ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಏರ್ ಇಂಡಿಯಾ ಸ್ಯಾಟ್ಸ್‌ನ ನೂತನ ಲಾಜೆಸ್ಟಿಕ್ ಪಾರ್ಕ್ ಉದ್ಘಾಟನೆಯಾಗಿದೆ. ಇದು ದಕ್ಷಿಣ ಭಾರತದ ಅತಿದೊಡ್ಡ ಲಾಜೆಸ್ಟಿಕ್ ಪಾರ್ಕ್ ಆಗಿದೆ.
ಏರ್ ಇಂಡಿಯಾ ಸ್ಯಾಟ್ಸ್‌ನ ಚೇರ್ಮನ್ ನಿಪುನ್ ಅಗರ್ವಾಲ್ ದೀಪ ಬೆಳಗುವ ಮೂಲಕ ಈ ಲಾಜೆಸ್ಟಿಕ್ ಪಾರ್ಕ್‌ನ ಉದ್ಘಾಟನೆ ಮಾಡಿದರು.
ನೂತನ ಏರ್ ಇಂಡಿಯಾ ಸ್ಯಾಟ್ಸ್ ಲಾಜೆಸ್ಟಿಕ್ ಪಾರ್ಕ್ 2.40 ಲಕ್ಷ ಚದರ ಅಡಿಗಳ ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ 11,000 ಚದರ ಅಡಿಗಳ ಸಾಮಾನ್ಯ ವೇರ್‌ಹೌಸ್ ಮತ್ತು 24,000 ಚದರ ಅಡಿಗಳ ಕಚೇರಿ ಸೌಲಭ್ಯ . ಕೋಲ್ಡ್ ಸ್ಟೋರೇಜ್, ಎಕ್ಸ್‌ಪ್ರೆಸ್ ಕೊರಿಯರ್ ಸೇವೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಪಾರ್ಕ್ ವಿನ್ಯಾಸಗೊಂಡಿದೆ.