಕ್ಕೆ ನೂತನ ತೇಜಸ್ಸು ಪ್ರಾಪ್ತವಾಗಲಿದೆ.
ಪ್ರಸ್ತುತ ಭಾರತವನ್ನು ಸಮರ್ಥ ರಾಷ್ಟ್ರಗೊಳಿಸಬೇಕಿದ್ದರೆ, ಸನಾತನ ಧರ್ಮದ ಮೂಲಭೂತ ತತ್ವದ ಪುನಃಸ್ಥಾಪನೆ ಮಾಡುವುದು ಅತ್ಯಗತ್ಯವಾಗಿದೆ; ಏಕೆಂದರೆ ಭಾರತದ ಸಾಮರ್ಥ್ಯದ ಮೇಲೆ ಜಗತ್ತಿನಲ್ಲಿ ಸಮಾನತೆ, ಬಾಂಧವ್ಯ ಮತ್ತು ನಿಜವಾದ ಸ್ವಾತಂತ್ರ್ಯ ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ಈ ಕಾರ್ಯ ಯಾವುದೋ ವ್ಯಕ್ತಿಯ ಅಥವಾ ಯಾವುದೋ ಸಂಸ್ಥೆಯದಲ್ಲದೆ, ಧರ್ಮದ ಮತ್ತು ರಾಷ್ಟ್ರದ ಕಾರ್ಯವಾಗಿದೆ. ಮತ್ತು ಆದ್ದರಿಂದಲೇ ಇದು ಪ್ರತ್ಯಕ್ಷ ಭಗವಂತನ ಕಾರ್ಯವಾಗಿದೆ.
ಆದ್ದರಿಂದ ಎಲ್ಲಾ ಧರ್ಮಪ್ರೇಮಿಗಳು, ರಾಷ್ಟ್ರನಿಷ್ಠ ಕಾರ್ಯಕರ್ತರು, ನಾಯಕರು, ಧರ್ಮಗುರುಗಳು ಮತ್ತು ಭಕ್ತರು ಈ ಮಹೋತ್ಸವದಲ್ಲಿ ಸಹಭಾಗಿಯಾಗಿ ತಮ್ಮ ಶ್ರದ್ಧೆಯ ಮತ್ತು ಸೇವಾಭಾವದ ಕೊಡುಗೆ ನೀಡಬೇಕು. ಸನಾತನ ಧರ್ಮದ ಬೇರು ಹೆಚ್ಚು ಶಕ್ತಿಶಾಲಿಗೊಳಿಸಲು ಮತ್ತು ಭಾರತದ ಸುಂದರ, ಸಮೃದ್ಧ ಭವಿಷ್ಯಕ್ಕಾಗಿ ಈ ಮಹೋತ್ಸವ ಒಂದು ಸುವರ್ಣ ಅವಕಾಶವಾಗಿದೆ.
ಈ ಮಹಾ ಮಂಥನದಿಂದ ದೊರೆಯುವ ತೇಜಸ್ಸಿನಿಂದ ಭಾರತ ಆಕಾಶದೆತ್ತರಕ್ಕೇರಲಿದೆ ಮತ್ತು ಸನಾತನ ಧರ್ಮದ ದಿವ್ಯ ಪ್ರಕಾಶ ಸಂಪೂರ್ಣ ಜಗತ್ತಿನಲ್ಲಿ ಪಸರಿಸಲಿದೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಸೇರಿ ಈ ದಿವ್ಯ ಕಾರ್ಯದಲ್ಲಿ ಸಹಭಾಗಿ ಆಗೋಣ ಮತ್ತು ಭಾರತಕ್ಕೆ ಅದರ ಸನಾತನ ತೇಜಸ್ಸಿನಿಂದ ಮತ್ತೊಮ್ಮೆ ಕಟ್ಟೋಣ, ಎಂದು ಅವರು ಕರೆ ನೀಡಿದರು.
ತಮ್ಮ ಸವಿನಯ,
ಶ್ರೀ. ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299 )