ಕೊಪ್ಪಳ: ಪಹಗಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ಗೇಟ್ ಪಾಸ್ ನೀಡಲು ಭಾರತ ಮುಂದಾಗಿದೆ, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿದ್ದ ಪಾಕಿಸ್ತಾನಿ ನಾಗರಿಕರರಿಗೂ ಸಂಕಷ್ಟ ಎದುರಾಗಿದ್ದು ನಾಲ್ವರ ಪಾಕ್ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ,
ಅಲ್ಪಾವದಿ ವೀಸಾ ಪಡೆದು ಇಲ್ಲಿ ನೆಲೆಸಿದ್ದ ನಾಲ್ವರು ಪಾಕ್ ಪ್ರಜೆಗಳನ್ನು ಒತ್ತಾಯಪೂರ್ವಕವಾಗಿ ರಾಜ್ಯದಿಂದ ಹೊರದಬ್ಬಲಾಗಿದೆ,
ಧೀಘಾವಧಿ ವೀಸಾ ಹೊಂದಿರುವ ಪಾಕ್ ಪ್ರಜೆಗಳ ಉಚ್ಚಾಟನೆಗೆ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ಸೂಚನೆ ನೀಡಿಲ್ಲ, ಹಾಗಾಗಿ ರಾಜ್ಯದಲ್ಲಿ ನೆಲೆಸಿರುವ ಸುಮಾರು 91 ಪಾಕಿಸ್ತಾನಿ ಪ್ರಜೆಗಳ ವಿರುದ್ದ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ,