2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 9ನೇ ತರಗತಿಯಿಂದ ಉತ್ತಿರ್ಣರಾಗಿ 10ನೇ ತರಗತಿಗೆ ದಾಖಲಾಗುತ್ತಿರುವ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಹಾಗೂ ಸಂಕಲ್ಪ್ ಲರ್ನಿಂಗ್ ಸಂಸ್ಥೆಯವರ ಸಹಯೋಗದೊಂದಿಗೆ ಏಪ್ರಿಲ್ 11 ರಿಂದ ಮೇ 2025ರ ಅಂತ್ಯದವರೆಗೆ ಬೇಸಿಗೆ ರಜೆಯಲ್ಲಿ ಎಸ್.ಎಸ್.ಎಲ್.ಸಿ “ತಯಾರಿ” ಪೂರ್ವ ಸಿದ್ದತೆ ಶೀರ್ಷಿಕೆಯಡಿ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳಿಗೆ ಉಚಿತ ತರಗತಿಗಳನ್ನು ಪ್ರಾರಂಭಿಸಲಾಗಿದೆ.
ಸಂಕಲ್ಪ್ ಲರ್ನಿಂಗ್ ಸಂಸ್ಥೆಯವರ ಯೂಟೂಬ್ ಲೈವ್ www.you tube.com@ sankalplearningsolutions ಮೂಲಕ ಭಾನುವಾರವೂ ಸೇರಿದಂತೆ ಪ್ರತಿ ದಿನ ಸಂಜೆ 6.30 ರಿಂದ 8.30ರ ವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ನೇರ ಪ್ರಸಾರದಲ್ಲಿ ತರಗತಿಗಳು ನಡೆಯಲಿದ್ದು ಬೆಂಗಳೂರು ಉತ್ತರ ಜಿಲ್ಲೆಯ 59 ಸರ್ಕಾರಿ ಪ್ರೌಢಶಾಲೆಗಳ 5,839 ವಿದ್ಯಾರ್ಥಿಗಳು ಹಾಗೂ 124 ಅನುದಾನಿತ ಪೌಢಶಾಲೆಗಳ 6,706 ವಿದ್ಯಾರ್ಥಿಗಳು ಒಟ್ಟು 12,545 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.
ಈ ಕಾರ್ಯಕ್ರಮದ ಪ್ರಯೋಜನವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಡೆದುಕೊಳ್ಳಲು ಹಾಗೂ ತರಗತಿಗಳಿಗೆ ವಿದ್ಯಾರ್ಥಿಗಳು ನಿರಂತರವಾಗಿ ಹಾಜರಾಗುತ್ತಿರುವ ಬಗ್ಗೆ ಅನುಪಾಲನೆ ಹಾಗೂ ಸಮನ್ವಯ ಮಾಡಲು ಸಂಬಂಧಪಟ್ಟ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಬಿ.ಆರ್.ಪಿ ಮತ್ತು ಸಿ.ಆರ್.ಪಿ ರವರು ಅಗತ್ಯ ಕ್ರಮವಹಿಸುವುದು ಮತ್ತು ಪೋಷಕರು ವಿದ್ಯಾರ್ಥಿಗಳ ಮನವೊಲಿಸಿ ತರಗತಿಗಳ ಪ್ರಯೋಜನ ಪಡೆದುಕೊಳ್ಳುವಂತೆ ಬೆಂಗಳೂರು ಉತ್ತರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.