ಡಾ.ಗುರುರಾಜ ಪೋಶೆಟ್ಟಿಹಳ್ಳಿ -
ಸಂಸ್ಕೃತಿ ಚಿಂತಕರು - 9739369621
ಶ್ರೀ ರಾಮ ಪ್ರಣಾಮ
`ದೇವರು ಮತ್ತು ಮನುಷ್ಯನದು ಒಂದೇ ಮಾತು ಒಂದೇ ದಾರಿ’ ಎಂಬ ಗೂಢವನ್ನು ಅನುಭವಿಸುವ ಮನೋಧರ್ಮಕ್ಕೆ’ ಆಧ್ಯಾತ್ಮ ಎಂದು ಹೆಸರು.
ಅವತಾರಗಳಲ್ಲಿ ಪೂರ್ಣಪ್ರಮಾಣದ ಮಾನುಷಾವತಾರಗಳು ಪರಶುರಾಮಾವತಾರದಿಂದ ಮೊದಲಾಗಿವೆ. ಪರಶುರಾಮನಲ್ಲಿ ಒಂದು ಆವೇಶವನ್ನು ಕಾಣುತ್ತೇವೆ. ದುಷ್ಟದಮನದ ಆವೇಶ. ದುಷ್ಟದಮನವು ಸರಿ, ಆದರೆ ಅದೇ ಒಂದು ವ್ಯಸನವಾದಂತೆ ಕುಪಿತ ಭಾರ್ಗವನ ಕೈಯ ಕೂಡಲಿ ಇಪ್ಪತ್ತೊಂದು ಬಾರಿ ಮಸೆಯಿತು. ಯದು ಕೊಳಗಳು ನೆತ್ತರಿನಿಂದ ತುಂಬಿ ತುಳುಕಿದವಂತೆ ! ಇದು ಒಂದು ಯುಗವೇ ಕೊನೆಯಾಗುವ ಹೊತ್ತಿನಲ್ಲಿ ಕಾಣಿಸಿಕೊಳ್ಳುವ ಮನಸ್ಥಿತಿ ! ಯುಗಾಂತದ ಆವೇಶ ! ಆವೇಶದಲ್ಲಿ ರೌದ್ರರಸ !
ಆವೇಶವು ಸ್ವ ಪ್ರಜ್ಞೆಯ ಪೂರ್ವಸ್ಥಿತಿ. ಸ್ವ ಪ್ರಜ್ಞೆಯ ನಾಗರಿಕತೆಯ ಸ್ಥಿತಿ ಎಂದು ತಿಳಿದುಕೊಳ್ಳುವುವಾದರೆ ಆವೇಶವು ನಾಗರಿಕತೆಯ ಪೂರ್ವಸ್ಥಿತಿ. ಆದುದರಿಂದಲೇ ಮುಂದಿನ ಅವತಾರವಾದ ರಾಮಾವತಾರವು ಒಂದು ನಾಗರೀಕತೆಯೇ ದೇವರೆಂದು ಬಗೆದು ಆರಾಧಿಸುವ ಅವತಾರವಾಗಿ ಬಿಟ್ಟಿದೆ. ಇದು ಹೊಸಯುಗ ! ಯುಗಾರಂಭ ! ಯಗಾರಂಭದಲ್ಲಿ ಆದರ್ಶ. ಆವೇಶವಲ್ಲ. ದುಷ್ಟದಮನ ರಾಮಾವತಾರದಲ್ಲಿ ಇದೆ ಏನೋ ನಿಜ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಲೋಕ ಸಂಗ್ರಹವು ನಾಗರಿಕ ಮೌಲ್ಯ !
ಮಾತಿನೊಳಗಿನ ಗುಟ್ಟು ರಾಮನದು ಸ್ವ ಪ್ರಜ್ಞೆಯ ಮಾತು. ಕೃಷ್ಣನದು ಮುಕ್ತ ಪ್ರಜ್ಞೆಯ ಮಾತು. ಸ್ವ ಪ್ರಜ್ಞೆಯ ಹಾಗಿಲ್ಲದ ಮಾತು. ಈ ಎರಡು ಮಾತುಗಳು ಅವತಾರಗಳಲ್ಲಿನ ಪ್ರಜ್ಞಾ ವಿಕಾಸದ ಕತೆಯನ್ನು ಹೇಳುತ್ತವೆ. ಇವೆರಡನ್ನೂ ಅನ್ಯೋನ್ಯವಾಗಿ ಇಟ್ಟು ನೋಡಬೇಕು. ಕೃಷ್ಣನ ಮಾತುಗಳನ್ನು ಕೇಳಿದರೆ, ಅನುಭವದ ಜೊತೆಗೇ ಇರುವ ಮಾತಿಗೆ ಅನುಭವದ ಹಂಗೂ ಇಲ್ಲವೇನೋ ಅನ್ನಿಸುತ್ತದೆ ! ಅವನಿಗೆ ಅವನ ಹಂಗೂ ಇಲ್ಲವೇನೋ ! ಅವನೇ ಅವನಿಗಿಂತಲೂ ಮಿಗಿಲು ಎಂಬ ಬಣ್ಣನೆಗೆ ತಕ್ಕವನಾಗಬೇಕಾದರೆ ಅವನಿಗೆ ಅವನ ಹಂಗೂ ಇಲ್ಲ ; ಇರದಿರಬೇಕು. ವಿವೇಕಾನಂದರು ತನಗೆ ಮೋಕ್ಷ ಬೇಕಿಲ್ಲ ಎಂದರAತೆ. ಅದು ಮೋಕ್ಷ ಪಡೆದವರ ಮಾತು ! ಮೋಕ್ಷಕ್ಕೆ ಮೋಕ್ಷದ ಹಂಗೇನು?
ರಾಮನ ಮಾತುಗಳನ್ನು ಕೇಳಿದರೆ : ದೇವರು ತಾನು ಮನುಷ್ಯನೆಂದು ಹಠ ಹಿಡಿಯಬಲ್ಲ, ಮನುಷ್ಯನೆಂದು ಹಠ ಹಿಡಿಯಬಲ್ಲವನೇ ದೇವರು ! ತಾನು ಮನುಷ್ಯ ಮಾತ್ರದವನೆಂದು ದೇವರು ಮಾತ್ರ ಹಠ ಹಿಡಿಯಬಲ್ಲ ! ಇದು ಅವತಾರದ ನಿಜ ! ದೇವರಂತೆ, ಮನುಷ್ಯ ವಿರಹವನ್ನು ಅನುಭವಿಸಲಾರ ದೇವರಂತೆ, ಮನುಷ್ಯ ವಿರಹವನ್ನು ಅನುಭವಿಸಲಾರ. ದೇವರಂತೆ ಮನುಷ್ಯ ಲೋಕವನ್ನು ಮುಗ್ಧನಾಗಿ ಹಿಂಬಾಲಿಸಲಾರ. ದೇವರಂತೆ ಎಂದಾಗ ಮನುಷ್ಯನಾಗಿ ಬಂದ ದೇವರಂತೆ ಎಂದು.
ಒಂದು ರೀತಿಯಲ್ಲಿ ದೇವರು ; ಮನುಷ್ಯನಾಗುವುದೇ ಅವನೆ ಅವನಿಗಿಂತಲೂ ಮಿಗಲು ಅವನಿಗಿಂತ ಎಂಬುದನ್ನು ಸಾಧಿಸಲು, ಹೇಗೋ ಇದ್ದ ಮಾತಿಗೆ ಅನುಭವದ ಸಂಬAಧವನ್ನು ಜೋಡಿಸಲು. ರಾಮನನ್ನು ಸತ್ಯ ವಾಕ್ಯ ಎಂದು ವಾಲ್ಮೀಕಿ ಸುಮ್ಮನೆ ಕರೆದಿಲ್ಲ !
ಎರಡು ದಾರಿಗಳಿಲ್ಲ ; ಎರಡು ಹೆಜ್ಜೆಗಳಿಲ್ಲ, ಇರುವುದು ಒಂದೇ ದಾರಿ, ಒಂದೇ ಹೆಜ್ಜೆ ಇದು ಏರಿದವರಿಗೆ ಗೊತ್ತಿರಬೇಕು, ಗೊತ್ತಿರುವುದರಿಂದ ಅವನು ಏನನ್ನೂ ನಟಿಸಬಲ್ಲ, ನಟಿಸಿ ನಿಜವನ್ನು ಪಡೆಯಬಲ್ಲ, ಹೌದು ನಟಿಸಿ ನಿಜವನ್ನು ಪಡೆಯುವುದು ! ನಟಿಸಿ ನಿಜವನ್ನು ತೋರಿಸುವುದಲ್ಲ, ಮನುಷ್ಯರು ನಟಿಸಿ ನಿಜವನ್ನು ತೋರಿಸುವುದು. ದೇವರು ನಟಿಸಿ ನಿಜವನ್ನು ಪಡೆಯುವುದು.
ತುಳಸಿದಾಸರು `ಶ್ರೀರಾಮಚರಿತ ಮಾನಸ’ ಬರೆಯುವಾಗ ರಾಮನನ್ನು ಯಾವುದಕ್ಕೆ ಹೋಲಿಸಲಿ ಎಂಬ ಸಂದಿಗ್ಧಕ್ಕೆ ಸಿಲುಕುತ್ತಾರೆ. ಸಂದಿಗ್ಧದಿAದ ಹೊರಬರಲಾಗದೆ ಚಡಪಡಿಸುತ್ತಿದ್ದಾಗ ಕೊನೆಗೆ ಉತ್ತರ ಸಿಗುತ್ತದೆ. ಏನೆಂದರೆ, ರಾಮನಿಗೆ ರಾಮನೇ ಸಾಟಿ.
ಏಳರ ನಂಟು: ಚೈತ್ರ ಶುದ್ಧ ನವಮಿಯಂದು ಶ್ರೀರಾಮನ ಜನ್ಮದಿನವಾಯಿತು. ರಾಮ ಎನ್ನುವ ಎರಡಕ್ಷರಕ್ಕೂ ಏಳರ ಸಂಖ್ಯೆಗೂ ನಂಡಿದೆ. ‘ಕಟಪಯ’ ಸೂತ್ರದ ಪ್ರಕಾರ ‘ರಾಮ’ ಎನ್ನುವ ಸಂಖ್ಯೆ ಏಳನ್ನು ಸೂಚಿಸುತ್ತದೆ. ‘ಯ’ ವರ್ಗದ ಎರಡನೆಯ ಅಕ್ಷರವೇ ‘ರ’ಪವರ್ಗದ ಐದನೇ ಅಕ್ಷರನೇ’ಮ’. ಈ ಎರಡೂ ಸಂಖ್ಯೆಗಳ ಮೊತ್ತ ಏಳು. ದಶಾವತಾರಗಳಲ್ಲಿ ರಾಮಾವತಾರ ಏಳನೇ ಅವತಾರ. ವಾಲ್ಮೀಕಿ ರಾಮಾಯಣದಲ್ಲಿ ಒಟ್ಟು 7 ಕಾಂಡಗಳಿವೆ. ಶ್ರೀರಾಮ ದೇವರ ಜನನ ಏಳನೇ ನಕ್ಷತ್ರ. ‘ಪುನರ್ವಸು’ ಅಂದರೆ ಜ್ಯೋತಿಷ್ಯ ಶಾಸ್ತçದ ಪ್ರಕಾರ ಅಂದು ಅಯೋಧ್ಯಾನಗರದ ಆಗಸದಲ್ಲಿ ಶುಕ್ಲಪಕ್ಷದ ನವಮಿ ತಿಥಿಯು ಚಂದ್ರಮAಡಲದ ಪುನರ್ವಸು ನಕ್ಷತ್ರದ ದಿಕ್ಕಿಗೆ ಮುಖಮಾಡಿ ಭೂಪ್ರದಕ್ಷಿಣೆಯಲ್ಲಿ ನಿರತವಾಗಿತ್ತು.
ವಾಲ್ಮೀಕಿ ರಾಮಾಯಣದ ಬಾಲಕಾಂಡದ 19ನೇ ಸರ್ಗವನ್ನು ಗಮನಿಸಿದಾಗ ಮತ್ತೊಂದು ಅಂಶ ಸ್ಪಷ್ಟವಾಗುತ್ತದೆ. ಅದರಲ್ಲಿ ವಾಲ್ಮೀಕಿ ಮಹರ್ಷಿಗಳು 8ನೇ ಮತ್ತು 9ನೇ ಶ್ಲೋಕದಲ್ಲಿ ಶ್ರೀರಾಮಚಂದ್ರನ ಜನನದ ವಿಚಾರವನ್ನು ಹೇಳುತ್ತಾರೆ. ಅದರಂತೆ ಶ್ರೀರಾಮ ಚೈತ್ರಮಾಸದ ನವಮಿ ತಿಥಿಯಂದು ಜನಿಸುತ್ತಾನೆ. ಆ ಸಂದರ್ಭದಲ್ಲಿದ್ದ ವಿವಿಧ ಗ್ರಹಗಳ ಸ್ಥಾನದ ಉಲ್ಲೇಖವನ್ನು ಹೇಳುತ್ತಾರೆ. ಒಂದು ಲೆಕ್ಕಾಚಾರದಂತೆ, ಶ್ರೀರಾಮಚಂದ್ರನು ಹುಟ್ಟಿದ ಸಂದರ್ಭದಲ್ಲಿ ಅವನ ಜಾತಕದಲ್ಲಿ ಗಜಕೇಸರಿ ಯೋಗವಿತ್ತೆಂಬುದು ಕೆಲವರ ಅಭಿಪ್ರಾಯ.
ಪುನರ್ವಸು ನಕ್ಷತ್ರ : ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಪುನರ್ವಸು ನಕ್ಷತ್ರದ ಉಲ್ಲೇಖವಿದೆ. ಸೋಜಿಗದ ಸಂಗತಿಯೆAದರೆ, ವಾಲ್ಮೀಕಿಯವರು ರಾಮನ ಜನ್ಮ ನಕ್ಷತ್ರದ ಉಲ್ಲೇಖ ಮಾಡುವಾಗ, ಪುನರ್ವಸು ನಕ್ಷತ್ರದ ಪ್ರಯೋಗ ಮಾಡಿಲ್ಲ. ಬದಲಿಗೆ ಅದಿತಿನಕ್ಷತ್ರದ ಹೆಸರನ್ನು ಪ್ರಯೋಗಿಸಿದ್ದಾರೆ. ಚೈತ್ರ ನವಮಿಗೆ ತಿಥೌನಕ್ಷತ್ರೇ ಅದಿತಿ ದೈವತೇ ಎನ್ನುತ್ತಾರೆ. ಆದರೆ ಭಾಗವತಾದಿ ಪುರಾಣಗಳಲ್ಲಿ ಮತ್ತು ಶ್ರೀ ನಾರಾಯಣ ಪಂಡಿತಾಚರ‍್ಯ ವಿರಚಿತ ಸಂಗ್ರಹ ರಾಮಾಯಣದಲ್ಲಿ ಪುನರ್ವಸು ಶಬ್ದ ಪ್ರಯೋಗವಿದೆ. ನಕ್ಷತ್ರ ನಿಘಂಟುನಿವ ಪ್ರಕಾರ, ಪುನರ್ವಸು ನಕ್ಷತ್ರಕ್ಕೆ ಮೂರು ಸಮಾನಾರ್ಥಕ ಪದಗಳಿವೆ. ಅವೆಂದರೆ ಅದಿತಿ, ದೇವಮಾತಾ ಮತ್ತು ಆದಿತ್ಯ, ಪಾಶ್ಚಿಮಾತ್ಯ ಖಗೋಳಜ್ಞರ ಸಂಶೋಧನೆಯoತೆ ಪುನರ್ವಸು ಎಂಬ ಜೋಡಿ ನಕ್ಷತ್ರಗಳು ಸರ‍್ಯಮಂಡಲದ ವ್ಯಾಸಕ್ಕಿಂತ ಎಂಟುಪಟ್ಟು ದೊಡ್ಡದು. ಸೂರ್ಯ ಮಂಡಲದ ವ್ಯಾಸ ಸುಮಾರು 14ಲಕ್ಷ ಕಿ.ಮೀ ಇದ್ದರೆ ಪುನರ್ವಸುವಿನ ವ್ಯಾಸ 118 ಲಕ್ಷ ಮಿ.ಮೀ ಪುನರ್ವಸು ನಕ್ಷತ್ರದ ಚಿಹ್ನೆ ಬಾಣ ಮತ್ತು ಧನಸ್ಸು.
ಉತ್ತಮೋತ್ತಮ ದಾಸ ಹನುಮಂತ ಗಾಢ ಆಲಿಂಗನವೇ ಪ್ರತಿಫಲ
ಹನುಮಂತ ಅತ್ಯುದ್ಭುತವಾದ, ದಿವ್ಯವಾದ ಸೇವಾಕಾರ್ಯವನ್ನು ಮಾಡಿ ಶ್ರೀರಾಮನ ಪಾದಗಳಿಗೆ ಸಮರ್ಪಣೆ ಮಾಡಿದ್ದಾರೆ. ಹಾರಿ ಬಂದದ್ದು ದೊಡ್ಡದಲ್ಲ, ಆದರೆ ಬ್ರಹ್ಮದೇವರಿಗೆ ಸಮರಾಗಿ, ರುದ್ರಾದಿ ದೇವತೆಗಳಿಗಿಂತ ಉತ್ತಮರಾಗಿ, ಲಂಕಾಪ್ರವೇಶ ಮಾಡಿ, ಅಸುರರನ್ನು ಸಂಹರಿಸಿ, ಸೀತಾಮಾತೆಗೆ ಉಂಗುರವನ್ನಿತ್ತು ಮತ್ತೆ ತಿರುಗಿ ಬಂದ ಹನುಮಂತನಿಗೆ ತಾನು ಪ್ರತಿಯಾಗಿ ಏನು ಕೊಡಲು ಸಾಧ್ಯ? ಎಂಬುದಾಗಿ ಶ್ರೀರಾಮಚಂದ್ರ ವಿಚಾರ ಮಾಡುತ್ತಿದ್ದಾನೆ. ಭಗವಂತ ನಟನೆ ಮಾಡುತ್ತ ಪ್ರೀತಿಯಿಂದ ಅನುಗ್ರಹ ಬುದ್ಧಿಯಿಂದ ವಾತ್ಸಲ್ಯದಿಂದ ಗಾಢವಾಗಿ ಆಲಿಂಗನವನ್ನು ಮಾಡಿಕೊಂಡನು.
ಚಾಣೂರ, ಮುಷ್ಠಿಕರು ಕೃಷ್ಣನ ಜೊತೆಯಲ್ಲಿ ಮಲ್ಲಯುದ್ಧ ಮಾಡುವಾಗ ಅವರಿಗೂ ಬೇಕಾದಷ್ಟು ಭಗವಂತನ ಅಂಗಸ್ಪರ್ಶವಾಗಿದೆ. ಆದರೆ ಆ ಸ್ಪರ್ಶವು ನಿಗ್ರಹದಿಂದ ಮಾಡಿದ್ದು, ವಾತ್ಸಲ್ಯದಿಂದ ಅನುಗ್ರಹ ಬುದ್ಧಿಯಿಂದ ಭಗವಂತನ ಅಂಗಸ್ಪರ್ಶವಾದರೆ ಅದಕ್ಕಿಂತ ದೊಡ್ಡಭಾಗ್ಯ ಇನ್ನಾವುದಿದೆ? ಹನುಮಂತನಿಗೆ ಭಗವಂತ ಸಕಲಜೀವರಿಗೆ, ಸಕಲಪಶುಗಳಿಗೆ, ಸಕಲ ಲೋಕಗಳಿಗೆ, ಸಕಲ ಸಂಪತ್ತುಗಳಿಗೆ ಆಶ್ರಯವಾದ ತನ್ನ ದೇಹದ ಆಲಿಂಗನ ಕೊಟ್ಟ ಎಂದರೆ ಸಕಲಜಗದ್ವೆöÊಶ್ಯರ್ಯವನ್ನು ಸಮಸ್ತ ಜಗದ್ಗುರು ತತ್ತ÷್ವವನ್ನು ಜಗತ್ಸಾ÷್ವಮಿತ್ವವನ್ನು ಹನುಮಂತನಿಗೆ ಕರುಣಿಸಿದ.
ಭಕ್ತನ ಅಂತರoಗ ಪ್ರವೃತ್ತಿಯಂತೆ, ಅವನಿಗೆ ಪ್ರಾತಃಕಾಲದಲ್ಲಿ ದೈವವಾಗಿದ್ದ ಶ್ರೀರಾಮನು ಮಧ್ಯಾಹ್ನ ಧರ್ಮಸಂಕಟದಲ್ಲಿ ನಡವಳಿಕೆಗೆ ಗುರುವಾಗಬಹುದು ; ರಾತ್ರಿ ಏಕಾಂತ ಧ್ಯಾನದಲ್ಲಿ ಪರಬ್ರಹ್ಮ ಪ್ರತೀಕವಾಗಬಹುದು.