ಬೆಂಗಳೂರು: ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಹತ್ಯೆಯಾದ ರಾಜ್ಯದ ಮಂಜುನಾಥ್ ಮತ್ತು ಭರತ್ ಭೂಷಣ್ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದರು,
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಹತ್ಯೆಯಾಗಿದ್ದಾರೆ, ಉಗ್ರರು ಅವರ ಕುಟುಂಬದ ಜಾತಿ ಅಂತಸ್ತು ಕೇಳಿ ಗುಂಡಿಕ್ಕಿಕೊಂದಿಲ್ಲ, ಹಿಂದೂ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾರೆ, ಹಿಂದೂಗಳ ಚಡ್ಡಿಯನ್ನು ಬಿಚ್ಚಿಸಿದ್ದಾರೆ ಎಂದು ಸೂರ್ಯ ಅವರು ಆಕ್ರೋಶ ಹೊರಹಾಕಿದರು,
ಕೇರಳದ ಮಾವುತನಿಗೆ 15 ಲಕ್ಷ ಪರಿಹಾರ ನೀಡುವ ಕಾಂಗ್ರೆಸ್ ಸರ್ಕಾರ ಉಗ್ರದಾಳಿಯಲ್ಲಿ ಹತರಾಗಿರುವ ಕನ್ನಡಿಗ ಕುಟುಂಬಗಳಿಗೆ ಕೇವಲ ರೂ 10 ಲಕ್ಷ ನೀಡಿರುವುದು ವಿಪರ್ಯಾಸ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾನವೀಯತೆ ಸಂವೇದನೆಯನ್ನೇ ಕಳೆದುಕೊಂಡಿರುವುದು ದುರಂತ, ವೃತರ ಕುಟುಂಬಕ್ಕೆ ಕನಿಷ್ಠ ತಲಾ 1 ಲಕ್ಷ ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು,