ಉಗ್ರರಿಗೆ ಆಶ್ರಯ ನೀಡಿದ್ದು ನಿಜ ಎಂದು ಒಪ್ಪಿಕೊಂಡ ಪಾಕಿಸ್ತಾನ!

varthajala
0

 


ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ನಡೆಸಿ ೨೬ ಜನರ ಬಲಿ ತೆಗೆದುಕೊಂಡ ಬಳಿಕ ಇಡೀ ಭಾರತೀಯರನ್ನು ಕೆರಳಿಸಿರುವ ಪಾಕ್ತಿಸ್ತಾನ ಇದೀಗ ತಾನು ಕಳೆದ ಮೂರು ದಶಕಗಳಿಂದ ಭಯೋತ್ಪಾದಕರಿಗೆ ಆಶ್ರಯ ನೀಡಿರುವುದು ನಿಜ ಎಂದು ಒಪ್ಪಿಕೊಂಡಿದೆ, ಇದು ಜಾಗತಿಕವಾಗಿ ತಲ್ಲಣ ಮೂಡಿಸಿದೆ,

ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆಯೊಂದರಲ್ಲಿ ಪಾಕಿಸ್ತಾನ ಕಳೆದ ಮೂರು ದಶಕಗಳಿಂದ ಭಯೋತ್ಪಾದನೆಯನ್ನು ಪೋಷಿಸುತ್ತಿದೆ ಎಂದಿದ್ದಾರೆ, ಬ್ರಿಟಿಷ್ ಮಾಧ್ಯಮ ಸ್ಕೆöÊ ನ್ಯೂಸ್ ನ ಪತ್ರಕರ್ತೆ ಯಾಲ್ಡಾ ಹಕೀಮ್ ಅವರೊಂದಿಗೆ ಸಂದರ್ಶನದಲ್ಲಿ ಆಸಿಫ್ ಈ ವಿಚಾರ ಬಹಿರಂಗಪಡಿಸಿದ್ದಾರೆ, ಮೂರು ದಶಕಗಳಿಂದ ನಾವು ಈ ಕೊಳಕು ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ, 

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಹೇಳುತ್ತಾ ಬಂದಿದೆ, ಇದೀಗ ಭಾರತದ ನಿಲುವು ಈ ಹೇಳಿಕೆಯಿಂದ ದೃಢಪಟ್ಟಿದೆ, ಅದರೆ ಪಾಕ್ತಿಸ್ತಾನ ತನ್ನ ಭಯೋತ್ಪಾದನಾ ನೀತಿಗೆ ಅಮೆರಿಕವನ್ನು ದೂಷಿಸಿದೆ, ಪಾಶ್ಚಿಮಾತ್ಯ ದೇಶಗಳ ಸೂಚನೆಯ ಮೇರೆಗೆ ಪಾಕಿಸ್ತಾನ ಕೆಲಸ ಮಾಡುತ್ತಿದೆ, ಇದಕ್ಕೆ ಪಾಕಿಸ್ತಾನವನ್ನು ದೂಷಿಸುವುದು ಅನ್ಯಾಯ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಹೇಳಿದ್ದಾರೆ, 

Post a Comment

0Comments

Post a Comment (0)