ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಫುಲ್ ಫ್ರೀಡಂ ನೀಡಿದ್ದು, ಇದೀಗ ಪಹಲ್ಗಾಮ್ ದಾಳಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಇಬ್ಬರು ಉಗ್ರರ ನಿವಾಸವನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ,
ಪ್ರವಾಸಿಗರ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಇದರ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಅಂಗ ಸಂಸ್ಧೆ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದ್ದು, ಇದರಲ್ಲಿ ಕುಖ್ಯಾತ ಲಷ್ಕರ್ ಉಗ್ರ ಆದಿಲ್ ಪ್ರಮುಖ ಪಾತ್ರ ವಹಿಸಿದ್ದ ಎಂದು ದೃಢಪಟ್ಟಿದೆ, ಭಾರತೀಯ ಸೇನೆ ಉಗ್ರರ ಹುಟ್ಟಡಗಿಸುವುದಾಗಿ ಪಣತೊಟ್ಟಿದೆ,
ಆದಿಲ್ ೨೦೧೮ ರಲ್ಲಿ ಪಾಕಿಸ್ತಾನಕ್ಕೆ ತೆರಳಿ ಉಗ್ರರಿಂದ ತರಬೇತಿ ಪಡೆದಿದ್ದ, ಇದೀಗ ಆತನ ಮನೆಯನ್ನು ಭಾರತೀಯ ಸೇನೆ ದ್ವಂಸಗೊಳಿಸಿದೆ, ಇದರ ಜೊತೆಗೆ ದಕ್ಷಿಣ ಕಾಶ್ಮೀರದಲ್ಲಿರುವ ಮತ್ತೋರ್ವ ಉಗ್ರ ಆಸಿಫ್ ಶೇಕ್ ನ ಮನೆಯನ್ನು ಕೂಡ ಸೇನೆ ಕೆಡವಿದೆ,