ಸಾಕ್ಷಿ ಕೇಳಿದ ಅಫ್ರಿಧಿ! ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಗಬ್ಬರ್

varthajala
0

 





ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ  ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಮೃತಪಟ್ಟಿದ್ದಾರೆ. ಈ ದುಷ್ಕೃತ್ಯ ಹಿನ್ನಲೆಯಲ್ಲಿ ಭಾರತವು ಪಾಕಿಸ್ತಾನ್ ನಡುವಣ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಂಡಿದೆ. ಇದರ ನಡುವೆ ಉಭಯ ದೇಶಗಳ ನಡುವಣ ಕ್ರಿಕೆಟ್ ಪಂದ್ಯಕ್ಕೂ ಬ್ರೇಕ್ ಬೀಳಬೇಕೆಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ. ಈ ನಡುವೆ ಪಾಕಿಸ್ತಾನದವರು ದಾಳಿ ಮಾಡಿದ್ದಾರೆ ಎಂಬುದಕ್ಕೆ ಏನು ಪುರಾವೆ ಇದೆ ಎಂದು ಪಾಕ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ  ಕೇಳಿದ್ದಾರೆ. ಈ ಹೇಳಿಕೆಗೆ ಟೀಂ ಇಂಡಿಯಾ ಮಾಜಿ ಆಟಗಾರ ಶಿಖರ್ ಧವನ್  ಖಡಕ್ ತಿರುಗೇಟು ನೀಡಿದ್ದಾರೆ.

ಹೌದು, ಅಫ್ರಿಧಿ ಅವರನ್ನು ಗುರಿಯಾಗಿಸಿಕೊಂಡು ಎಕ್ಸ್ ಪೋಸ್ಟ್ ಮಾಡಿರುವ ಶಿಖರ್ ಧವನ್, ನೀವು ನಮ್ಮ ವಿರುದ್ಧ ಕಾರ್ಗಿಲ್‌ನಲ್ಲಿ ಸೋತಿದ್ಧೀರ. ಮಾತ್ರವಲ್ಲ, ನೀವು ಈಗಾಗಲೇ ತುಂಬಾ ಬಾರಿ ಸೋತಿದ್ದೀರಿ ಇನ್ನೂ ಎಷ್ಟು ಬಾರಿ ಸೋಲುತ್ತೀರಾ? ಇನ್ನೂ ಎಷ್ಟು ಬಾರಿ ಬೀಳುವಿರಿ. ನಿಷ್ಪ್ರಯೋಜಕ ಹೇಳಿಕೆಗಳನ್ನು ನೀಡುವ ಬದಲು ನಿಮ್ಮ ದೇಶದ ಪ್ರಗತಿಗೆ ನಿಮ್ಮ ಬುದ್ಧಿಯನ್ನು ಬಳಸುವುದು ಉತ್ತಮ. ಅಫ್ರಿಧಿ ನಮ್ಮ ಭಾರತೀಯ ಸೇನೆಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಭಾರತ ಮಾತೆಗೆ ಜಯವಾಗಲಿ ಎಂದು ತಿರುಗೇಟು ನೀಡಿದರು.

Post a Comment

0Comments

Post a Comment (0)