ರಸ್ತೆ ಮಧ್ಯೆಯೇ ಕಟ್ಟು ನಿಂತ ಆರೋಗ್ಯ ಕವಚ ಆಂಬುಲೆನ್ಸ್!

varthajala
0

 


ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿನ ನಿರ್ವಹಣೆ ಕೊರತೆ ಆಗಿಂದಾಗ್ಗೆ ಸಾಬೀತಾಗುತ್ತಲೇ ಇದೆ, ಈ ಸಾಲಿಗೆ ಮತ್ತೊಂದು ಉದಾಹರಣೆ ಸಿಕ್ಕಿದ್ದು, ಆಂಬುಲೆನ್ಸ್ ತಾಂತ್ರಿಕ ದೋಷ ಕಾಣಿಸಿಕೊಂಡು ಚಲಿಸುತ್ತಿರುವಾಗಲೆ ನಡು ರಸ್ತೆಯಲ್ಲಿ ನಿಂತಿದೆ, 

ಆರೋಗ್ಯ ಕವಚ ಹೆಸರಿನ ತುರ್ತು ವೈದ್ಯಕೀಯ ಸೇವೆ ಮಾನವೀಯ ಕರ್ತವ್ಯವನ್ನು ನಿರ್ವಹಿಸಬೇಕಾದಾಗಲೇ ಆಂಬುಲೆನ್ಸ್ ನಲ್ಲಿ ತಾಂತ್ರಿಕ ದೋಷ ಎದುರಾದ ಘಟನೆ ಬೆಂಗಳೂರಿನ ಹೊಸಕೋಟೆಯಲ್ಲಿ ನಡೆದಿದೆ,

ತೀವ್ರ ಉಸಿರಾಟದ ತೊಂದರೆ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳಾ ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು, ಈ ಸಲುವಾಗಿ ಬಳಸಲಾಗಿದ್ದ ಆರೋಗ್ಯ ಕವಚ ಅಂಬುಲೆನ್ಸ್ ಮಾರ್ಗ ಮಧ್ಯೆ ಹೊಸಕೋಟೆ ಟೋಲ್ ಬಳಿ ತಾಂತ್ರಿಕ ದೋಷದಿಂದಾಗಿ ಕಟ್ಟು ನಿಂತಿದೆ, 

೨೦ ನಿಮಿಷಗಳ ನಂತರ ಮತ್ತೊಂದು ವಾಹನ ಸ್ಧಳಕ್ಕೆ ಆಗಮಿಸಿ ಮಹಿಳಾ ರೋಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ, 

Post a Comment

0Comments

Post a Comment (0)