ತಮಿಳುನಾಡು ಸರ್ಕಾರವು ಭಕ್ತರಿಂದ ದೇಗುಲಗಳಿಗೆ ದಾನವಾಗಿ ಬಂದಿದ್ದ 1000 ಕೆ.ಜಿ. ಚಿನ್ನದ ಆಭರಣಗಳನ್ನು ಕರಗಿಸಿ, ಅದನ್ನು 24 ಕ್ಯಾರೆಟ್ ಶುದ್ಧ ಚಿನ್ನದ ಗಟ್ಟಿಗಳಾಗಿ ಪರಿವರ್ತಿಸಿದೆ. ಬಳಿಕ ಈ ಚಿನ್ನವನ್ನು ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲಾಗಿದೆ. ಇದರ ಮೂಲಕ ಬರುವ ಬಡ್ಡಿಯಿಂದ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಸಚಿವ ಶೇಖರ್ ಬಾಬು ಅವರು ವಿಧಾನಸಭೆಯಲ್ಲಿ ಮಾತನಾಡುತ್ತಾ, “ಭಕ್ತರು ದಾನವಾಗಿ ನೀಡಿದ, ದೇವಸ್ಥಾನದ ಪ್ರತಿದಿನದ ಧಾರ್ಮಿಕ ಚಟುವಟಿಕೆಗಳಿಗೆ ಬಳಸದ ಚಿನ್ನವನ್ನು ನೀತಿ ಸಮಿತಿಗಳ ಅನುಮತಿಯೊಂದಿಗೆ ಹೂಡಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
.