- ವಿಜ್ಞಾನ ವಿಭಾಗದಲ್ಲಿ ಸ್ಪೂರ್ತಿ ಎಸ್. ರಾಜ್ಯಕ್ಕೆ 6ನೇ ರ‍್ಯಾಂಕ್
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ (Hesaraghatta Main Road) ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಸೌಂದರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು ಶೇ. 96ರಷ್ಟು ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ. Soundarya College
ಕಾಲೇಜಿನ ವಿದ್ಯಾರ್ಥಿನಿ ಸ್ಪೂರ್ತಿ ಎಸ್. ವಿಜ್ಞಾನ ವಿಭಾಗದಲ್ಲಿ 600ಕ್ಕೆ 594 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 6ನೇ ರ್‍ಯಾಂಕ್ ಪಡೆದಿದ್ದಾರೆ. ಕಾಲೇಜಿನ 170 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಮತ್ತು 320 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ, 40 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪೂರ್ಣಾಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿ ಸ್ಪೂರ್ತಿ ಎಸ್. ಅವರು 600ಕ್ಕೆ 594 ಅಂಕ ಗಳಿಸುವುದರೊಂದಿಗೆ ಶೇ. 99 ಅಂಕ ಗಳಿಸಿ 6ನೇ ರ‍್ಯಾಂಕ್ ನಲ್ಲಿ ಉತ್ತೀರ್ಣರಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ ನಿವೇದ್ ಎಸ್. ಅವರು ಶೇ. 98.17 (580), ವಾಣಿಜ್ಯ ವಿಭಾಗದಲ್ಲಿ ಚೇತನಾ ಎಸ್. ಅವರು ಶೇ. 97.83 (587), ವನಿತಾ ಕೆ. ಅವರು ಶೇ. 97.67 (586), ವಿಜ್ಞಾನ ವಿಭಾಗದಲ್ಲಿ ಸಾನಿಧ್ಯ ಬಿ.ಪಿ. ಅವರು ಶೇ. 97.33 (584), ವಿಕ್ರಂ ಎ.ಎಂ.- 584, ನಿಖಿತಾ ಜೆ.- 583, ಮೋನಿಕಾ ಜಿ.ಆರ್.- 582, ಬಿ.ಜ್ಞಾನಶ್ರೀ- 581, ಪ್ರಿಯಾ ಚೌದರಿ- 581, ಕೌಸಿರ್ ಟಿ.ಎಸ್.- 580 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
ಉನ್ನತ ಫಲಿತಾಂಶದೊಂದಿಗೆ ಕಾಲೇಜಿಗೆ ಗೌರವ ತಂದಿರುವ ವಿದ್ಯಾರ್ಥಿಗಳಿಗೆ (Soundarya PU College) ಸೌಂದರ್ಯ ಸಂಯುಕ್ತ ಪಿಯು ಕಾಲೇಜಿನ ಸಂಸ್ಥಾಪಕ ಸೌಂದರ್ಯ ಪಿ. ಮಂಜಪ್ಪ, ವ್ಯವಸ್ಥಾಪಕ ನಿರ್ದೇಶಕರಾದ ಸುನಿತಾ ಮಂಜಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನ್ ಕುಮಾರ್, ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.