ಬೆ0ಗಳೂರು: ಮಂಗಳವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಈ ಘೋರ ಘಟನೆಗೆ ಇಡೀ ದೇಶವೇ ನಡುಗಿದೆ, ಈ ಉಗ್ರ ಕೃತ್ಯವನ್ನು ಖಂಡಿಸಿ ಶುಕ್ರವಾರ ಸಂಜೆ 7 ಗಂಟೆಗೆ ಪಂಜಿನ ಮೆರವಣಿಗೆ ನಡೆಸುವಂತೆ ರಾಜ್ಯದ ಜನತೆಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ,
ಈ ಬಗ್ಗೆ ವಿಡಿಯೋ ಹಂಚಿಕೊ0ಡಿರುವ ಡಿಸಿಎಂ ಇಂದು ಕಾಶ್ಮೀರದಲ್ಲಿ ನಡೆದಂತಹ ದುರ್ಘಟನೆಗೆ, ಭಯೋತ್ಪಾದಕರಿಂದ ನಡೆದ ದಾಳಿಗೆ ನಾವೆಲ್ಲರೂ ತಲೆ ತಗ್ಗಿಸಬೇಕಾದಂತಹ ಪರಿಸ್ದಿತಿ ಬಂದಿದೆ, ನಮ್ಮ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಕಾಂಗ್ರೆಸ್ ಪಕ್ಷ ಗೌರವದಿಂದ ಈ ದೇಶದ ರಕ್ಷಣೆಗೆ ನಿಂತಿದೆ,ಕಾಂಗ್ರೆಸ್ ಕಾರ್ಯ ಸಮಿತಿ ತಮಗೆಲ್ಲರಿಗೂ ತಿಳಿಸಲು ಒಂದು ಸಂದೇಶ ಕಳುಹಿಸಿದೆ, ೨೫ ನೇ ತಾರೀಖು ಸಂಜೆ ೭ ಗಂಟೆಗೆ ಬೆಂಗಳೂರು ನಗರದಿಂದ ಹಿಡಿದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಗ್ರರ ಕೈಯಿಂದ ಬಲಿಯಾದ ಎಲ್ಲರಿಗೂ ಗೌರವ ಸಲ್ಲಿಸಲು, ಅವರು ಆತ್ಮಕ್ಕೆ ಶಾಂತಿ ದೊರಕಿಸಿ ಕೊಡಬೇಕಾಗಿದೆ, ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಮರವಣಿಗೆ ಮುಖಾಂತರ ಪಂಜು ಅಥವಾ ಮೇಣದ ಬತ್ತಿಯನ್ನು ಹಚ್ಚಿ ಶ್ರದ್ಧಾಂಜಲಿಯನ್ನು ಅರ್ಪಿಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ,