ಬೆಂಗಳೂರು: ಸಿಇಟಿ ಜನಿವಾರ ಪ್ರಕರಣ ರಾಜ್ಯದಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿಗೆ ಎರಡು ಆಯ್ಕೆ ನೀಡಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ,
ಬೀದರ್ ನಲ್ಲಿ ಸಿಇಟಿ ಪರೀಕ್ಷೆಗೆ ಬರುವಾಗ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿಯ ಜನಿವಾರ ತೆಗೆಸಿದ್ದರು, ಇದೀಗ ವಿದ್ಯಾರ್ಥಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಅಥವಾ ಹಾಲಿ ಬರೆದಿರುವ ಭೌತಶಾಸ್ತç ಮತ್ತು ರಸಾಯನಶಾಸ್ತç ಪರೀಕ್ಷೆಯಲ್ಲಿ ಪಡೆಯುವ ಅಂಕದ ಆಧಾರದ ಮೇಲೆ ಗಣಿತ ವಿಷಯದ ಅಂಕ ನಿಗದಿ ಮಾಡುವ ಆಯ್ಕೆಯನ್ನು ನೀಡಿದೆ,
ಈ ಬಗ್ಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಅವರು ಈಗಾಗಲೇ ಪರೀಕ್ಷೆ ವಿಚಾರವಾಗಿ ನಿರ್ಧಾರ ಕೈಗೊಳ್ಳಲು ರಚಿಸಿದ ಸಮಿತಿ ವರದಿ ನೀಡಿದೆ, ಭೌತಶಾಸ್ತç ಮತ್ತು ರಸಾಯಣಶಾಸ್ತçದ ಅಂಕಗಳನ್ನು ಆಧರಿಸಿ ರ‍್ಯಾಂಕ್ ನೀಡಲು ಶಿಫಾರಸು ಮಾಡಿದೆ ಎಂದರು,