ಬೆಂಗಳೂರು: ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಫಾಸ್ಟ್ ಟ್ಯಾಗ್ ಅನ್ನು ಪರಿಚಯಿಸಲಾಗಿತ್ತು, ಇದೀಗ ಮೇ ೧ ರಿಂದ ರಾಷ್ಟಿçÃಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಸುಧಾರಣೆಯನ್ನು ಪರಿಚಯಿಸಲಾಗುತ್ತಿದೆ,
ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಈಗ ಫಾಸ್ಟ್ ಟ್ಯಾಗ್ ವ್ಯವಸ್ಧೆಯನ್ನು ಹಂತಹAತವಾಗಿ ರದ್ದುಗೊಳಿಸಿ ಅದನ್ನು ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಧೆಯೊಂದಿಗೆ ಬದಲಾಯಿಸಲಿದೆ, ದೇಶದಲ್ಲಿ ರಸ್ತೆ ಸಾರಿಗೆಯನ್ನು ಸುಲಭ,ವೇಗ ಮತ್ತು ಹೆಚ್ಚು ಪಾರದರ್ಶಕವಾಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,
ಈ ಮೊದಲು ಫಾಸ್ಟ್ ಟ್ಯಾಗ್ ನಿಂದಾಗಿ ಟೋಲ್ ಬೂತ್ ಗಳಲ್ಲಿ ಸರತಿ ಸಾಲುಗಳು ಸ್ವಲ್ಪ ಕಡಿಮೆಯಾಗಿದ್ದವು, ಅದರೆ ಕೆಲವು ತಾಂತ್ರಿಕ ಸಮಸ್ಯೆಗಳು ಇನ್ನು ಕೂಡ ಇದೆ, ಅದರೊಂದಿಗೆ ಟ್ಯಾಗ್ ಗಳ ದುರುಪಯೋಗವೂ ಹೆಚ್ಚಾಗಿದೆ, ಇದನ್ನೆಲ್ಲಾ ತಡೆಯಲು ಮತ್ತು ಟೋಲ್ ವ್ಯವಸ್ಧೆಯಲ್ಲಿ ಅಂತಾರಾಷ್ಟಿçÃಯ ಗುಣಮಟ್ಟದ್ದಾಗಿಸಲು, ಸರ್ಕಾರವು ಉಪಗ್ರಹ ಆಧಾರಿತ ಜಿಪಿಎಸ್ ಟೋಲ್ ವ್ಯವಸ್ಧೆಯನ್ನು ಪರಿಚಯಿಸಲು ನಿರ್ಧರಿಸಿದೆ,