ಸಾರ್ವಜನಿಕರ ಆಶಯದಂತೆ ಯೋಜನೆಗಳ ಅನುಷ್ಠಾನ, ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಜನರೊಂದಿಗೆ ಜನಸೇವಕ ಸಹಕಾರಿ-ಎಸ್.ಸುರೇಶ್ ಕುಮಾರ್

varthajala
0


ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶಾಸಕರ ಸಂಪರ್ಕ ಕಛೇರಿಯಲ್ಲಿ 12ನೇ ವಾರದ ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ. ಸಾರ್ವಜನಿಕರ ಸಮಸ್ಯೆಗಳನ್ನು ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಅಲಿಸಿ, ಪರಿಹಾರ ಕಾರ್ಯಕ್ಕೆ ಅಧಿಕಾರಿಗಳಿಗೆ ಅದೇಶ ನೀಡಿದರು. ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಬೆಂಗಳೂರು ಬೆಳಯುತ್ತಿರುವ ನಗರ, ರಾಜಾಜಿನಗರ ಅತ್ಯಂತ ಹಳೆಯ ಕ್ಷೇತ್ರವಾಗಿದೆ. ಸಮಸ್ಯೆಗಳು ನಿರಂತರ ಪರಿಹಾರ ಕಾರ್ಯ ತತಕ್ಷಣವಾಗಬೇಕು, ಸಾರ್ವಜನಿಕರಿಗೆ ನೆಮ್ಮದ್ದಿ ಜೀವನ ಸಾಗಿಸಬೇಕು ಎಂಬ ನಿಟ್ಟಿನಲ್ಲಿ ಜನರೊಂದಿಗೆ ಜನಸೇವಕ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ.






ಕಳೆದ 11ವಾರಗಳಿಂದ ಜನಸ್ಪಂದನಾ ಕಾರ್ಯಕ್ರಮ ಅತ್ಯಂತ ಯಶ್ವಸಿಯಾಗಿ ಪೂರೈಸಿ, 12ನೇ ವಾರದ ಕಾರ್ಯಕ್ರಮ ನಡೆಯುತ್ತಿದೆ.ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಬಂದು ಹೇಳಬಹುದು ಅಥವಾ 5 ಮೊಬೈಲ್ ಸಂಖ್ಯೆಗಳನ್ನು ನೀಡಲಾಗಿದೆ, ಕರೆ ಮಾಡಿ ಸಮಸ್ಯೆಗಳನ್ನು ಹೇಳಬಹುದು.

ಕಸ ವಿಲೇವಾರಿ, ಇ-ಖಾತ ಮತ್ತು ಕುಡಿಯುವ ನೀರು, ವೈದ್ಯಕೀಯ ಪರಿಹಾರ, ಮರದ ಕೊಂಬೆ ತೆರವು ಕಾರ್ಯ, ರಸ್ತೆ ನಿರ್ಮಾಣ ನಾಗರಿಕರ 500ಕ್ಕೂ ಹೆಚ್ಚು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಈ ಕಾರಣದಿಂದ ಜನರೊಂದಿಗೆ ಜನಸೇವಕ ಕಾರ್ಯಕ್ರಮ ಯಶ್ವಸಿಯಾಗಿದೆ.ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಸಾರ್ವಜನಿಕರ ಆಶಯದಂತೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಿದರು.

ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ಹೆಚ್.ಆರ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ದೀಪಾ ನಾಗೇಶ್, ಮಂಡಲ ಅಧ್ಯಕ್ಷ ಸುದರ್ಶನ್, ಬಿಜೆಪಿ ಮುಖಂಡರುಗಳಾದ ಗಿರೀಶ್ ಗೌಡ, ಕಾಮಧೇನು ಸುರೇಶ್, ಟಿ.ಎನ್.ರಮೇಶ್, ಅನಿಲ್ ರಂಗಣ್ಣ ಉಮೇಶ್, ಅಮಿತ್ ಜೈನ್, ಮೋಹನ್ ರಾಜ್ ಕೃಷ್ಣಮೂರ್ತಿ, ಗೌತಮ್ ರವರು ಪಾಲ್ಗೊಂಡಿದ್ದರು.

Post a Comment

0Comments

Post a Comment (0)