ಶೇಷಾದ್ರಿಪುರದ ರಾಯರ ಮಠದಲ್ಲಿ ಶ್ರೀ ಶ್ರೀ ಸುಶಮೀಂದ್ರತೀರ್ಥರ ಆರಾಧನಾ ಮಹೋತ್ಸವ

varthajala
0

ಬೆಂಗಳೂರು : ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಏ.15ರಂದು ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವದ ಪ್ರಯುಕ್ತ ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಹಾಗೂ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಶ್ರೀ ಸುಶೀಲೇಂದ್ರಾಚಾರ್ ಗೊಗ್ಗಿಯವರಿಂದ "ಶ್ರೀ ಸುಶಮೀಂದ್ರತೀರ್ಥರ ಜೀವನ ಮತ್ತು ಸಾಧನೆ" ವಿಷಯವಾಗಿ ಪ್ರವಚನ, ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರಿಂದ ಮತ್ತು ಸುಧೀಂದ್ರನಗರದ ಶ್ರೀ ವಿಜಯವಿಠ್ಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ರಥೋತ್ಸವ, ಮಹಾಮಂಗಳಾರತಿ, ಅಲಂಕಾರ ಪಂಕ್ತಿ ಸೇವಾ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಎಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸುಬ್ಬು ನರಸಿಂಹ ಅವರು ತಿಳಿಸಿದರು.



Post a Comment

0Comments

Post a Comment (0)