ನೆಲಮಂಗಲ: ನೆಲಮಂಗಲ ತಾಲ್ಲೂಕಿನ ಕರಿಹೋಬನಹಳ್ಳಿ ಪ್ರದೇಶದ ಉದ್ಯಮಿಯೊಬ್ಬರು ನಕಲಿ ಫೇಸ್‌ಬುಕ್ ಜಾಹೀರಾತು ನಂಬಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಉದ್ಯಮಿ ಬಸವರಾಜ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ “D-Mart Ready” ಲೋಗೋ ಹೊಂದಿದ ಜಾಹೀರಾತನ್ನು ನೋಡಿದರು. ಅದರಲ್ಲಿ ಕೇವಲ ₹399ಗೆ ಪ್ಯಾಕ್ ಡ್ರೈ ಫ್ರೂಟ್ಸ್ ಲಭ್ಯ ಎಂಬ ಆಫರ್ ನೀಡಲಾಗಿತ್ತು. ಆಫರ್ ನೈಜವಾಗಿತ್ತೆಂದು ತಿಳಿದು ಅವರು ಜಾಹೀರಾತಿನಲ್ಲಿ ನೀಡಿದ್ದ ಲಿಂಕ್ ಕ್ಲಿಕ್ ಮಾಡಿ, ಆರ್ಡರ್ ಮಾಡಲು ಮುಂದಾದರು.
ಆರ್ಡರ್ ಪ್ರಕ್ರಿಯೆಯಲ್ಲಿ
ಅವರು ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದನ್ನ ಬಳಸಿಕೊಂಡ ಸೈಬರ್ ಅಪರಾಧಿಗಳು
ಒಟಿಪಿ ಪಡೆದು ಮೊತ್ತ ₹50,000 ಡೆಬಿಟ್ ಮಾಡಿದ್ದಾರೆ.
ನಂತರ ಶಾಕ್‌ಗೆ ಒಳಗಾದ ಬಸವರಾಜ್ ಕೂಡಲೇ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.