ಚಂಡೀಗಢ: ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ರೋಚಕ ಕದನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 16 ರನ್ ಗಳ ವಿರೋಚಿತ ಗೆಲುವು ದಾಖಲಿಸಿದೆ. ಈ ಪಂದ್ಯದ ಕುರಿತು ತಮ್ಮ ಸಂತಸ ಹಂಚಿಕೊಂಡಿರುವ ಪಂಜಾಬ್ ಕಿಂಗ್ಸ್ ಕೋಚ್ ರಿಕ್ಕಿ ಪಾಂಟಿಂಗ್ ತಮ್ಮ ಆಟಗಾರರನ್ನು ಹಾಡಿ ಹೊಗಳಿದ್ದಾರೆ.
ಚಂಡೀಗಢದ ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 16 ರನ್ ಗಳ ವಿರೋಚಿತ ಗೆಲುವು ದಾಖಲಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಕೇವಲ 111 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 15.1 ಓವರ್‌ನಲ್ಲಿ 95 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಕೋಲ್ಕತ್ತಾ ಹೀನಾಯವಾಗಿ ಸೋತಿತು.
ಪಂಜಾಬ್ ತಂಡದ ಕೋಚ್ ರಕ್ಕಿ ಪಾಂಟಿಂಗ್, 'ಕಳಪೆ ಬ್ಯಾಟಿಂಗ್ ಪ್ರದರ್ಶನದ ನಂತರ ಯುಜ್ವೇಂದ್ರ ಚಾಹಲ್ ಮತ್ತು ಮಾರ್ಕೊ ಜಾನ್ಸೆನ್ ನೇತೃತ್ವದ ಅದ್ಭುತ ಬೌಲಿಂಗ್ ಪ್ರಯತ್ನವು ಪಂದ್ಯವನ್ನು ತಿರುಗಿಸಿತು.
ಹೃದಯ ಬಡಿತ ಇನ್ನೂ ಹೆಚ್ಚಾಗಿದೆ. ನನಗೆ ಈಗ 50 ವರ್ಷ ಮತ್ತು ಈ ರೀತಿಯ ಹೆಚ್ಚಿನ ಪಂದ್ಯಗಳನ್ನು ನೋಡಿದರೆ ಹಾರ್ಟ್ ಪೇಷಂಟ್ ಆಗುತ್ತೇವೆ. 112 ರನ್‌ಗಳನ್ನು ರಕ್ಷಿಸುವುದು, ನಮ್ಮ ತೋಳುಗಳ ಮೇಲೆ 16 ರನ್‌ಗಳೊಂದಿಗೆ. ನಾವು ವಾಸ್ತವವಾಗಿ ಅರ್ಧದಾರಿಯಲ್ಲಿದ್ದ ಹುಡುಗರಿಗೆ ಈ ರೀತಿಯ ನಿಜವಾಗಿಯೂ ಸಣ್ಣ ಚೇಸ್‌ಗಳು ಕೆಲವೊಮ್ಮೆ ಅತ್ಯಂತ ಕಠಿಣವಾಗಿವೆ ಎಂದು ಹೇಳಿದ್ದೇವೆ" ಎಂದು ಅವರು ಹೇಳಿದರು.
ಇದೇ ವೇಳೆ ಪಾಂಟಿಂಗ್ ವಿಕೆಟ್‌ನ ಸ್ವರೂಪವನ್ನು ಒಪ್ಪಿಕೊಂಡರು. 'ಇದು ಆಟದ ಉದ್ದಕ್ಕೂ ರನ್ ಗಳಿಸುವುದನ್ನು ಕಷ್ಟಕರವಾಗಿಸಿತು. ವಿಕೆಟ್ ಸುಲಭವಾಗಿರಲಿಲ್ಲ, ಆಟದ ಉದ್ದಕ್ಕೂ ನೀವು ನೋಡುವಂತೆ, ಅದು ಖಂಡಿತವಾಗಿಯೂ ಹಿಡಿದಿತ್ತು. ಆದರೆ ಇಂದು ರಾತ್ರಿ ಚಾಹಲ್ ಬಗ್ಗೆ ಏನು? ಅದು ಎಷ್ಟು ಉತ್ತಮ ಬೌಲಿಂಗ್ ಸ್ಪೆಲ್ ಆಗಿತ್ತು!" ಅವರು ಹೇಳಿದರು.