ನವದೆಹಲಿ: ಭಾರತದ ಒಟ್ಟಾರೆ ಅಭಿವೃದ್ಧಿ ಎಂದರೆ ಯಾವುದೇ ಗ್ರಾಮ, ಯಾವುದೇ ಕುಟುಂಬ ಮತ್ತು ಯಾವುದೇ ನಾಗರಿಕ ಹಿಂದುಳಿದಿರುಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು,ದಹೆಲಿ ವಿಜ್ಞಾನ ಭವನದಲ್ಲಿ ನಡೆದ ೧೭ ನೇ ಸಾರ್ವಜನಿಕ ಸೇವಾ ದಿನದ ಅಂಗವಾಗಿ ಇಂದು ಸಾರ್ವಜನಿಕ ಸೇವಕರನ್ನುದ್ದೇಶಿಸಿ ಮಾತನಾಡಿದ ಅವರು ಭಾರತವನ್ನು ಸಾಧ್ಯವಾದಷ್ಟು ಬೇಗ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಕೆಲಸ ಮಾಡಬೇಕು, ಭಾರತದ ಒಟ್ಟಾರೆ ಅಭಿವೃದ್ಧಿ ಎಂದರೆ ಯಾವುದೇ ಗ್ರಾಮ, ಯಾವುದೇ ಕುಟುಂಬ ಮತ್ತು ಯಾವುದೇ ನಾಗರಿಕ ಹಿಂದುಳಿದಿರಬಾರದು, ನಾವು ಇಂದು ಕೆಲಸ ಮಾಡುತ್ತಿರುವ ನೀತಿಗಳು ಮತ್ತು ನಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳೂ ಮುಂದಿನ ೧,೦೦೦ ವರ್ಷಗಳ ಭವಿಷ್ಯವನ್ನು ರೂಪಿಸುತ್ತವೆ ಎಂದು ಹೇಳಿದರು,
ಜಿ ೨೦ ರ ಸಮಯದಲ್ಲಿ ೬೦ ಕ್ಕೂ ಹೆಚ್ಚು ನಗರಗಳಲ್ಲಿ ೨೦೦ ಕ್ಕೂ ಹೆಚ್ಚು ಸಭೆಗಳು ನಡೆದವು, ಇದು ಜಿ ೨೦ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದುದಾಗಿದೆ, ಭಾರತವು ಜಿ ೨೦ ನಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಅದನ್ನು ಮುನ್ನಡೆಸುತ್ತಿವೆ ಜಗತ್ತು ಒಪ್ಪಿಕೊಂಡಿವೆ ಎಂದು ಪ್ರಧಾನಿ ಹೇಳಿದರು,