ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೂರು ಸೋಲುಗಳನ್ನು ಅನುಭವಿಸಿರುವ ಆರ್‌ಸಿಬಿಗೆ, ನೆಚ್ಚಿನ ಅಭಿಮಾನಿಗಳ ಮುಂದೆಯೇ ನಿರಾಶೆ ಎದುರಾಗುತ್ತಿದೆ.
ನಿನ್ನೆ ನಡೆದ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿಗೆ ಮುಖಭಂಗ ಎದುರಿಸಿದೆ. ಮಳೆ ಕಾರಣದಿಂದಾಗಿ ಈ ಪಂದ್ಯವನ್ನು 14 ಓವರ್‌ಗಳಿಗೆ ಸೀಮಿತಗೊಳಿಸಲಾಗಿದ್ದು, ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಆರ್‌ಸಿಬಿಯನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆದರೆ, RCB ತಮ್ಮ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲವಾಯಿತು.
ಮೊದಲ ಹಂತದಲ್ಲಿ RCB ವಿಕೆಟ್‌ಗಳು ನಿರಂತರವಾಗಿ ಕುಸಿದವು. ತಂಡದ ಯಾವುದೇ ಪ್ರಮುಖ ಬ್ಯಾಟರ್‌ರಿಂದ ಸೂಕ್ತ ಕೊಡುಗೆ ದೊರೆತಿಲ್ಲ. ಕೇವಲ ಮಧ್ಯಮ ಕ್ರಮಾಂಕದ ಬ್ಯಾಟರ್ ಟಿಮ್ ಡೇವಿಡ್ ಮಾತ್ರ ಅಜೇಯ 50 ರನ್ ಹೊಡೆದು ತಂಡವನ್ನು 95 ರನ್‌ಗಳಿಗೆ ತಲುಪಿಸಿದರು. ಉಳಿದ ಬ್ಯಾಟರ್‌ಗಳೆಲ್ಲಾ ಉತ್ತಮ ಆಟವಾಡಲಿಲ್ಲ.
ಈ ಸಣ್ಣ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡವು ಸುಲಭವಾಗಿ ಬೆನ್ನಟ್ಟಿತು. 12.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ ವಿಜಯಭೇರಿ ಗಳಿಸಿತು. ಈ ಸೋಲಿನ ಬಳಿಕ ಮಾತನಾಡಿದ RCB ನಾಯಕ ರಜತ್ ಪಾಟಿದಾರ್, ಸೋಲಿಗೆ ಪಿಚ್ ಪ್ರಮುಖ ಕಾರಣವೆಂದು ಹೇಳಿದ್ದಾರೆ.
“ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟಕರವಾಗಿತ್ತು. ನಾವು ಪಿಚ್‌ನ ಪರಿಣಾಮದಿಂದಲೇ ಕಳಪೆ ಪ್ರದರ್ಶನ ನೀಡಿದ್ದೇವೆ. ಉತ್ತಮ ಜೊತೆಯಾಟವಿಲ್ಲದೇ, ನಿರಂತರ ವಿಕೆಟ್ ಕಳೆದುಕೊಂಡ ಪರಿಣಾಮ ನಮ್ಮ ಇನಿಂಗ್ಸ್ ಕುಸಿಯಿತು,” ಎಂದು ಪಾಟಿದಾರ್ ಹೇಳಿದರು.
ನಮ್ಮ ಬೌಲರ್‌ಗಳು ಉತ್ತಮ ಲೆಂಥ್‌ಗಳಲ್ಲಿ ಎಸೆದು, ಆರಂಭದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಒತ್ತಡಕ್ಕೆ ಒಳಪಡಿಸಿದರು. ಪಿಚ್ ಕೂಡ ಬೌಲರ್‌ಗಳಿಗೆ ಸಹಕಾರಿಯಾಗಿತ್ತು. ಇದು ನಮ್ಮ ಪ್ಲಸ್ ಪಾಯಿಂಟ್, ಎಂದರು.
ಆದರೆ ಪಂಜಾಬ್ ಕಿಂಗ್ಸ್ ಬ್ಯಾಟರ್‌ಗಳು ಸ್ಥಿತಿಗತಿಗಳನ್ನು ಬಳಸಿಕೊಂಡು ಉತ್ತಮ ಆಟವಾಡಿದರು. ಅವರಿಗೆ ಗೆಲುವಿನ ಕೀರ್ತಿ ಸಲ್ಲುತ್ತದೆ. ಪಿಚ್ ಯಾವಾಗಲೂ ಪರಿಹಾರವಲ್ಲ. ನಾವು ಅದೇ ಪಿಚ್‌ನಲ್ಲಿ ಉತ್ತಮ ಸ್ಕೋರ್ ಮಾಡಬೇಕಿತ್ತು, ಮುಂದಿನ ಪಂದ್ಯಗಳಲ್ಲಿ ಈ ತಪ್ಪುಗಳನ್ನು ಸರಿಪಡಿಸಿ ಎಂದು ಹೇಳಿದರು.