ನವದೆಹಲಿ: ಹಿಮಾಲಯದಲ್ಲಿ ಮಂಜಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ, ಇದರ ಪರಿಣಾಮ ಗಂಗಾ, ಬ್ರಹ್ಮಪುತ್ರ ಹಾಗೂ ಸಿಂಧು ನದಿಗಳಲ್ಲಿ ನೀರಿನ ಪ್ರಮಾಣವೂ ಸಹ ಕುಸಿದಿದೆ, ಈ ಬಗ್ಗೆ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ ವರದಿ ನೀಡಿದ್ದು, ಈ ಬೆಳವಣಿಗೆ ಆತಂಕಕಾರಿ ಎಂದು ಹೇಳಿದೆ, ಹಿಮಾಲಯದ ಹಿಂದೂ ಕುಶ್ ಪರ್ವತ ಪ್ರದೇಶದಲ್ಲಿ ಹಿಮದ ಪ್ರಮಾಣ ಶೇ, ೨೩.೬ ರಷ್ಟು ಕಡಿಮೆಯಾಗಿದೆ, ಕಳೆದ ಎರಡು ದಶಕಗಳಲ್ಲಿಯೇ ಇದು ಕಡಿಮೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ,