ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಹತ್ಯೆಗೀಡಾದ 26 ಜನ ಅಮಾಯಕ ಭಾರತೀಯರ ಸಾವಿಗೆ ಆಮ್ ಆದ್ವಿ ಪಕ್ಷದ ವತಿಯಿಂದ ಇಂದು ಸಂಜೆ ನಗರದ ಬ್ರಿಗೇಡ್ ರಸ್ತೆಯಲ್ಲಿ ಮೊಂಬತ್ತಿ ಹಚ್ಚುವ ಮೂಲಕ ಸಂತಾಪ ವ್ಯಕ್ತಪಡಿಸಲಾಯಿತು. ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರುಗಳಾದ ಜಗದೀಶ್ ಚಂದ್ರ ,ಅನಿಲ್ ನಾಚಪ್ಪ, ಪುಟ್ಟಣ್ಣ, ವೀಣಾ ಸರ್ರಾವ್, ಶಶಿಧರ್ ಆರಾಧ್ಯ , ಅಣ್ಣ ನಾಯಕ್, ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು.
Post a Comment
0Comments