ತರೀಕೆರೆ: ಶಂಕರ ಭಾಗವತ್ಪಾದರ ಪ್ರತಿಮೆ ಅನಾವರಣ

VK NEWS
0

ತರೀಕೆರೆಯಲ್ಲಿ ಶನಿವಾರ 12ನೀ ತಾರೀಖು ಚಿತ್ರ ಪೂರ್ಣಿಮೆ ದಿನ ಶಂಕರ ಭಾಗವತ್ಪಾದರ ಪ್ರತಿಮೆ ಅನಾವರಣಗೊಂಡಿತು.ಅಲ್ಲಿನ ಬ್ರಾಹ್ಮಣ ವಿಪ್ರವೇದಿಕೆ 1999ರಲ್ಲಿ ಪ್ರಾರಂಭವಾಗಿತ್ತು.


ಅದು ಶುರುವಾಗಿ 25 ಸಂವತ್ಸರದ ನೀನಪಾಗಿ ಶಂಕರರ ಪ್ರತಿಮೆ ಪ್ರತಿಷ್ಠಾಪನೆ ಮಾಡಿದರು. ಈ ಪ್ರತಿಮೆ ಅನಾವರಣಗೊಂಡಿದ್ದು ಶ್ರೀನ್ಗೇರಿ ಶ್ರೀ ವಿಧುಶೇಖರ ಸ್ವಾಮೀಜಿಯವರ ಅಮೃತಹಸ್ಥದಿಂದ.

ಅಲ್ಲಿನ ಬ್ರಾಹ್ಮಣ ಸೇವಾ ಸಮಿತಿ, ವಿಪ್ರ ವಿದ್ಯಾರ್ಥಿ ವೇದಿಕೆ, ಶಾಂಕರ ಪ್ರಜ್ಞಾ ವೇದಿಕೆ, ಶ್ರೀ ಸ್ಕಂದ ಮಾತಾ ವಿಪ್ರ ಮಹಿಳಾ ಸಂಘ ಇವುಗಳ ಸಹಯೋಗದಿಂದ ಈ ಕಾರ್ಯಕ್ರಮ ಜರುಗಿತು.

ಈ ಶಂಕರ ಭಾಗವತ್ಪಾದರ ವಿಗ್ರಹ ಹಾಗು ಲೋಕಾರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಶ್ರೀ ಶಂಕರಾಚಾರ್ಯರ ವಿಗ್ರಹ ಕಡೆದಿದ್ದು, ಅಯೋಧ್ಯೆಯ ರಾಮ ಲಲ್ಲ ವಿಗ್ರಹದ ಶಿಲ್ಪಿ.


ಈ ದಿನ ಬೆಳಿಗ್ಗೆ ಮಹಿಳಾ ಸಂಘದಿಂದ ನಗರ ಸಂಕೀರ್ತನೆ ನಡೆಯಿತು.ಶಂಕರಾಚಾರ್ಯರ ವೃತ್ತ ಹಾಗೂ ಪ್ರತಿಮೆಯ ಬಳಿ ರುಥ್ವೀಕರಿಂದ ಧಾರ್ಮಿಕ ಕಲಾಪಗಳು ಜರುಗುತ್ತಿದ್ದವು.ನಂತರ 11:30 am ಸುಮಾರಿಗೆ ಶ್ರೀ ವಿಧುಶೇಖರ ಸ್ವಾಮೀಜಿಯವರ ಆಗಮನವಾಯಿತು.ಅವರು ನೇರವಾಗಿ ಶ್ರೀ ಸುಬ್ರಹ್ಮಣ್ಯೇಶ್ವರ ಸನ್ನಿಧಿಗೆ ಬಂದು ನಂತರ ವೃತ್ತಕ್ಕೆ ಬಂದರು.ಆಲ್ಲಿ ಶನ್ಕರರ ಪ್ರತಿಮೆ ಅನಾವರಣ,ಮಾಲಾರ್ಪಣೆ ಹಾಗು ಅಭಿಷೇಕ ನಡೆಯಿತು.ನಂತರ ಗುರುಗಳು ಅನ್ನಪೂರ್ಣೇಶ್ವರಿ ಭವನಕ್ಕೆ ಬಂದು ಭಕ್ತಾದಿಗಳನ್ನು ಕುರಿತು ಅನುಗ್ರಹ ಭಾಷಣ ಮಾಡಿದರು.ಕಾರ್ಯಕ್ರಮ ಆಲ್ಲಿ ವೇದಘೋಷ, ಪ್ರಾರ್ಥನೆ, ಸ್ವಾಗತ ಹಾಗು ಪ್ರಸ್ಥಾವನೆಯಿಂದ ಪ್ರಾರಂಭವಾಯಿತು.ಶ್ರೀ ಸನ್ನಿಧಾನಕ್ಕೆ ಬಿನ್ನವತ್ತಲೇ ಅರ್ಪಿಸಲಾಯಿತು.




ನಂತರ ಗುರುಗಳ ಅನುಗ್ರಹ ಭಾಷಣ ಹಾಗು ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಲಾಯಿತು.

ಒಟ್ಟಿನಲ್ಲಿ ಸುಂದರ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ಭವನದಲ್ಲಿ ಭಕ್ತಾದಿಗಳಿಗೆ ಬೆಳಿಗ್ಗೆ ಉಪಹಾರ ಹಾಗು ಮಧ್ಯಾಹ್ನ ಭೋಜನದ ವ್ಯವಸ್ಥೆ ಇತ್ತು.ಇಲ್ಲಿಗೆ ಬೇರೆ ಊರಿನಿಂದ ಕೂಡಾ ಭಕ್ತರು ಆಗಮಿಸಿದ್ದರು.

 ಮರು ದಿನ ಅಂದರೆ ಭಾನುವಾರ ವೇದಾಂತ ಪ್ರವಚನ ಕಾರ್ಯಕ್ರಮ ಇತ್ತು.

ತರೀಕೆರೆ ಜನ ಬಹಳ ದೈವ ಹಾಗು ಗುರುಭಕ್ತರು.ಇದು ಒಂದು ಮಾದರಿ ಕಾರ್ಯಕ್ರಮ ಎನ್ನಬಹುದು.

ರಾಧಿಕಾ ಜಿ ಎನ್

Post a Comment

0Comments

Post a Comment (0)