ನವದೆಹಲಿ: ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇಸ್ಲಾಮಿಕ್ ಮತಾಂಧ ಭಯೋತ್ಪಾಕರು ನಡೆಸಿದ ಕೃತ್ಯದ ವಿರುದ್ಧ ಜಗತ್ತಿನ ಮೂಲೆ ಮೂಲೆಯಿಂದ ಪಾಕಿಸ್ತಾನಕ್ಕೆ ಛೀಮಾರಿ ಬೀಳುತ್ತಿದೆ.
ಈ ಘಟನೆ ನಡೆದ ನಂತರ ಭಾರತದ ಮಿಲಿಟರಿ ಅತಿಕ್ರಮಣ ಸನ್ನಿಹಿತವಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಸೋಮವಾರ ಹೇಳಿದ್ದಾರೆ.
ಎರಡು ಪರಮಾಣು ಶಸ್ತ್ರಸಜ್ಜಿತ ಎದುರಾಳಿಗಳ ನಡುವಿನ ಉದ್ವಿಗ್ನತೆಯನ್ನು ತೀವ್ರವಾಗಿ ಹೆಚ್ಚಿಸಿದ ನಂತರ, ಭಾರತೀಯ ಮಿಲಿಟರಿ ದಾಳಿ ಸನ್ನಿಹಿತವಾಗಿದೆ. ನಮ್ಮ ಪಡೆಗಳನ್ನು ಬಲಪಡಿಸಿದ್ದೇವೆ, ಏಕೆಂದರೆ ಅದು (ಭಾರತ) ಈಗ ಸನ್ನಿಹಿತವಾಗಿದೆ. ಆದ್ದರಿಂದ, ಆ ಪರಿಸ್ಥಿತಿಯಲ್ಲಿ ಕೆಲವು ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ, ಆದ್ದರಿಂದ ಆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖವಾಜಾ ಮುಹಮ್ಮದ್ ಆಸಿಫ್ ಹೇಳಿದ್ದಾರೆ.